Kannda entertainment/challenging star actor darshan arrested why what is the case here is the-l shocking information

ಹತ್ಯೆ ಪ್ರಕರಣ ಆರೋಪ ನಟ ದರ್ಶನ್ ಬಂಧನ!

76

Sandalwood star darshan arrest,:- ಕನ್ನಡ ಚಿತ್ರರಂಗದ ಖ್ಯಾತ ಸಿನಿಮಾ ನಟ (actor) ತೂಗುದೀಪ ದರ್ಶನ್ ರವರನ್ನು ಕೊಲೆ ಆರೋಪದ ಪ್ರಕರಣದಲ್ಲಿ ಮೈಸೂರಿನ ದರ್ಶನ್ ಪಾರ್ಮಹೌಸ್ ನಲ್ಲಿ ಮಂಗಳವಾರ ಬೆಳಗ್ಗೆ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಟ ದರ್ಶನ್ ಪರಿಚಯಸ್ಥ ಮಹಿಳೆ ಪವಿತ್ರಾ ಗೌಡ ಎಂಬಾಕೆಗೆ ರೇಣುಕಾಸ್ವಾಮಿ ಎಂಬ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದನು . ಹೀಗಾಗಿ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಆರ್‌.ಆರ್‌ ನಗರದಲ್ಲಿ ಇರುವ ಶೆಡ್‌ಗೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂಬ ಆರೋಪ ದರ್ಶನ್ ಮೇಲಿದೆ.

ಆತನನ್ನು ಕೊಲೆ ಮಾಡಿದ ಬಳಿಕ ಆರೋಪಿಗಳು ಆತನ ಮೃತದೇಹವನ್ನು ಕಾಮಾಕ್ಷಿಪಾಳ್ಯದ ಡ್ರೈನೇಜ್ ಬಳಿ ಎಸೆದು ಹೋಗಿದ್ದರು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಕೊಲೆಗೈದ ಆರೋಪಿಗಳು ಬೆಂಗಳೂರಿನ ಗಿರಿನಗರ ಮೂಲದವರು ಎಂದು ಹೇಳಲಾಗಿದ್ದು ತನಿಖೆ ವೇಳೆ ದರ್ಶನ್ ಕೂಡ ಈ ಹತ್ಯೆಯ ಹಿಂದೆ ಇರುವ ಬಗ್ಗೆ ಆರೋಪಿಗಳು ಮಾಹಿತಿ ನೀಡಿದ್ದಾರೆ‌.

ಅಲ್ಲದೇ ರೇಣುಕಾಸ್ವಾಮಿ ಹತ್ಯೆ ಆರೋಪಿಗಳೊಂದಿಗೆ ದರ್ಶನ್ (actor Darshan)ಫೋನ್ ಮೂಲಕ ನಿರಂತರ ಸಂಪರ್ಕದಲ್ಲಿ ಇದ್ದರು, ಹತ್ಯೆ ನಡೆಯುವಾಗ ಸಹ ಸ್ಥಳದಲ್ಲಿದ್ದರು ಎಂಬ ಮಾಹಿತಿ ಆಧಾರದಲ್ಲಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!