Sirsi KSRTC | ಶೌಚಾಲಯಕ್ಕೆ ನಿಗದಿಗಿಂತ ದುಪ್ಪಟ್ಟು ದರ! ಪ್ರಶ್ನಿಸಿದ ವಿದ್ಯಾರ್ಥಿಗೆ ಹಲ್ಲೆ | ಮೊಬೈಲ್ ಒಡೆದು ಗೂಂಡಾಗಿರಿ
ಕಾರವಾರ/ಶಿರಸಿ:- ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ನೀಡುವ ದೃಷ್ಟಿಯಿಂದ ಪ್ರತಿ KSRTC ಬಸ್ ನಿಲ್ದಾಣದಲ್ಲಿ ಸ್ಥಳೀಯ ಆಡಳಿತ ಹಾಗೂ ಕೆ.ಎಸ್.ಆರ್.ಟಿಸಿ ನಿಗಮದಿಂದ ಶೌಚಾಲಯ ವ್ಯವಸ್ತೆ ಮಾಡಿರುತ್ತಾರೆ.
ಇದನ್ನೂ ಓದಿ:-Sirsi| ಹೆಂಡತಿ ಪರಸಂಗ -ಎಂಟು ವರ್ಷದಿಂದ ಮೌನ ವಹಿಸಿದ ಗಂಡನ ಹತ್ಯೆ
ಕೆಲವು ಕಡೆ ಸ್ಥಳೀಯ ಪುರಸಭೆ,ನಗರಸಭೆ ಯಿಂದ ಟೆಂಡರ್ ನೀಡಿ ಅತೀ ಕಡಿಮೆ ದರ ಅಥವಾ ಉಚಿತ ಶೌಚಾಲಯ ವ್ಯವಸ್ತೆ ಮಾಡಿರುತ್ತಾರೆ. ಇದಲ್ಲದೇ KSRTC ನಿಗಮದಿಂದಲೂ ಶೌಚಾಲಯ ವ್ಯವಸ್ತೆ ಕಲ್ಪಿಸಿರುತ್ತಾರೆ.
ಇದನ್ನೂ ಓದಿ:-Uttara kannada|ಮಳೆ ಬಂದ್ರೆ NWKSRTC ಬಸ್ ನಲ್ಲಿ ಜಲಪಾತ ಸೃಷ್ಟಿ!ರೈನಿಂಗ್ ಡ್ಯಾನ್ಸ್ ಮಾಡೋದೊಂದೇ ಬಾಕಿ! ವಿಡಿಯೋ ನೋಡಿ
ಈ ರೀತಿ ವ್ಯವಸ್ಥೆ ಕಲ್ಪಿಸಿದಾಗ KSRTCಯ ಪ್ರಸ್ತುತ ಟೆಂಡರ್ ದಾಖಲೆಗಳಲ್ಲಿ “Pay and Use Toilets” ಹಾಗೂ “Free Urinal Blocks” ಅನ್ನು ಪ್ರತ್ಯೇಕವಾಗಿ ನಿರ್ವಹಿಸುವ ವ್ಯವಸ್ಥೆ ಮಾಡಿದ್ದು ,ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯ 2024ರ ಅಧಿಕೃತ ಟೆಂಡರ್ ದಾಖಲೆಯಲ್ಲಿ, ಶೌಚಾಲಯದ ಪ್ರವೇಶದ್ವಾರದಲ್ಲಿ ಶೌಚಾಲಯ ಬಳಕೆದಾರರಿಂದ ಶುಲ್ಕ ಪಡೆಯುವ ದರವನ್ನು ಪ್ರದರ್ಶಿಸಬೇಕು ಮತ್ತು Urinal ಬಳಕೆ ಉಚಿತವಾಗಿರಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗಿರುವಾಗ ಬಹುತೇಕ ಎಲ್ಲಾ ಕಡೆ ಹೆಚ್ಚಿನ ದರ ಪಡೆಯಲಾಗುತ್ತಿದೆ.
ನಿಗದಿಗಿಂತ ದುಪ್ಪಟ್ಟು ದರ- ಪ್ರಶ್ನೆ ಮಾಡಿದ ವಿದ್ಯಾರ್ಥಿಗೆ ಹಲ್ಲೆ .
ವಿಡಿಯೋ ನೋಡಿ:-
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ KSRTC ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋದ ವಿದ್ಯಾರ್ಥಿಯು KSRTC ಇಲಾಖೆಯಿಂದ ಹಾಕಿದ ನಾಮಫಲಕದಲ್ಲಿ ಇರುವಂತೆ ಮೂತ್ರ ವಿಸರ್ಜನೆಗೆ ನಿಗದಿಯಾದ ಒಂದು ರೂಪಾಯಿಯನ್ನು ನೀಡಿದ್ದಾನೆ.ಆದರೇ ಒಂದು ರುಪಾಯಿ ಸ್ವೀಕರಿಸದೇ ಐದು ರುಪಾಯಿ ಕೇಳಿದ್ದಾನೆ. ಮೂತ್ರ ವಿಸರ್ಜನೆಗೆ ಐದು ರುಪಾಯಿ, ಮಲ ವಿಸರ್ಜನೆಗೆ 10 ರೂ ನೀಡಬೇಕು ಎಂದು ನಿಗದಿಗಿಂತ ಹೆಚ್ಚಿನ ಹಣ ಕೇಳಿದ್ದಾನೆ.ಅದಕ್ಕೆ ಆ ವಿದ್ಯಾರ್ಥಿ ಪ್ರಶ್ನೆ ಮಾಡಿದಾಗ ಹಲ್ಲೆ ಮಾಡಲಾಗಿದೆ. ನಂತರ ಆ ವಿದ್ಯಾರ್ಥಿ ತನ್ನ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದಾಗ ಆತನ ಮೊಬೈಲ್ ಕಸಿದು ಒಡೆದುಹಾಕಲಾಗಿದ್ದು ,ಗೂಂಡಾಗಿರಿ ಮಾಡಲಾಗಿದೆ. ಇನ್ನು ಈ ವಿಷಯ ಸಂಬಂಧ ವಿದ್ಯಾರ್ಥಿಯು ವಿಡಿಯೋ ಮಾಡಿ ತನಗಾದ ಸಮಸ್ಯೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಶಿರಸಿ ನಗರ ಠಾಣೆಯಲ್ಲಿ ದೂರು ಕೊಡುವುದಾಗಿ ತಿಳಿಸಿದ್ದಾನೆ.
ಒಂದೊಂದು ಕಡೆ ಒಂದೊಂದು ದರ ಫ್ರೀ ಇದ್ರೂ ಶೌಚ ಮಾಡುವ ಹಾಗಿಲ್ಲ!.
ಉತ್ತರ ಕನ್ನಡ ಜಿಲ್ಲೆಯ KSRTC ಬಸ್ ನಿಲ್ದಾಣದ ಶೌಚಾಲಯದ ಟೆಂಡರ್ ಗಳನ್ನ ಓರ್ವ ವ್ಯಕ್ತಿಗೆ ನೀಡಲಾಗಿದೆ. ಆತ ಯುಪಿ.ಬಿಹಾರದ ಯುವಕರನ್ನು ಇಟ್ಟು ಶೌಚಾಲಯದ ಕೆಲಸ ಮಾಡಿಸುತಿದ್ದಾನೆ. ಆದರೇ ಶೌಚಾಲಯದಲ್ಲಿ ನಿಗಮ ನಿಗದಿ ಮಾಡಿದ ಹಣ ಪಡೆಯುವುದೇ ಇಲ್ಲ. ಬದಲಿಗೆ ತಮಗೆ ತೋಚಿದಷ್ಟು ಹಣ ಪಡೆಯಲಾಗುತ್ತಿದೆ. ಕೆಲವು ನಿಲ್ದಾಣದಲ್ಲಿ KSRTC ನಿಗಮದಿಂದ ಹಾಕಿರುವ ಬೋರ್ಡ ಸಹ ತೆಗೆದುಹಾಕಲಾಗಿದೆ. ಮೂತ್ರ ವಿಸರ್ಜನೆಗೆ 5 ರಿಂದ ₹10 , ಮಲವಿಸರ್ಜನೆಗೆ ₹25 ರ ವೆರೆಗೂ ಪಡೆಯಲಾಗುತ್ತಿದೆ.
ಇದನ್ನೂ ಓದಿ:-KSRTC ಬಸ್‌ಗಳ ಲೈವ್ ಲೊಕೇಶನ್ ನಿಮ್ಮ ಮೊಬೈಲ್‌ನಲ್ಲಿ |ಶೀಘ್ರವೇ VTMS ಜಾರಿ
ಕೆಲವರು ಪ್ರಶ್ನೆ ಮಾಡಿದರೆ ಹಲ್ಲೆ ಮಾಡುವುದು ,ಶೌಚಕ್ಕೆ ಅಡ್ಡಿ ಪಡಿಸುವ ಕೆಲಸ ನಡೆಯುತ್ತಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಹೆಚ್ಚು ಹಣ ಪಡೆಯಲಿ ಹಾಗಂತ ಶೌಚಾಲಯವನ್ನು ಚನ್ನಾಗಿ ನಿರ್ವಹಣೆ ಮಾಡುತ್ತಾರೆಯೇ ,ಖಂಡಿತಾ ಇಲ್ಲ, ಹೊಲಸು ,ದುರ್ವಾಸನೆ ,ಗಲೀಜು ಇರುತ್ತದೆ. ಶೌಚಕ್ಕೆ ಹೋದವರು ಕಿರಿಕ್ ಮಾಡಿದ್ರೆ ಮಾತ್ರ ಕ್ಲೀನ್ ಮಾಡಿ ಕೊಡುತ್ತಾರೆ. ಹೀಗಿರುವಾಗ ಹೆಚ್ಚಿನ ಹಣ ಕೊಟ್ಟು ಹೋಗಿವುದು ಏಕೆ? ಬಸ್ ನಿಲ್ದಾಣದ ಪಕ್ಕದಲ್ಲೇ ಗೋಡೆಗೆ ಮೂತ್ರ ವಿಸರ್ಜನೆಯೇ ಲೇಸು ಎಂದು ಹಲವರು ಹಾಗೆಯೇ ಮಾಡುತಿದ್ದು ,ನಿಲ್ದಾಣದ ಬಹುತೇಕ ಭಾಗ ಮೀತ್ರದ ದುರ್ವಾಸನೆ ಯಿಂದ ಕೂಡಿರುತ್ತವೆ. ಇನ್ನು ನಿಲ್ದಾಣದಲ್ಲಿ ಕ್ಲೀನ್ ಮಾಡಲು ಸಿಬ್ಬಂದಿ ಇದ್ರೂ ಬೆಳಗ್ಗೆ ಒಂದುಬಾರಿ ಸ್ವಚ್ಛ ಮಾಡಿದ್ರೆ ಮುಗೀತು ಎನ್ನುತ್ತಾರೆ KSRTC ಸಿಬ್ಬಂದಿ.
ಈ ರೀತಿಯ ಪರಿಸ್ಥಿತಿ ಜಿಲ್ಲೆಯ ಎಲ್ಲಾ ನಿಲ್ದಾಣದಲ್ಲಿದೆ. ಹೀಗಿರುವಾಗ ಸ್ವಚ್ಛತೆ ಬಗ್ಗೆ ಪಾಟ ಮಾಡುವುದು,ದಂಡ ವಿಧಿಸುವುದರಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.







