Karwar|ಕಾರವಾರ-ಇಳೆಕಲ್ ರಾಜ್ಯ ಹೆದ್ದಾರಿಯಲ್ಲಿ ಭಾರೀ ವಾಹನಕ್ಕೆ ನಿರ್ಬಂಧ – ಜಿಲ್ಲಾಧಿಕಾರಿ

Kaiga road traffic jam Karwar Kaiga road traffic jam Karwar

Karwar|ಕಾರವಾರ-ಇಳೆಕಲ್ ರಾಜ್ಯ ಹೆದ್ದಾರಿಯಲ್ಲಿ ಭಾರೀ ವಾಹನಕ್ಕೆ ನಿರ್ಬಂಧ – ಜಿಲ್ಲಾಧಿಕಾರಿ.

Kannadavani WhatsApp image
ಪ್ರತಿ ದಿನದ ಸುದ್ದಿ ಓದಲು ನಮ್ಮ ವಾಟ್ಸ್ ಅಪ್ ಗ್ರೂಪ್ ಸೇರಲು ಫೋಟೋ ದ ಮೇಲೆ ಕ್ಲಿಕ್ ಮಾಡಿ

ಕಾರವಾರ :- ಕಾರವಾರ-ಇಳೆಕಲ್ ರಾಜ್ಯ ಹೆದ್ದಾರಿಯಲ್ಲಿ ಭಾರೀ ವಾಹನ ಸಂಚಾರದಿಂದ ರಸ್ತೆಗಳು ಹದಗೆಟ್ಟಿದ್ದು ,ದೊಡ್ಡ ದೊಡ್ಡ ಹೊಂಡಗಳ ಎಲ್ಲೆಡೆ ಹೆಚ್ಚಾಗಿದೆ. ಇದಲ್ಲದೇ ಈ ಹೆದ್ದಾರಿ ಮೂಲಕ ಕೈಗಾ ಅಣು ಸ್ಥಾವರದ ಐದು ಮತ್ತು ಆರನೇ ಘಟಕ ನಿರ್ಮಾಣ ಕಾಮಗಾರಿಗೆ ಇದೇ ಮಾರ್ಗದಲ್ಲಿ ಭಾರೀ ವಾಹನಗಳು ಸಂಚರಿಸುತಿದ್ದು ,ನಿಗದಿ ಪ್ರಮಾಣಕ್ಕಿಂತ ಹೆಚ್ಚಿನ ಭಾರವಾದ ವಸ್ತುಗಳನ್ನು ಕೊಂಡೊಯ್ಯಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ಥಳೀಯ ಜನರು ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದರು.ಇದಲ್ಲದೇ ಆಡಳಿತಕ್ಕೂ ಮನವಿ ನೀಡಿದ್ದರು. ಇದನ್ನೂ ಓದಿ:-Karwar| ಕಾರವಾರದ ಕಡಲತೀರದಲ್ಲಿ ತೇಲಿಬಂದ ಮೃತ ಕಡಲಾಮೆ 

Karwar kaiga road damage image
ಹದಗೆಟ್ಟ ಕಾರವಾರ-ಕೈಗಾ ರಾಜ್ಯ ಹೆದ್ದಾರಿ

ಈ ಹಿನ್ನಲೆಯಲ್ಲಿ ಕಾರವಾರದ (karwar)ಶಾಸಕ ಸತೀಶ್ ಸೈಲ್ ಜೊತೆ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ರವರು ಪರಿಶೀಲನೆ ನಡೆಸಿ ,ಕೈಗಾ ಅಧಿಕಾರಿಗಳ ಜೊತೆ ಹೆದ್ದಾರಿ ಸಮಸ್ಯೆ ಬಗ್ಗೆ ಮಾತನಾಡಿ ಅಂತಿಮ ನಿರ್ಧಾರಕ್ಕೆ ಬಂದಿದ್ದರು.

Advertisement

ಭಾರೀ ವಾಹನ ಸಂಚಾರ ಬಂದ್

ಕಾರವಾರ–ಕೈಗಾ–ಇಳೆಕಲ್ ರಾಜ್ಯ ಹೆದ್ದಾರಿಯಲ್ಲಿ ಹದಗೆಟ್ಟ ರಸ್ತೆಯಿಂದ ಭಾರೀ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ
ರಸ್ತೆಯಲ್ಲಿ ನಿಂತ ಭಾರೀ ವಾಹನಗಳು

ಸಧ್ಯ ಕಾರವಾರ- ಕೈಗಾ ಮೂಲಕ ಇಳೆಕಲ್ ಮಾರ್ಗವು ಭಾರೀ ವಾಹನಕ್ಕೆ ಸಂಚಾರಕ್ಕೆ ಯೋಗ್ಯವಲ್ಲದ ಕಾರಣ ಹಾಗೂ ಸಂಪೂರ್ಣ ಹದಗೆಟ್ಟ ಹಿನ್ನಲೆಯಲ್ಲಿ ಈ ಭಾಗದಲ್ಲಿ ಸಂಚರಿಸುವ ಭಾರೀ ವಾಹನಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಿ ಮೌಕಿಕ ಆದೇಶ ಮಾಡಿದ್ದಾರೆ. ಇದಲ್ಲದೇ ಕೈಗಾಗೆ ರಸ್ತೆ ದುರಸ್ತಿ ಆಗುವ ವರೆಗೂ ಯಾವುದೇ ಭಾರೀ ವಾಹನ ಸಂಚಾರ ಮಾಡದಂತೆ ನಿರ್ಬಂಧ ಹೇರಲಾಗಿದೆ.ಇದನ್ನೂ ಓದಿ:-Karwar |ಹೋರಿಗುದ್ದಾಟದ ನಡುವೆ ಸಿಕ್ಕಿದ ಮಹಿಳೆ ಸಾವು

ಸಧ್ಯ ಈ ಆದೇಶ ಮೌಕಿಕವಾಗಿದ್ದು ಲಿಖಿತ ರೂಪದಲ್ಲಿ ಆದೇಶ ಮಾಡುವುದಾಗಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಮಾಹಿತಿ ನೀಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement