karwar |ಪತ್ರಿಕಾ ಭವನ ನಿರ್ವಹಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ.

89

ಕಾರವಾರ: ಜಿಲ್ಲಾ ಪತ್ರಿಕಾ ಭವನದ ನಿರ್ವಹಣಾ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ನಗರದ ಪತ್ರಿಕಾಭವನದಲ್ಲಿ ನಡೆದ ಸಮಿತಿಯ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಕರಾವಳಿ ಮುಂಜಾವು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಟಿ.ಬಿ. ಹರಿಕಾಂತ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಸಮಿತಿ ಉಪಾಧ್ಯಕ್ಷರಾಗಿ ಹಿರಿಯ ವರದಿಗಾರ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕಾ ಜಿಲ್ಲಾ ವರದಿಗಾರ ಸುಭಾಶ್ ಚಂದ್ರ ಎನ್.ಎಸ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ, ನುಡಿಜೇನು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಸಂದೀಪ ಸಾಗರ ಎಂ.ವಿ ಆಯ್ಕೆಯಾಗಿದ್ದು, ಖಜಾಂಚಿಯಾಗಿ ಪ್ರಜಾವಾಣಿ ಪತ್ರಿಕೆ ಜಿಲ್ಲಾ ವರದಿಗಾರ ಗಣಪತಿ ಹೆಗಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪತ್ರಕರ್ತ ಎಂ.ಪಿ ಕಾಮತ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಆಯ್ಕೆ ನಂತರ ಮಾತನಾಡಿದ ಅಧ್ಯಕ್ಷರಾದ ಟಿ.ಬಿ ಹರಿಕಾಂತ್ ಜಿಲ್ಲಾ ಪತ್ರಿಕಾ ಭವನ ಇಡೀ ರಾಜ್ಯದಲ್ಲಿಯೇ ಮಾದರಿಯಾಗಿ ನಿರ್ಮಾಣವಾಗಿದೆ. ಇದು ಎಲ್ಲಾ‌ ಸದಸ್ಯರ ಸಹಕಾರವೇ ಪ್ರಮುಖ ಕಾರಣ. ಸಮಿತಿಯ ಎಲ್ಲಾ ಸದಸ್ಯರ ಹಿತವನ್ನ ಕಾಪಾಡಿಕೊಂಡು ಮುಂದಿನ ದಿನದಲ್ಲಿ ಕಾರ್ಯನಿರ್ವಹಿಸಲಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ದೀಪಕ್ ಶೆಣೈ, ವಸಂತ್ ಕುಮಾರ್ ಕತಗಾಲ್, ನವೀನ್ ಸಾಗರ್,ಪ್ರಮೋದ್ ಹರಿಕಂತ್ರ, ಇದನ್ನೂ ಓದಿ:-ಕರಾವಳಿ ಮುಂಜಾವು ಪತ್ರಿಕೆಯ ಹಿರೇಗುತ್ತಿಯಿಂದ ಹಣಕ್ಕಾಗಿ ಬ್ಲಾಕ್ ಮೇಲ್! (ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಶೇಷಗಿರಿ ಮುಂಡಳ್ಳಿ, ನಾಗೇಂದ್ರ ಖಾರ್ವಿ, ‌ ಗಿರೀಶ್ ನಾಯ್ಕ, ದರ್ಶನ್ ನಾಯ್ಕ, ಉದಯ್ ಬರ್ಗಿ, ಸುನೀಲ್ ನಾಯ್ಕ, ಸಂದೀಪ್ ಸಾಗರ್‌ ಎಸ್ ಎಸ್, ದೇವರಾಜ್ ನಾಯ್ಕ, ವಾಸುದೇವ ಗೌಡ, ಕಿಶನ್ ಗುರಾವ್, ಪ್ರವೀಣ್, ಭರತ್ ರಾಜ್, ಮಂಜುನಾಥ ಪಟಗಾರ್, ಗಿರೀಶ್ ಬಾಂದೇಕರ್, ಗೌತಮ್ ಬಾಡ್ಕರ್, ಸುರೇಂದ್ರ, ದಿಲೀಪ್ ರೇವಣಕರ್ ಸಾಯಿ ಕಿರಣ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!