Karwar|ಕಾರವಾರ-ಇಳೆಕಲ್ ರಾಜ್ಯ ಹೆದ್ದಾರಿಯಲ್ಲಿ ಭಾರೀ ವಾಹನಕ್ಕೆ ನಿರ್ಬಂಧ – ಜಿಲ್ಲಾಧಿಕಾರಿ.

ಕಾರವಾರ :- ಕಾರವಾರ-ಇಳೆಕಲ್ ರಾಜ್ಯ ಹೆದ್ದಾರಿಯಲ್ಲಿ ಭಾರೀ ವಾಹನ ಸಂಚಾರದಿಂದ ರಸ್ತೆಗಳು ಹದಗೆಟ್ಟಿದ್ದು ,ದೊಡ್ಡ ದೊಡ್ಡ ಹೊಂಡಗಳ ಎಲ್ಲೆಡೆ ಹೆಚ್ಚಾಗಿದೆ. ಇದಲ್ಲದೇ ಈ ಹೆದ್ದಾರಿ ಮೂಲಕ ಕೈಗಾ ಅಣು ಸ್ಥಾವರದ ಐದು ಮತ್ತು ಆರನೇ ಘಟಕ ನಿರ್ಮಾಣ ಕಾಮಗಾರಿಗೆ ಇದೇ ಮಾರ್ಗದಲ್ಲಿ ಭಾರೀ ವಾಹನಗಳು ಸಂಚರಿಸುತಿದ್ದು ,ನಿಗದಿ ಪ್ರಮಾಣಕ್ಕಿಂತ ಹೆಚ್ಚಿನ ಭಾರವಾದ ವಸ್ತುಗಳನ್ನು ಕೊಂಡೊಯ್ಯಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ಥಳೀಯ ಜನರು ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದರು.ಇದಲ್ಲದೇ ಆಡಳಿತಕ್ಕೂ ಮನವಿ ನೀಡಿದ್ದರು. ಇದನ್ನೂ ಓದಿ:-Karwar| ಕಾರವಾರದ ಕಡಲತೀರದಲ್ಲಿ ತೇಲಿಬಂದ ಮೃತ ಕಡಲಾಮೆ

ಈ ಹಿನ್ನಲೆಯಲ್ಲಿ ಕಾರವಾರದ (karwar)ಶಾಸಕ ಸತೀಶ್ ಸೈಲ್ ಜೊತೆ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ರವರು ಪರಿಶೀಲನೆ ನಡೆಸಿ ,ಕೈಗಾ ಅಧಿಕಾರಿಗಳ ಜೊತೆ ಹೆದ್ದಾರಿ ಸಮಸ್ಯೆ ಬಗ್ಗೆ ಮಾತನಾಡಿ ಅಂತಿಮ ನಿರ್ಧಾರಕ್ಕೆ ಬಂದಿದ್ದರು.
ಭಾರೀ ವಾಹನ ಸಂಚಾರ ಬಂದ್

ಸಧ್ಯ ಕಾರವಾರ- ಕೈಗಾ ಮೂಲಕ ಇಳೆಕಲ್ ಮಾರ್ಗವು ಭಾರೀ ವಾಹನಕ್ಕೆ ಸಂಚಾರಕ್ಕೆ ಯೋಗ್ಯವಲ್ಲದ ಕಾರಣ ಹಾಗೂ ಸಂಪೂರ್ಣ ಹದಗೆಟ್ಟ ಹಿನ್ನಲೆಯಲ್ಲಿ ಈ ಭಾಗದಲ್ಲಿ ಸಂಚರಿಸುವ ಭಾರೀ ವಾಹನಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಿ ಮೌಕಿಕ ಆದೇಶ ಮಾಡಿದ್ದಾರೆ. ಇದಲ್ಲದೇ ಕೈಗಾಗೆ ರಸ್ತೆ ದುರಸ್ತಿ ಆಗುವ ವರೆಗೂ ಯಾವುದೇ ಭಾರೀ ವಾಹನ ಸಂಚಾರ ಮಾಡದಂತೆ ನಿರ್ಬಂಧ ಹೇರಲಾಗಿದೆ.ಇದನ್ನೂ ಓದಿ:-Karwar |ಹೋರಿಗುದ್ದಾಟದ ನಡುವೆ ಸಿಕ್ಕಿದ ಮಹಿಳೆ ಸಾವು
ಸಧ್ಯ ಈ ಆದೇಶ ಮೌಕಿಕವಾಗಿದ್ದು ಲಿಖಿತ ರೂಪದಲ್ಲಿ ಆದೇಶ ಮಾಡುವುದಾಗಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಮಾಹಿತಿ ನೀಡಿದ್ದಾರೆ.






