ಕರ್ನಾಟಕದಲ್ಲಿ ಗುಟ್ಕಾ ,ಪಾನ್ ಮಸಾಲಾ ಮಾರಾಟಕ್ಕೆ ಒಂದು ವರ್ಷ ನಿರ್ಬಂಧ-ಇಂದಿನ ಅಡಿಕೆ ರೇಟ್ ಹೇಗಿದೆ ಗೊತ್ತಾ

Karnataka Arecanut Market Price Karnataka Arecanut Market Price
Arecanut market price Karnataka

ಕರ್ನಾಟಕದಲ್ಲಿ ಗುಟ್ಕಾ ,ಪಾನ್ ಮಸಾಲಾ ಮಾರಾಟಕ್ಕೆ ಒಂದು ವರ್ಷ ನಿರ್ಬಂಧ-ಇಂದಿನ ಅಡಿಕೆ ರೇಟ್ ಹೇಗಿದೆ ಗೊತ್ತಾ?

ಬೆಂಗಳೂರು : ಕರ್ನಾಟಕದಲ್ಲಿ (Karnataka) ತಂಬಾಕು ಮತ್ತು ನಿಕೋಟಿನ್ ಯುಕ್ತ ಗುಟ್ಕಾ ಹಾಗೂ ಪಾನ್ ಮಸಾಲಾ ಮಾರಾಟದ ಮೇಲೆ ರಾಜ್ಯ ಸರ್ಕಾರವು ಕಠಿಣ ಕ್ರಮ ಕೈಗೊಂಡಿದ್ದು, ಇವುಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ರಾಜ್ಯಾದ್ಯಂತ ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ.

karnataka gutka-pan-masala ban
karnataka gutka-pan-masala ban

ಇದರಿಂದಾಗಿ ಅಡಕೆ ಮಾರುಕಟ್ಟೆ ಮೇಲೂ ವೆತಿರಿಕ್ತ ಪರಿಣಾಮ ಬೀರಿದೆ.

Advertisement

ಸಾರ್ವಜನಿಕರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ-2006 ರ ಸೆಕ್ಷನ್ 30(2)(a) ಹಾಗೂ ಆಹಾರ ಭದ್ರತೆ ಮತ್ತು ಗುಣಮಟ್ಟ ನಿಯಮಾವಳಿಗಳು-2011 ರ ನಿಯಮ 2.3.4 ರ ಅಧಿಕಾರ ಬಳಸಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ಅಧಿಕೃತ ಅಧಿಸೂಚನೆಯನ್ನು ಜಾರಿಗೊಳಿಸಿದ್ದಾರೆ. ಇದರನ್ವಯ, ಯಾವುದೇ ಹೆಸರಿನಲ್ಲಿ ಅಥವಾ ಸ್ಯಾಚೆಟ್ ಹಾಗೂ ಪ್ಯಾಕೆಟ್‌ಗಳಲ್ಲಿ ತಂಬಾಕು ಅಥವಾ ನಿಕೋಟಿನ್ ಬೆರೆಸಿದ ಗುಟ್ಕಾ ಮತ್ತು ಪಾನ್ ಮಸಾಲಾಗಳನ್ನು ಮಾರಾಟ ಮಾಡುವುದು ಅಥವಾ ಸಾಗಿಸುವುದು ಸಂಪೂರ್ಣವಾಗಿ ಶಿಕ್ಷಾರ್ಹ ಅಪರಾಧವಾಗಿದ್ದು, ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುತ್ತದೆ.

ಇದನ್ನೂ ಓದಿ:-Karnataka | ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ|ಯಾರಿಗೆ ಯಾವ ಖಾತೆ ವಿವರ ಇಲ್ಲಿದೆ.

ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ಈ ನಿಷೇಧ ಜಾರಿಗೆ ಬಂದಿದೆ. ತಂಬಾಕು ಅಥವಾ ನಿಕೋಟಿನ್ ಅಂಶವನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ, ನಂತರ ಗ್ರಾಹಕರು ಸುಲಭವಾಗಿ ಮಿಶ್ರಣ ಮಾಡಿ ಬಳಸುವಂತೆ ಮಾರಾಟ ಮಾಡುವ ಯಾವುದೇ ಉತ್ಪನ್ನಗಳಿಗೂ ಈ ನಿಷೇಧ ಅನ್ವಯವಾಗಲಿದೆ.

ಇದನ್ನೂ ಓದಿ:-Karnataka SIR| ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯಾ? – ಜಸ್ಟ್‌ 10 ಸೆಕೆಂಡ್‌ನಲ್ಲಿ ಚೆಕ್‌ ಮಾಡಿ

ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ (arecanut) ಧಾರಣೆ?.

ಉತ್ತರ ಕನ್ನಡ ,ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ ಎಪಿಎಂಸಿ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆಯ ಮಾಹಿತಿ ಇಲ್ಲಿದೆ. ಶಿರಸಿ,ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು, ಬೆಟ್ಟೆ, ರಾಶಿಇಡಿ, ಗೊರಬಲು ಅಡಿಕೆ ವಹಿವಾಟು ನಡೆದಿದೆ.

ಶಿರಸಿ ಮಾರುಕಟ್ಟೆ.

Screenshot 20260812 210759

ಶಿವಮೊಗ್ಗ ಮಾರುಕಟ್ಟೆ

ಸರಕು: ಕನಿಷ್ಠ ₹60,399 ರಿಂದ ಗರಿಷ್ಠ ₹93,096 ರವರೆಗೆ ಮಾರಾಟವಾಗಿದೆ.

ಬೆಟ್ಟೆ: ಕನಿಷ್ಠ ₹55,009 ರಿಂದ ಗರಿಷ್ಠ ₹63,772 ರವರೆಗೆ ದರ ಪಡೆದುಕೊಂಡಿದೆ.

ರಾಶಿಇಡಿ: ಕನಿಷ್ಠ ₹47,199 ರಿಂದ ಗರಿಷ್ಠ ₹54,199 ರವರೆಗೆ ಮಾರಾಟವಾಗಿದೆ.

ಗೊರಬಲು: ಕನಿಷ್ಠ ₹19,010 ರಿಂದ ಗರಿಷ್ಠ ₹44,077 ರವರೆಗೆ ದರ ಪಡೆದಿದೆ.

ತೀರ್ಥಹಳ್ಳಿ ಮಾರುಕಟ್ಟೆ

ಗೊರಬಲು: ಕನಿಷ್ಠ ₹37,500 ರಿಂದ ಗರಿಷ್ಠ ₹37,500 ರವರೆಗೆ ಮಾರಾಟವಾಗಿದೆ.

ರಾಶಿ: ಕನಿಷ್ಠ ಮತ್ತು ಗರಿಷ್ಠ ₹49,509 ರವರೆಗೆ ದರ ಪಡೆದುಕೊಂಡಿದೆ.

ಶಿಕಾರಿಪುರ.

ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹14,000 ರವರೆಗೆ ಮಾರಾಟವಾಗಿದೆ.

ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹14,000 ರವರೆಗೆ ಮಾರಾಟವಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement