Gokarna| ಅಬ್ಬರದ ಮಳೆಗೆ ಕುಸಿದ ಧರೆ ಮಣ್ಣು

Gokarna landslide Gokarna landslide

Gokarna News: ಕುಮಟಾ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರ ಪರಿಣಾಮ ಗೋಕರ್ಣದ ಏಕಮುಖ ಸಂಚಾರ ವ್ಯವಸ್ಥೆಯ ಊರಿನಿಂದ ಹೊರ ಹೋಗುವ ಮುಖ್ಯ ಮಾರ್ಗದ ತಾರಮಕ್ಕಿ ಸರ್ಕಾರಿ ಶಾಲೆಯ ಹತ್ತಿರ ಧರೆ ಕುಸಿದಿದೆ.

ಧರೆ ಕುಸಿತದಿಂದ ಮರ ಹಾಗೂ ಮಣ್ಣಿನ ರಾಶಿ ರಸ್ತೆಯಲ್ಲಿ ಬಿದ್ದು ಸಂಚಾರಕ್ಕೆ ತೊಡಕು ಉಂಟಾಗಿತ್ತು. ಸ್ಥಳಕ್ಕೆ ಗ್ರಾ. ಪಂ. ಅಧ್ಯಕ್ಷೆ ಸುಮನಾ ಗೌಡ ಭೇಟಿ ನೀಡಿ ಮಣ್ಣು ತೆರವುಗೊಳಿಸಲು ಸೂಚಿಸಿದ್ದಾರೆ. ನಿತ್ಯ ಸಾವಿರಾರು ವಾಹನ ಸಂಚರಿಸುವ ಈ ಮಾರ್ಗದಲ್ಲಿ ಸೂಕ್ತ ಸರಕ್ಷತಾ ಕ್ರಮ ಕೈಗೊಳ್ಳಬೇಕಿದೆ.

ಮಳೆ ಅಬ್ಬರ ಪ್ರವಾಸಿಗರು ಹೈರಾಣ

Advertisement

ಕಳೆದ ನಾಲ್ಕು ದಿನದಿಂದ ಕಡಿಮೆಯಾಗಿದ್ದ ಮಳೆಯ ಅಬ್ಬರ ಶನಿವಾರ ಮುಂಜಾನೆಯಿಂದ ಮತ್ತೆ ಪ್ರಾರಂಭವಾಗಿದೆ.

ಪ್ರವಾಸಿ ತಾಣದಲ್ಲಿ ( tourism place) ವಾರಾಂತ್ಯದ ರಜೆಗೆ ಸಾಕಷ್ಟು ಪ್ರವಾಸಿಗರು ಆಗಮಿಸಿದ್ದು ಭಾರಿ ಮಳೆಗೆ ಕಂಗಾಲಾಗಿದ್ದಾರೆ.

ಎಂದಿನಂತೆ ಇಲ್ಲಿನ ಮಹಾಗಣಪತಿ ಮಂದಿರದ ಮುಂಭಾಗದಿಂದ ರಥಬೀದಿಯವರೆಗಿನ ರಸ್ತೆಯಲ್ಲಿ ನೀರು ನಿಂತು ಸಮಸ್ಯೆ ಯಾಗುತ್ತಿದೆ.

ಇನ್ನು ಮೀನು ಮಾರುಕಟ್ಟೆ ಬಳಿ ಕೆರೆಯಾಗ ಮಾರ್ಪಟ್ಟಿತ್ತು. ಮಳೆ ಕೆಲ ದಿನ ಬಿಡುವು ನೀಡಿದರು ಸಹ ಚರಂಡಿ ಸ್ವಚ್ಚಗೊಳಿಸಿ ನೀರು ಹೋಗುವಂತೆ ಸಂಬಧಿಸಿದ ಇಲಾಖೆ ಮಾಡದ ಕಾರಣ ಸಮಸ್ಯೆ ಹಾಗೆ ಮುಂದುವರಿದಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement