Sirsi| ಹೆಂಡತಿ ಪರಸಂಗ -ಎಂಟು ವರ್ಷದಿಂದ ಮೌನ ವಹಿಸಿದ ಗಂಡನ ಹತ್ಯೆ

Sirsi:ಶಿರಸಿ ತಾಲೂಕಿನ ಶಿಂಗನಮನೆ ಗ್ರಾಮದಲ್ಲಿ ಪತ್ನಿಯ ಅನೈತಿಕ ಸಂಬಂಧದ ಹಿನ್ನೆಲೆ ಗಂಡನ ಭೀಕರ ಹತ್ಯೆ. ಕೇವಲ ಎರಡು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಶಿರಸಿ ಪೊಲೀಸರು.
ಶಿರಸಿ ಶಿಂಗನಮನೆ ಗ್ರಾಮದಲ್ಲಿ ಅನೈತಿಕ ಸಂಬಂಧದ ಹಿನ್ನೆಲೆ ಕೊಲೆಯಾದ ಪರಮೇಶ್ವರ ಬಾಬು ನಾಯ್ಕ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತನಿಖೆಯ ಸಾಂದರ್ಭಿಕ ಚಿತ್ರ. ಶಿರಸಿ ಶಿಂಗನಮನೆ ಗ್ರಾಮದಲ್ಲಿ ಅನೈತಿಕ ಸಂಬಂಧದ ಹಿನ್ನೆಲೆ ಕೊಲೆಯಾದ ಪರಮೇಶ್ವರ ಬಾಬು ನಾಯ್ಕ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತನಿಖೆಯ ಸಾಂದರ್ಭಿಕ ಚಿತ್ರ.

Sirsi| ಹೆಂಡತಿ ಪರಸಂಗ -ಎಂಟು ವರ್ಷದಿಂದ ಮೌನ ವಹಿಸಿದ ಗಂಡನ ಹತ್ಯೆ

 

ಕಾರವಾರ :- ಆತನಿಗೆ ಪಕ್ಕದ ಮನೆಯಲ್ಲೇ ಇದ್ದ ಅತ್ತಿಗೆ ಜೊತೆ 8 ವರ್ಷದ ಆಕ್ರಮ ಸಂಬಂಧ ಇತ್ತು. ಮಕ್ಕಳ ಮುಖ ನೋಡಿ ಏನೂ ಮಾತನಾಡದೆ ಗಂಡ ಸುಮ್ಮನಿದ್ದ. ಆದ್ರು ಹೆಂಡತಿಗೆ ಅದನ್ನು ಸಹಿಸೊಕೆ ಆಗಲಿಲ್ಲ.. ಗಂಡ ಜೀವಂತವಾಗಿ ಇರಲೇ ಬಾರದೆಂದು ನಿರ್ಧರಿಸಿದ್ದ ಪಾಪಿ ಹೆಂಡತಿ ಮತ್ತು ಈಕೆಯ ಪ್ರಿಯಕರ ಅಮಾಯಕನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ:-Sirsi : ಫ್ರೀಬಸ್ ಬಳಕೆ ಪ್ರಯಾಣಿಕರೇ ಟಾರ್ಗೆಟ್ 9 ಲಕ್ಷ ವೌಲ್ಯದ ಚಿನ್ನಾಭರಣ ದೋಚಿದ ಆಂತರ್ ಜಿಲ್ಲಾ ಕಳ್ಳಿಯ ಬಂಧನ

Advertisement

ಹೌದು ಆಕ್ರಮ ಸಂಬಂಧ ಹೊಂದಿದವನನ್ನ ಗಂಡ ಕೊಲೆ ಮಾಡಿರುವ ಪ್ರಕರಣ ಕೇಳಿದ್ದೇವೆ ಆದ್ರೆ ಶಿರಸಿಯಲ್ಲಿ (sirsi) ನಡೆದ ಈ ಕೊಲೆ ಪ್ರಕರಣ ನೋಡಿದ್ರೆ ನಿಜಕ್ಕೂ ಬೇಜಾರ್ ಆಗುತ್ತೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಿಂಗನಮನೆ ಗ್ರಾಮದಲ್ಲಿ ನಿನ್ನೆ ರಾತ್ರಿ ಪರಮೇಶ್ವರ ಬಾಬು ನಾಯ್ಕ್ ಎಂಬಾತನ ಭೀಕರ ಕೊಲೆ ನಡೆದಿದೆ.ಹೌದು ಪಕ್ಕದ ಮನೆಯ ಗಂಡನ ಸಹೋದರ ಪರಮೇಶ್ವರ ತಿಮ್ಮ ನಾಯ್ಕ್ ಜೊತೆ ತನ್ನ ಹೆಂಡತಿಯ ಆಕ್ರಮ ಸಂಬಂಧ ಬಗ್ಗೆ ಪರಮೇಶ್ವರ ಬಾಬು ನಾಯ್ಕ್ ಗೆ ಅನುಮಾನ ಇತ್ತು.ಆದ್ರೆ 7 ವರ್ಷ ಹಾಗೂ 5 ವರ್ಷದ ಇಬ್ಬರು ಚಿಕ್ಕ ಮಕ್ಕಳ ಮುಖ ನೋಡಿ ಸುಮ್ಮನಿದ್ದ. ಹೆಂಡತಿ ಏನಾದ್ರು ಮಾಡಲಿ ಮಕ್ಕಳ ಜೀವನ ಮುಖ್ಯ ಎಂದು ಸುಮ್ಮನಿದ್ದನು ಇಷ್ಟಾದ್ರು ಸುಮ್ಮನಾಗದ ವರೆಸೆಯಲ್ಲಿ ಸಹೋದರನಾಗಿರುವ ಪಾಪಿ ಪರಮೇಶ್ವರ ತಿಮ್ಮ ನಾಯ್ಕ ನಿನ್ನೆ ರಾತ್ರಿ 8 ಗಂಟೆಗೆ ಮನೆಯಿಂದ ಹೊರ ಕರೆದೊಯ್ದು ಕೊಲೆ ಮಾಡಿದ್ದಾನೆ.

ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಕೊಲೆಯಾದ ಪರಮೇಶ್ವರ ಬಾಬು ನಾಯ್ಕ್ ಮತ್ತು ಕೊಲೆ ಮಾಡಿದ ಪರೇಶ್ವರ ತಿಮ್ಮ ನಾಯ್ಕಇಬ್ಬರು ವರೆಸೆಯಲ್ಲಿ ಸಹೋದರರಾಗಿದ್ದು  ಇಬ್ಬರದ್ದು ಅಕ್ಕ ಪಕ್ಕದಲ್ಲೆ ಮನೆ ಇದೆ. ದಟ್ಟ ಕಾಡಿನ ಮಧ್ಯದಲ್ಲಿ ಕೇವಲ ಎರಡೆ ಮನೆಗಳು ಇರುವುದರಿಂದ ಇಬ್ಬರು ಮನೆಯವರು ಬಹಳ ಅನೊನ್ಯವಾಗಿದ್ರು. ಆದ್ರೆ ಹೆಂಡತಿ ದಾರಿ ತಪ್ಪಿದನ್ನು ಪ್ರಾರಂಭದಲ್ಲೆ ಪ್ರಶ್ನಿಸದೆ ಸುಮ್ಮನಿದಕ್ಕೆ ಆತನನ್ನೆ ಭೀಕರವಾಗಿ ಕೊಲೆ ಮಾಡಲಾಗಿದ್ದು,  ಪರಾರಿ ಆಗಿದ್ದ ಆರೋಪಿಯನ್ನ ಶಿರಸಿ ಪೊಲೀಸರು ಶ್ವಾನದ ಸಹಾಯದಿಂದ ಬಂಧಿಸಿದ್ದಾರೆ.

ಕೇವಲ ಎರಡು ತಾಸಿನಲ್ಲೇ ಕೊಲೆ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ಸು ಕಂಡಿದ್ದಾರೆ.ಕೊಲೆ ಆರೋಪಿಯ ಜೊತೆ ಕೊಲೆಯಾದವನ ಪತ್ನಿ ಅರ್ಪಿತಾಳನ್ನ ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ನಡೆಸಿದ್ದು, 8 ವರ್ಷದ ಅನೈತಿಕ ಸಂಬಂಧದ ಬಗ್ಗೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.ಇದೀಗ ಅಕ್ರಮ ಸಂಬಂಧ ಇಬ್ಬರು ಮಕ್ಕಳಿಗೆ ತಂದೆಯೂ ಇಲ್ಲ ,ತಾಯಿಯು ಇಲ್ಲದೇ ಅನಾತವಾಗುವಂತೆ ಮಾಡಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement