Rain| ಶರಾವತಿ ವಿದ್ಯುದಾಗಾರಕ್ಕೆ ನುಗ್ಗಿದ ನೀರು-7 ಘಟಕ ನೀರುಪಾಲು-ವಿಡಿಯೋ ನೋಡಿ

Shivamogga:ಶಿವಮೊಗ್ಗದ ಕಾರ್ಗಲ್ ಸಮೀಪದ ಶರಾವತಿ ವಿದ್ಯುದಾಗಾರದ 7ನೇ ಘಟಕಕ್ಕೆ ಮಳೆ ನೀರು ನುಗ್ಗಿ ಆತಂಕ ಸೃಷ್ಟಿಯಾಯಿತು. ಕೆಲಕಾಲ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡು ಬಳಿಕ ಪುನರಾರಂಭಗೊಂಡಿತು.
ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ಸಮೀಪದ ಶರಾವತಿ ವಿದ್ಯುದಾಗಾರದ 7ನೇ ಘಟಕಕ್ಕೆ ಮಳೆ ನೀರು ನುಗ್ಗಿದ ದೃಶ್ಯ. ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ಸಮೀಪದ ಶರಾವತಿ ವಿದ್ಯುದಾಗಾರದ 7ನೇ ಘಟಕಕ್ಕೆ ಮಳೆ ನೀರು ನುಗ್ಗಿದ ದೃಶ್ಯ.
ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ಸಮೀಪದ ಶರಾವತಿ ವಿದ್ಯುದಾಗಾರದ 7ನೇ ಘಟಕಕ್ಕೆ ಮಳೆ ನೀರು ನುಗ್ಗಿದ ದೃಶ್ಯ.

Rain| ಶರಾವತಿ ವಿದ್ಯುದಾಗಾರಕ್ಕೆ ನುಗ್ಗಿದ ನೀರು-7 ಘಟಕ ನೀರುಪಾಲು-ವಿಡಿಯೋ ನೋಡಿ

 

ಶಿವಮೊಗ್ಗ:ಲಿಂಗನಮಕ್ಕಿ ಜಲ ವಿದ್ಯುತ್‌ ಯೋಜನೆಯ ಶರಾವತಿ ವಿದ್ಯುತ್‌ ಉತ್ಪಾದನಾ ಘಟಕದಲ್ಲಿ ಪೈಪ್‌ ಲೈನ್ ಸಮಸ್ಯೆಯಿಂದ ಮಳೆಯ ನೀರು ಏಕಾಏಕಿ ವಿದ್ಯುತ್ಗಾರಕ್ಕೆ ನುಗ್ಗಿ  ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಇಂದು ನಡೆದಿದೆ.

Advertisement

ಇದನ್ನೂ ಓದಿ:-Shivamogga|25 ಲಕ್ಷ ರೂ. ಲೋನ್ ಗಾಗಿ 3 ಲಕ್ಷ ರೂ. ಕಳೆದುಕೊಂಡ ಪೊಲೀಸ್ ಅಧಿಕಾರಿ!

ಶಿವಮೊಗ್ಗ (shivamogga) ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಬಳಿಯ ಶರಾವತಿ ವಿದ್ಯುದಾಗರದ ಆವರಣ ಮತ್ತು ಟರ್ಬೈನ್ ಬಳಿ ನೀರು ನುಗ್ಗಿದ್ದರಿಂದ, ಎಲ್ಲಾ ಯೂನಿಟ್ ಗಳಲ್ಲಿ ಕೆಲ ಕಾಲ ವಿದ್ಯುತ್ ಉತ್ಪಾದನೆಯನ್ನ ಸ್ಥಗಿತಗೊಳಿಸಲಾಗಿತ್ತು.

ಲಿಂಗನಮಕ್ಕಿ ಜಲಾಶಯದ ಶರಾವತಿ ವಿದ್ಯುದಾಗಾರದಲ್ಲಿ ತಲಾ 103.5 ಮೆಗಾವ್ಯಾಟ್‌ನ 10 ಯುನಿಟ್‌ಗಳಿದ್ದು, 1035 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವಿದೆ. ಈ ಘಟಕಗಳಿಗೆ ತಲಕಳಲೆ ಸಮಾನಾಂತರ ಜಲಾಶಯದಿಂದ 400 ಮೀಟರ್‌ ಎತ್ತರದಿಂದ ಬೃಹತ್‌ ಪೈಪ್‌ಗಳ ಮೂಲಕ ಟರ್ಬೈನ್‌ಗಳಿಗೆ ನೀರು ಹರಿಸಲಾಗುತ್ತದೆ.

ಜಲಾಶಯದಲ್ಲಿ ನೀರು ಕಡಿಮೆ ಇದ್ದು, 10ರಲ್ಲಿ ಕೇವಲ ಮೂರು ಯುನಿಟ್‌ಗಳನ್ನು ರನ್‌ ಮಾಡಲಾಗುತ್ತಿದೆ. ಗುರುವಾರ 7ನೇ ಯುನಿಟ್‌ಗೆ ಬಳಸದ ಕಾರಣ ನಿರ್ವಹಣೆ ಮಾಡಲಾಗುತಿತ್ತು. ಇದಕ್ಕಾಗಿ ಪೈಪ್‌ನಲ್ಲಿದ್ದ ನೀರನ್ನು ಖಾಲಿ ಮಾಡಲಾಗಿತ್ತು. ಬೃಹತ್‌ ಗಾತ್ರದ ಪೈಪ್‌ಗಳಿಗೆ ಡ್ರೈನ್‌ ಪೈಪ್‌ಗಳನ್ನು ಅಳವಡಿಸಲಾಗಿದ್ದು ಇದರಲ್ಲಿ ಲೀಕೇಜ್‌ ಇದ್ದ ಕಾರಣ ಪೈಪ್‌ನಲ್ಲಿ ನೀರು ತುಂಬಿ ಏಕಾಏಕಿ ಏಳನೇ ಯುನಿಟ್‌ಗೆ ನುಗ್ಗಿದೆ.

ಇದರಿಂದ ಟರ್ಬೈನ್‌ ಸುತ್ತಮುತ್ತ ಒಂದೂವರೆ ಅಡಿಯಷ್ಟು ಸಂಗ್ರಹಗೊಂಡಿದೆ. ನೀರು ನುಗ್ಗುತ್ತಿದ್ದಂತೆ ಸಿಬ್ಬಂದಿ ಆತಂಕಗೊಂಡು ಚಾಲನೆಯಲ್ಲಿದ್ದ ಎಲ್ಲಾ ಯುನಿಟ್‌ಗಳನ್ನು ನಿಲ್ಲಿಸಿದ್ದಾರೆ. ಕೆಲವೇ ಗಂಟೆಯಲ್ಲಿ ನಿಂತಿದ್ದ ನೀರು ಖಾಲಿಯಾಗಿದ್ದು, ಎಲ್ಲಾ ಯುನಿಟ್‌ಗಳನ್ನು ಪರಿಶೀಲಿಸಿ ಸಂಜೆ ಹೊತ್ತಿಗೆ ವಿದ್ಯುತ್‌ ಉತ್ಪಾದನೆ ಶುರು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಶರಾವತಿ (sharavathi) ವಿದ್ಯುದಾಗಾರವು 1964ರಿಂದಲೂ ಚಾಲ್ತಿಯಲ್ಲಿದ್ದು, ಅವಘಡಕ್ಕೆ ಒಳಗಾಗಿರುವ 7ನೇ ಯುನಿಟ್‌ 1968ರಿಂದ ಬಳಕೆಯಲ್ಲಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement