ವನ್ಯಜೀವಿ ಅಂಗಾಂಗ ಹಿಂತಿರುಗಿಸಲು ಅರಣ್ಯ ಇಲಾಖೆ ಗಡುವು|ನೀವು ಮಾಡಬೇಕಿದ್ದು ಏನು ವಿವರ ನೋಡಿ.

TextMaster 01 25 07.49.03 TextMaster 01 25 07.49.03

ಕಾರವಾರ ,ಜನವರಿ 25:- ನಿಮ್ಮ ಮನೆಗಳಲ್ಲಿ ವನ್ಯಜೀವಿಗಳಿಗೆ ಸಂಬಂಧಪಟ್ಟ ವಸ್ತುಗಳು ಇದೆಯಾ? ಹಾಗಿದ್ರೆ ಈ ಸುದ್ದಿಯನ್ನು ನೀವು ಓದಲೇ ಬೇಕು.ಯಾಕೆಂದರೆ ನೀವು ಆ ವಸ್ತುಗಳನ್ನು ಏ.11-2024 ರ ಒಳಗೆ ಅರಣ್ಯ ಇಲಾಖೆಗೆ ಹಿಂದಿರುಗಿಸದಿದ್ದರೇ ನೀವು ಜೈಲಿಗೆ ಹೋಗುವ ಸಾಧ್ಯತೆಗಳಿವೆ. ಹೌದು.

ಹುಲಿ ಉಗುರು, ಜಿಂಕೆ ಕೊಂಬು ಸೇರಿದಂತೆ ಅಘೋಷಿತ ವನ್ಯಜೀವಿ ಅಂಗಾಂಗ, ಟ್ರೋಫಿಗಳು ಇದ್ದಲ್ಲಿ ಏ.11ರ ಒಳಗೆ ಅರಣ್ಯ ಇಲಾಖೆಗೆ ಹಿಂತಿರುಗಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಸಿ.ಸಿ.ಎಫ್ ವಸಂತ್ ರೆಡ್ಡಿಯವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:- ಅರಬ್ಬಿ ಸಮುದ್ರದಲ್ಲಿ ಸಿಕ್ತು ಬರೋಬ್ಬರಿ 400 ಕೆಜಿ ತೂಕದ ಮೀನು!

Advertisement

ವನ್ಯಜೀವಿಗಳ ಅಂಗಾಂಗ, ಟ್ರೋಫಿಗಳು, ಸಂಸ್ಕರಿಸಿದ ಟ್ರೋಫಿಗಳು ಇದ್ದಲ್ಲಿ ಸಮೀಪದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿಗಳು ಅಥವಾ ಸಮೀಪದ ಪೊಲೀಸ್‌ ಠಾಣೆಗೆ ಮರಳಿಸಬಹುದು. ನಮೂನೆ 1ನ್ನು ಪಡೆದು, 100 ರೂ. ಮೌಲ್ಯದ ಛಾಪಾ ಕಾಗದದಲ್ಲಿ ಅಫಿಡವಿಟ್‌ ಮುದ್ರಿಸಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಅರಣ್ಯ ಇಲಾಖೆ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಅಧಿಕೃತ ಜ್ಞಾಪನಾ ಪತ್ರದಲ್ಲಿ ಏನಿದೆ ವಿವರ ಈ ಕೆಳಗಿನಂತಿದೆ.:-

IMG 20240125 193933
IMG 20240125 193902
IMG 20240125 193829
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement