Haliyala| ಕೈದಿ ಬಳಿ ಲಂಚ ಕೇಳಿ ಲೋಕಾಯುಕ್ತ ಬಲಗೆ ಬಿದ್ದ ಹಳಿಯಾಳ ಜೈಲಿನ ಜೈಲರ್

Haliyala:A jailer from Haliyal sub-jail in Uttara Kannada district was caught by Lokayukta officials for demanding a ₹60,000 bribe from an inmate to release government-sanctioned wages. The accused has been detained and shifted.
Haliyal sub-jail jailer caught by Lokayukta officials for demanding bribe from inmate to release government wages in Uttara Kannada district. Haliyal sub-jail jailer caught by Lokayukta officials for demanding bribe from inmate to release government wages in Uttara Kannada district.
Haliyal sub-jail jailer caught by Lokayukta officials for demanding bribe from inmate to release government wages in Uttara Kannada district.

Haliyala| ಕೈದಿ ಬಳಿ ಲಂಚ ಕೇಳಿ ಲೋಕಾಯುಕ್ತ ಬಲಗೆ ಬಿದ್ದ ಹಳಿಯಾಳ ಜೈಲಿನ ಜೈಲರ್

 

ಕೈದಿಗೆ ಸರ್ಕಾರದಿಂದ ಬಂದ ಹಣ ನೀಡಲು 60 ಸಾವಿರ ಬೇಡಿಕೆ ಇಟ್ಟಿದ್ದ ಜೈಲರ್..

Advertisement

Haliyala/ಹಳಿಯಾಳ: ಕೈದಿಯೊಬ್ಬನಿಗೆ ಸರ್ಕಾರದಿಂದ ಬಂದ ಹಣ ನೀಡಲು 60 ಸಾವಿರ ಡಿಮ್ಯಾಂಡ್ ಇಟ್ಟಿದ್ದ ಹಳಿಯಾಳ(haliyala) ಸಬ್ ಜೈಲಿನ ಜೈಲರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಹಳಿಯಾಳ ಸಬ್ ಜೈಲಿನ ಜೈಲರ್ ಕಲ್ಲಪ್ಪ ಗಸ್ತಿ 2022 ರಲ್ಲಿ ಕೊಲೆ ಪ್ರಕರಣದಲ್ಲಿ ಎರಡು ವರ್ಷ ಜೈಲಿನಲ್ಲಿದ್ದ ಹಳಿಯಾಳದ  ಯಡೋಗಾ ಗ್ರಾಮದ ರಾಜ್ ಕುಮಾರ್ ಎಂಬಾತನಿಂದ ಜೈಲಿನಲ್ಲಿ ಕೂಲಿ ಮಾಡಿದ ಹಣ ನೀಡಲು 60 ಸಾವಿರ ರೂಪಾಯಿ ಲಂಚ ಕೇಳಿದ್ದನು. ಜೈಲಿನಲ್ಲಿ ಕೆಲಸ ಮಾಡಿದ್ದ ರಾಜ್ ಕುಮಾರ್ ಗೆ ಸರ್ಕಾರದಿಂದ 1.34 ಲಕ್ಷ ಹಣ ಹಾಗೂ 45 ಸಾವಿರ ಹಣ ಎರಡು ಕಂತಿನಲ್ಲಿ ಬಿಡುಗಡೆಯಾಗಿದ್ದು ಈ ಹಣ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು ಸತಾಯಿಸಿದ್ದನು.

ಇದನ್ನೂ ಓದಿ:-Haliyala| ನಾಲ್ಕು ದಿನದಲ್ಲಿ 16 ಕಡೆ ಕಳ್ಳತನ ದಾಖಲಾಗಿದ್ದು ಎರಡು ಪ್ರಕರಣ!

ಮುಂಗಡವಾಗಿ ಹತ್ತು ಸಾವಿರ ಹಣವನ್ನು ಧಾರವಾಡದ ಮಹಿಳೆಯೊಬ್ಬರ ಹೆಸರಿನಲ್ಲಿ ಫೋನ್ ಪೇಗೆ ಹಾಕಿಸಿಕೊಂಡಿದ್ದು, ನಂತರ ಅಲರ್ಟ್ ಆಗಿ ಉಳಿದ ಹಣ ಪಡೆಯಲು ಬೇರೆ ಬೇರೆ ಕಡೆ ಬರುವಂತೆ ಜೈಲರ್ ದೂರುದಾರ ರಾಜಕುಮಾರ್ ಗೆ ತಿಳಿಸಿದ್ದನು. ಕಾರವಾರ ಲೋಕಾಯುಕ್ತ ಡಿ.ವೈ ಎಸ್ ಪಿ ಧನ್ಯಾನಾಯಕ್ ಹಾಗೂ ಇನ್ಸಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದ ತಂಡ ದಾಳಿ ನಡೆಸಿ ಕಲ್ಲಪ್ಪ ಗಸ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಇದನ್ನೂ ಓದಿ:-Haliyala| ಸಮಯಕ್ಕೆ ಸರಿಯಾಗಿ ಬಾರದ ಅಂಬುಲೆನ್ಸ್ |ಮಾಜಿ ಯೋಧ ಸಾವು

ಕಲ್ಲಪ್ಪ ಗಸ್ತಿ ಫೋನ್ ಪೇ ಮೂಲಕ ಹಣ ಪಡೆದಿರುವುದು ಖಚಿತವಾದ ಹಿನ್ನಲೆಯಲ್ಲಿ ತಕ್ಷಣ ಆತನನ್ನ ಬೆಳಗಾವಿ ಜೈಲಿಗೆ ವರ್ಗಾವಣೆ ಮಾಡಲಾಗಿದ್ದು ಇಲಾಖೆ ಅಮಾನತು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸಧ್ಯ ಉಪ ಕಾರಾಗೃಹದ ಅಧೀಕ್ಷಕನಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement