Kumta police gokarna police

KUMTA |ಧಾರೇಶ್ವರ ದೇವಸ್ಥಾನ ಕಳ್ಳತನ ಮಾಡಿ ಸಿಕ್ಕಿಬಿದ್ದ ಕೊಲೆ ಆರೋಪಿ.

86

KUMTA NEWS:– ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಧಾರೇಶ್ವರದ ಗೋರೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಕುಮಟಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಕೋಲ ತಾಲೂಕಿನ ಬೆಳಂಬರದ ವಾಸಿ ವಿವೇಕಾದ ಕಾರ್ವಿ ,ಈತನ ಸ್ನೇಹಿತರಾದ ಹೊನ್ನಾವರ ತಾಲೂಕಿನ ಈಶ್ವರ ಅಮವಾಸ್ಯೆ ಮುಕ್ರಿ ಬಂಧಿತ ಆರೋಪಿಗಳಾಗಿದ್ದಾರೆ,

ದೇವಸ್ಥಾನದಲ್ಲಿ 1.27 ಲಕ್ಷ ಮೌಲ್ಯದ ಚಿನ್ನ ಹಣವನ್ನು ಜೂನ್ 1 ರಂದು ದೋಚಿ ಪರಾರಿಯಾಗಿದ್ದರು. ಇದಲ್ಲದೇ ಅಲ್ಲಿಯೇ ಇದ್ದ ಸಿ.ಸಿ ಕ್ಯಾಮರಾ ಸಹ ಕದ್ದೊಯ್ದಿದ್ದು ಇತರೆಡೆ ಇದ್ದ ಸಿಸಿ ಕ್ಯಾಮರಾ ಪರಿಶೀಲಿಸಿ ಆರೋಪಗಳನ್ನು ದಸ್ತಗಿರಿ ಮಾಡಲಾಗಿದೆ.

ಇನ್ನು ವಿವೇಕಾನಂದ ಕಾರ್ವಿ ವಿರುದ್ಧ ಅಂಕೋಲ ಠಾಣೆಯಲ್ಲಿ ಕೊಲೆ ಹಾಗೂ ದೇವಸ್ಥಾನ ಕಳ್ಳತನ ಪ್ರಕರಣ ಗಳಿದ್ದು, ತನಿಖೆ ನಡೆಯುತ್ತಿದೆ. ಸದ್ಯ ಈತನಿಂದ 86 ಸಾವಿರ ಮೌಲ್ಯದ ಚಿನ್ನ,35 ಸಾವಿರ ಹಣ ವಶಕ್ಕೆ ಪಡೆಯಲಾಗಿದ್ದು ಆರೋಪಗಳನ್ನು 15 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!