Dandeli|ಮಾದಕ ಪದಾರ್ಥದ ಮೇವಾ ಮೋದಕ್’ ಮಾರಾಟ : ಅಂಗಡಿ ಮಾಲೀಕನ ವಿರುದ್ಧ ಪ್ರಕರಣ

Dandeli: ಮಾದಕ ಅಂಶ ಹೊಂದಿದ್ದ ‘ಮೇವಾ ಮೋದಕ್’ ಮಾರಾಟ – ಅಂಗಡಿ ಮಾಲೀಕನ ವಿರುದ್ಧ ಎನ್‌ಡಿಪಿಎಸ್ ಪ್ರಕರಣ
file 00000000784481fa89058729c9f2743e file 00000000784481fa89058729c9f2743e

Dandeli|ಮಾದಕ ಪದಾರ್ಥದ ಮೇವಾ ಮೋದಕ್’ ಮಾರಾಟ : ಅಂಗಡಿ ಮಾಲೀಕನ ವಿರುದ್ಧ ಪ್ರಕರಣ.

ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ(Dandeli) ನಗರದ ಪಟೇಲ್ ಸರ್ಕಲ್ ಬಳಿಯ ಜಿ.ಎನ್. ರಸ್ತೆಯಲ್ಲಿರುವ ಎಸ್.ಕೆ. ಏಜೆನ್ಸಿ ಅಂಗಡಿಯಲ್ಲಿ ಮಾದಕ ಅಂಶ ಹೊಂದಿರುವ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು ,ಖಚಿತ ಮಾಹಿತಿ ಪಡೆದ ದಾಂಡೇಲಿ ಪೊಲೀಸರು ದಾಳಿ ನಡೆಸಿ, ಅಂಗಡಿ ಮಾಲೀಕನ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:-Dandeli | ಕಾಳಿ ನದಿ ತೀರದಲ್ಲಿ 40 ಮರಿಗಳೊಂದಿಗೆ ಮೊಸಳೆ ! ವಿಡಿಯೋ ನೋಡಿ

ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಕಿರಣ ಪಾಟೀಲ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ಶನಿವಾರ ಈ ದಾಳಿ ನಡೆಸಲಾಯಿತು.

Advertisement

ದಾಳಿಯ ವೇಳೆ ಅಂಗಡಿಯಲ್ಲಿ “SANAN MEWA MODAK (SPECIAL)” ಎಂಬ ಹೆಸರಿನ ಉತ್ಪನ್ನದ ಪ್ಯಾಕೆಟ್‌ಗಳು ಪತ್ತೆಯಾದವು. ಆ ಪ್ಯಾಕೆಟ್‌ಗಳ ಮೇಲೆ ಕ್ಯಾನಬಿಸ್ ಸಟಿವಾ (‘Cannabis Sativa’) ಅಂಶ ಇರುವುದಾಗಿ ನಮೂದಿಸಲಾಗಿತ್ತು.

SANAN MEWA MODAK (SPECIAL)”
SANAN MEWA MODAK

ಸ್ಥಳಕ್ಕೆ ಆಗಮಿಸಿದ ಸೊಕೊ ಅಧಿಕಾರಿಗಳು ಪ್ರಾಥಮಿಕ ಪರೀಕ್ಷಾ ಕಿಟ್ ಮೂಲಕ ಮಾದರಿಗಳನ್ನು ಪರೀಕ್ಷಿಸಿದಾಗ ಮಾದಕ ಅಂಶ ಇರುವುದು ಪ್ರಾಥಮಿಕವಾಗಿ ದೃಢಪಟ್ಟಿತು.

ಇದನ್ನೂ ಓದಿ:-Dandeli | ಕಾಳಿ ನದಿ ತೀರದಲ್ಲಿ 40 ಮರಿಗಳೊಂದಿಗೆ ಮೊಸಳೆ ! ವಿಡಿಯೋ ನೋಡಿ

ಪೊಲೀಸರು ಒಟ್ಟು 10 ಬಾಕ್ಸ್‌ಗಳಲ್ಲಿದ್ದ ಸುಮಾರು 1 ಕೆ.ಜಿ. 986 ಗ್ರಾಂ ತೂಕದ ವಸ್ತುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಆರೋಪಿ ನಿರ್ಮಲನಗರದ ನಿವಾಸಿಯಾಗಿರುವ ಸಂಜಯ ಮುರಳೀಧರ ಮಹೇಶ್ವರಿ, (ವ.62),  ಇವರ ವಿರುದ್ಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯ ಕಲಂ 20(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:-Dandeli |ಯುವತಿಯನ್ನ ರೂಮಿಗೆ ಕರೆದ ಪೊಲೀಸರು! ಇಬ್ಬರು ಪೊಲೀಸರ ಮೇಲೆ ದೂರು ದಾಖಲು 

ದಾಳಿಯನ್ನು ಪಿ.ಎಸ್.ಐ ಕಿರಣ ಪಾಟೀಲ ನೇತೃತ್ವದ ತಂಡ ನಡೆಸಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಪಿ.ಎಸ್.ಐ ಅಮೀನ್ ಅತ್ತಾರ್ ಅವರು ಕೈಗೊಂಡಿದ್ದಾರೆ.

ಈ ಮಾದಕ ವಸ್ತುಗಳ ಸರಬರಾಜು ಮತ್ತು ಮಾರಾಟದ ಜಾಲದಲ್ಲಿ ಇತರರು ಭಾಗಿಯಾಗಿರುವ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇವಾ ಮೋದಕ್ ಎಂಬ ಪದಾರ್ಥ ರಾಜಸ್ಥಾನ ಸೇರಿದಂತೆ ಹಲವು ರಾಜ್ಯದಲ್ಲಿ ಮಾರಾಟಕ್ಕೆ ಅವಕಾಶ ಇದೆ. ಆದರೇ ಕರ್ನಾಟಕದಲ್ಲಿ ಇದಕ್ಕೆ ನಿರ್ಬಂಧವಿದೆ. ಇಲ್ಲಿ ಮಾರಾಟ ಸೇವನೆ ಅಪರಾಧವಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement