BREAKING NEWS
Search

ನೌಕಾದಳದಿಂದ ಪತ್ರಕರ್ತರಿಗೆ ವಸ್ತ್ರ ಸಂಹಿತೆ ಜಾರಿ ಕಾರ್ಯಕ್ರಮಕ್ಕೆ ಗೈರಾಗಿ ಪ್ರತಿರೋಧದ ಉತ್ತರ ನೀಡಿದ ಪತ್ರಕರ್ತರು

276

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾ ನೆಲಯಲ್ಲಿ (kadamba naval base) ನೌಕಾದಿನ ಹಾಗೂ ನೌಕಾದಳದ ಶಾಲಾ ಮಕ್ಕಳ ಕಾರ್ಯಕ್ರಮ ಆಯೋಜನೆ ಮಾಡಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಆಗಮಿಸಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯದ ಪತ್ರಿಕೆ ಮತ್ತು ಟಿ.ವಿ ಮಾಧ್ಯಮಗಳಿಗೆ ಸುದ್ದಿ ಮಾಡಲುಆಹ್ವಾನಿಸಲಾಗಿತ್ತು.
ಇದನ್ನೂ ಓದಿ:-ಭ್ರೂಣ ಲಿಂಗ ಪತ್ತೆ ಕುರಿತು ಮಾಹಿತಿ ನೀಡಿದ್ರೆ 1 ಲಕ್ಷ ಬಹುಮಾನ: ಸಚಿವ ದಿನೇಶ್ ಗುಂಡೂರಾವ್

ಆದರೇ ಕಾರ್ಯಕ್ರಮ ಕ್ಕೆ ಬರುವ ಪತ್ರಕರ್ತರಿಗೆ (Reporters) ವಸ್ತ್ರ ಸಂಹಿತೆ ಜಾರಿಮಾಡಿದ್ದು ಕಾರ್ಯಕ್ರಮದ ಸುದ್ದಿಯನ್ನು ಕವರ್ ಮಾಡಲು ಬರುವ ಪತ್ರಕರ್ತರು ಚಪ್ಪಲಿ ದರಿಸುವಂತಿಲ್ಲ, ಟೀಶರ್ಟ ಧರಿಸುವಂತಿಲ್ಲ ಅಂತ ಪತ್ರಕರ್ತರಿಗೆ ಪ್ರವೇಶ ನಿಷೇಧ ವನ್ನು ಕಾರವಾರದ ನೌಕಾದಳ ಅಧಿಕಾರಿಗಳು ಹೇರಿದ್ದು ,ಕಾರ್ಯಕ್ರಮಕ್ಕೆ ಆಗಮಿಸುವ ಪತ್ರಕರ್ತರು ಶೂ ಧರಿಸಿ ,ಕ್ಯಾಸುವಲ್ ಶರ್ಟ ನನ್ನು ಹಾಕಬೇಕು ,ಧರಿಸುವ ಶರ್ಟ ,ಪ್ಯಾಂಟ್ ಗಳು ಸುಂದರವಾಗಿ ಕಾಣುವಂತಿರಬೇಕು ಎಂಬ ಶರತ್ತು ವಿಧಿಸಿದೆ.

ಇನ್ನು ಈ ರೀತಿ ಕಾರ್ಯಕ್ರಮಕ್ಕೆ ಆಗಮಿಸುವ ಪತ್ರಕರ್ತರಿಗೆ ವಾಟ್ಸ್ ಅಪ್ ಮೂಲಕ ಸಂದೇಶ ರವಾನಿಸಲಾಗಿದೆ. ಇನ್ನು ಇಷ್ಟು ವರ್ಷಗಳು ಕಾರವಾರದ ಕದಂಬ ನೌಕಾನೆಲೆಯಲ್ಲಿ ರಾಷ್ಟ್ರಪತಿ,ಪ್ರಧಾನಿ, ರಾಜ್ಯಪಾಲರು,ಕೇಂದ್ರ ಸಚಿವರು ಆಗಮಿಸಿದಾಗ ಯಾವುದೇ ನಿರ್ಬಂಧ ಇಲ್ಲದೇ ಆಹ್ವಾನಿಸಲಾಗುತಿತ್ತು. ಆದರೇ ಇದೀಗ ವಸ್ತ್ರ ಸಂಹಿತೆ ಜೊತೆ ಪತ್ರಕರ್ತರ ಚಪ್ಪಲಿಗೂ ನಿರ್ಬಂಧ ಹೇರಿದ ಹಿನ್ನಲೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದಿಂದ ನೌಕಾನೆಲೆಯ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:- ರಾಜಭವನಕ್ಕೆ ಬಾಂಬ್ ಬೆದರಿಕೆ ಕಾಕಿದವ ಆರೆಸ್ಟ್




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!