ಮುರ್ಡೇಶ್ವರದ ರಂಗು ಹೆಚ್ಚಿಸಿದ ರಾಜ್ಯದ ಅತೀ ದೊಡ್ಡ ಪ್ಲೋಟಿಂಗ್ ಬ್ರಿಡ್ಜ್ ಲೋಕಾರ್ಪಣೆ.

267

ಕಾರವಾರ :- ವೀಕೆಂಡ್ ( weekend) ,ರಜಾ ದಿನಗಳು ಬಂತೆಂದರೇ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು( tourism place) ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಅದ್ರಲ್ಲೂ ಕರಾವಳಿಯ ಮುರುಡೇಶ್ವರ ದಲ್ಲಿ ದೇಶದ ನಾನಾ ಭಾಗದಿಂದ ಪ್ರವಾಸಿಗರ ದಂಡೇ ಹರಿದು ಬರುತ್ತದೆ.

ಇದನ್ನೂ ಓದಿ:-Bhatkal ಚಿಕಿತ್ಸೆ ನೀಡಲು ವೈದ್ಯರ ವಿಳಂಬಕ್ಕೆ ಅಕ್ರೋಶ

Uttrakannada ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾದ ಮುರ್ಡೇಶ್ವರ Murudeshwara )ಕ್ಕೆ ಪ್ರತಿ ತಿಂಗಳು ಲಕ್ಷಕ್ಕಿಂತ ಅಧಿಕ ಸಂಖ್ಯೆ ಯಲ್ಲಿ ಬರುತ್ತಾರೆ. ಸಮುದ್ರ ಸ್ನಾನದ ಜೊತೆ ,ಜಲಸಾಹಸ ಕ್ರೀಡೆ, ಸ್ಕೂಬಾ ಡೈವ್ ನಂತ ಚಟುವಟಿಕೆಯಲ್ಲಿ ಭಾಗಿಯಾಗುವ ಪ್ರವಾಸಿಗರಿಗೆ ರಾಜ್ಯದ ಅತೀ ದೊಡ್ಡ ಫ್ಲೋಟಿಂಗ್ ಬ್ರಿಡ್ಜ್ ನಲ್ಲಿ ಸಮುದ್ರದಲ್ಲಿ ಹೆಜ್ಜೆ ಹಾಕುಲು ಇದೀಗ ಅವಕಾಶ ಒದಗಿ ಬಂದಿದೆ.

ಉಡುಪಿಯ ಮಲ್ಪೆ ಬೀಚ್‌ನಲ್ಲಿ 100 ಮೀಟರ್ ಪ್ಲೋಟಿಂಗ್ ಬ್ರಿಡ್ಜ್ ನನ್ನು 80 ಲಕ್ಷದಲ್ಲಿ ಕರ್ಚುಮಾಡಿ ನಿರ್ಮಿಸಲಾಗಿತ್ತು.ಆದ್ರೆ ಸಮುದ್ರದ ಅಲೆಗೆ ಈ ಪ್ಲೋಟಿಂಗ್ ಬ್ರಿಡ್ಜ್ ಕಿತ್ತುಹೋಗಿ ಪ್ರವಾಸಿಗರಿಗೆ ನಿರಾಸೆ ತಂದೊಡ್ಡಿತ್ತು.

ಇದನ್ನೂ ಓದಿ:-ಉತ್ತರ ಕನ್ನಡ ಕರಾವಳಿಯಲ್ಲಿ ಭದ್ರತೆ ಹೆಚ್ಚಿಸಿದ ಕೇಂದ್ರ: ಕರಾವಳಿಯಲ್ಲಿ ಕಸ್ಟಮ್ ಇಲಾಖೆಗೆ ಗಸ್ತು ಬೋಟ್.

ಆದ್ರೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದಲ್ಲಿ 130 ಮೀಟರ್ ಉದ್ದದ ಒಂದು ಕೋಟಿ ವೆಚ್ಚದ ಪ್ಲೋಟಿಂಗ್ ಬ್ರಿಡ್ಜ್ ನನ್ನು ಓಶಿಯನ್ ಅಡ್ವೆಂಚರ್ಸ್ ಸಂಸ್ಥೆ ನಿರ್ಮಿಸಿ ಇಂದು ಪ್ರವಾಸಿಗರಿಗೆ ಅರ್ಪಣೆ ಮಾಡಿದೆ.

ಪ್ರವಾಸಿಗರ ಆಕರ್ಷಣೆಗಾಗಿ ಬೋಟಿಂಗ್‌, ವಾಟರ್‌ ಸ್ಕೂಟರ್‌, ಫ್ಲೋಟಿಂಗ್‌ ಬ್ರಿಡ್ಜ್‌, ಪ್ಯಾರಾಚೂಟ್‌ ಮೊದಲಾದ ಮನೋರಂಜನಾ ಸಾಧನ ಇದೀಗ ಪ್ರವಾಸಿಗರಿಗೆ ಮುರ್ಡೇಶ್ವರದಲ್ಲಿ ಲಭ್ಯವಿದೆ.
ಪ್ರವಾಸಿಗರು ಇವುಗಳ ಭರಪೂರ ಆನಂದ ಪಡೆಯುತ್ತಿದ್ದಾರೆ.

ಸುಮಾರು 130 ಮೀ. ಉದ್ದ, 3.50 ಮೀ. ಅಗಲವಿರುವ ಈ ಸೇತುವೆಯ ಎರಡೂ ಬದಿಯಲ್ಲಿ ಪ್ರವಾಸಿಗರ ರಕ್ಷಣೆಗೆ ರೈಲಿಂಗ್ಸ್‌ ಅಳವಡಿಸಲಾಗಿದ್ದು, ಸಮುದ್ರಕ್ಕೆ ಬೀಳುವ ಅಪಾಯ ಕಡಿಮೆ. ಪ್ರವಾಸಿಗರ ರಕ್ಷಣೆಗಾಗಿ ಲೈಫ್‌ ಗಾರ್ಡ್‌ಗಳು ಇರಲಿದ್ದಾರೆ. ತೇಲುವ ಸೇತುವೆಯ ಅನುಭವ ಪಡೆಯಲಿಚ್ಛಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೈಫ್‌ ಜಾಕೆಟ್‌ ತೊಡಬೇಕಿದೆ.
ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರಿಂದ ಅಲೆಗಳ ಹೊಡೆತಕ್ಕೆ ತೇಲಿಹೋಗುವ ಭಯವಿಲ್ಲ.ಜೊತೆಗೆ ಮಳೆಗಾಲದಲ್ಲಿ ನಿರ್ಬಂಧಿತ ದಿನ ಹೊರೆತುಪಡಿಸಿ ಉಳಿದ ದಿನಗಳು ಪ್ರವಾಸಿಗರಿಗೆ ಫ್ಲೋಟಿಂಗ್ ಬ್ರಿಡ್ಜ್ ನಲ್ಲಿ ಸೀ ವಾಕ್ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!