Karwar|ಸಮಾಜದಲ್ಲಿ ಅಶಾಂತಿ ಹುಟ್ಟುಹಾಕಲು ಶಾಸಕ ಸೈಲ್ ವಿರುದ್ಧ ಗೋಪಾಲಕೃಷ್ಣ ನಾಯಕ ಯತ್ನ -ಶಂಭು ಶಟ್ಟಿ.
Karwar/ಕಾರವಾರ: ಇತ್ತೀಚೆಗೆ ಅಂಕೋಲದಲ್ಲಿ ಮಾಜಿ ಕೆಪಿಸಿಸಿ ಕಾರ್ಯದರ್ಶಿ ಗೋಪಲಕೃಷ್ಣ ನಾಯ್ಕ ಹತ್ಯೆಗೆ ಯತ್ನ ಘಟನೆ ಜಿಲ್ಲೆಯಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಕಾರವಾರದಲ್ಲಿ (karwar) ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಗೋಪಾಲಕೃಷ್ಣ ನಾಯ್ಕ ತನ್ನ ಹತ್ಯೆಗೆ ಸೂಪಾರಿ ನೀಡಿದವರ ಜೊತೆ ಕಾರವಾರದ ಶಾಸಕ ಸತೀಶ್ ಸೈಲ್ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದರು.
ಇದಲ್ಲದೇ ತನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನ ಸಾಗಿದೆ, ರಾಜಕೀಯ ದ್ವೇಶವೇ ನನ್ನ ಹತ್ಯೆಗೆ ಪ್ರಯತ್ನ ಮಾಡಲಾಗಿದೆ ಎಂದು ನೇರ ಆರೋಪ ಮಾಡಿದ್ದರು.
Karwar| ಸಿಲೆಂಡರ್ ಅಭಾವ -ಕಟ್ಟಿಗೆಗೆ ಡಿಮಾಂಡ್ ಅರಣ್ಯ ಇಲಾಖೆಯಿಂದ 3ಲಕ್ಷ ಮರಗಳ ಕಟಾವಿಗೆ ಅನುಮತಿ.
ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ರಾಜಕೀಯ ರಂಗದಲ್ಲಿ ಮುಸುಕಿನ ಗುದ್ದಾಟದಲ್ಲಿ ಇದ್ದ ಶಾಸಕ ಸೈಲ್ ಹಾಗೂ ಗೋಪಾಲ್ ನಡುವಿನ ದ್ವೇಷಗಳು ಇದೀಗ ಮುನ್ನೆಲೆಗೆ ಬಂದಿದೆ.
ಈ ಕುರಿತು ಜಿಲ್ಲಾ ಕಾಂಗ್ರೆಸ್ ಕಾರವಾರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ್ದು ಗೋಪಾಲ್ ನಾಯಕ ರವರ ಆಧಾರ ರಹಿತ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದೆ.
ಸಮಾಜದಲ್ಲಿ ಅಶಾಂತಿ ಹುಟ್ಟುಹಾಕಲು ಹಾಗೂ ಜನರಲ್ಲಿ ಗೊಂದಲ ಸೃಷ್ಟಿ ಮಾಡಲು, ಅಂಕೋಲಾದಲ್ಲಿ ಹಲ್ಲೆಗೆ ಒಳಗಾದ ಗೋಪಾಲಕೃಷ್ಣ ನಾಯಕ ಯತ್ನ ಮಾಡುತಿದ್ದಾರೆ. ಶಾಸಕ ಸತೀಶ್ ಸೈಲ್ ವಿರುದ್ಧ ಇಲ್ಲ-ಸಲ್ಲದ ಹೇಳಿಕೆ ನೀಡಿದ್ದು ಖಂಡನೀಯ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ. ಶಂಭು ಶೆಟ್ಟಿ ಗೋಪಾಲಕೃಷ್ಣ ನಾಯ್ಕ ಹೇಳಿಕೆಯನ್ನ ಖಂಡಿಸಿದರು.
Ankola|ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಹತ್ಯೆ ಪ್ರಯತ್ನದ ಹಿಂದೆ ಪ್ರಭಾವಿಗಳ ಕೈವಾಡ !?
ಕಾರವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ಕಡೆದ ಸುದ್ದಿಗೋಷ್ಠಿ ನಡೆಸಿದ ಅವರು ಇತ್ತೀಚೆಗೆ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಮುಂದಿಟ್ಟುಕೊಂಡು, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯ್ಕ ಅವರು ಶಾಸಕ ಸತೀಶ್ ಸೈಲ್ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಗೊಂದಲ ಸೃಷ್ಟಿ ಮಾಡಿದೆ ಎಂದರು.
ದೃಶ್ಯ ಮಾಧ್ಯಮಗಳ ಮುಂದೆ ಸತೀಶ್ ಸೈಲ್ ಅವರ ಹೆಸರನ್ನು ಅನಗತ್ಯವಾಗಿ ಎಳೆದು ತರುವ ಮೂಲಕ ಗೋಪಾಲಕೃಷ್ಣ ಅವರು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸಮಿತಿ ಮತ್ತು ಸತೀಶ್ ಸೈಲ್ ಬೆಂಬಲಿಗರು ತೀವ್ರವಾಗಿ ಖಂಡಿಸಿದ್ದಾರೆ.
ಹಲ್ಲೆ ನಡೆದ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್ ಅವರು ಘಟನೆಯನ್ನು ಈಗಾಗಲೇ ಖಂಡಿಸಿದ್ದಾರೆ. ಆದರೇ, ಗೋಪಾಲಕೃಷ್ಣ ನಾಯಕ ಹಲ್ಲೆಕೋರರ ಹಿಂದೆ ಸೈಲ್ ಅವರ ಕೈವಾಡವಿದೆ ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ. ಒಂದು ವೇಳೆ ಅವರಿಗೆ ಯಾರ ಮೇಲಾದರೂ ಸಂಶಯವಿದ್ದರೆ ಅದನ್ನು ನೇರವಾಗಿ ಪೊಲೀಸರಿಗೆ ತಿಳಿಸಿ ದೂರು ನೀಡಬೇಕಿತ್ತು. ಅದನ್ನು ಬಿಟ್ಟು, ಯಾವುದೇ ಅಧಿಕೃತ ದೂರು ದಾಖಲಿಸದೆ ಕೇವಲ ರಾಜಕೀಯ ದ್ವೇಷಕ್ಕಾಗಿ ಸಾರ್ವಜನಿಕವಾಗಿ ಆರೋಪ ಮಾಡುವುದು ಸಮಾಜದಲ್ಲಿ ಅಶಾಂತಿ ಮೂಡಿಸುವ ತಂತ್ರವಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಸುಮೋಟೋ (suo moto) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದರು.
Ankola| ಗೋಪಾಲ್ ನಾಯ್ಕ ಹತ್ಯೆಗೆ ವಿಫಲ ಪ್ರಯತ್ನ ಪರಾರಿಯಾದ ಆರೋಪಿಗಳ ಬಂಧನ
ಗೋಪಾಲಕೃಷ್ಣ ನಾಯ್ಕ ಅವರು ತಾವು ಚುನಾವಣಾ ಆಕಾಂಕ್ಷಿ ಎಂಬ ಕಾರಣಕ್ಕೆ ಸತೀಶ್ ಸೈಲ್ ಅವರ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ ಎಂಬುದು ಅವರ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ. ಸತೀಶ್ ಸೈಲ್ ಅವರು ಶಾಂತ ಸ್ವಭಾವದ ವ್ಯಕ್ತಿಯಾಗಿದ್ದು, ವಯಕ್ತಿಕ ಕೇಸ್ ಅವರ ಮೇಲೆಇರಬಹುದು, ಅವರ ಮೇಲೆ ಯಾವುದೇ ರೌಡಿಸಂ ಪ್ರಕರಣಗಳಿಲ್ಲ.
ಗೋಪಾಲಕೃಷ್ಣ ಅವರ ಇಂತಹ ಭಾವನಾತ್ಮಕ ಹೇಳಿಕೆಗಳು ಸತೀಶ್ ಸೈಲ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವುದಲ್ಲದೆ, ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೂ ಹಾನಿ ಉಂಟುಮಾಡುತ್ತಿದೆ. ಟೋಲ್ ವಿಚಾರದಲ್ಲಿ ನಡೆದ ಗಲಾಟೆಯಲ್ಲೂ ಗೋಪಾಲಕೃಷ್ಣ ಅವರು ಸೈಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು, ಇದು ಅವರಲ್ಲಿರುವ ಹಳೆಯ ದ್ವೇಷವನ್ನು ಎತ್ತಿ ತೋರಿಸುತ್ತದೆ .
ಪೊಲೀಸರು ಗೋಪಾಲಕೃಷ್ಣ ನಾಯಕ ಹತ್ತಿರ ಲಿಖಿತ ದೂರು ಪಡೆದು, ತನಿಖೆ ಮಾಡಲಿ. ಈ ವಿಷಯದಲ್ಲಿ ಸತೀಶ್ ಸೈಲ್ ಅವರ ವಿರುದ್ಧ ಸಾಕ್ಷ್ಯ ಇದ್ದರೆ ಅವರ ಮೇಲೂ ಪೊಲೀಸರು ಎಫ್ಐಆರ್ ಹಾಕಲಿ ಎಂದು ಶಂಭು ಶೆಟ್ಟಿ ಸವಾಲು ಹಾಕಿದ ಅವರು ಈ ರೀತಿ ಮಿಥ್ಯ ಆರೋಪ ಮಾಡಿದ ಪಕ್ಷದಲ್ಲಿ ಗೋಪಾಲಕೃಷ್ಣ ನಾಯಕ ವಿರುದ್ಧ ಕಾನೂನು ಕ್ರಮ ಆಗಲೇಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್ ಮಾತನಾಡಿ ಮಯೂರ ನಾಯಕ ಅವರ ಕುಟುಂಬದವರು, ಹೇಳಿಕೆ ನೀಡಿದ್ದು ಈ ಪ್ರಕರಣಕ್ಕೆ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.
ಹಲವು ಗೊಂದಲ !

ಇನ್ನು ಗೋಪಾಲಕೃಷ್ಣ ನಾಯಕ ರವರು ತಮ್ಮ ಮೇಲೆ ಹತ್ಯೆಗೆ ಯತ್ನ ಮಾಡಿದ್ದ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸತೀಶ್ ಸೈಲ್ ಆಗಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಾಗಲಿ ಕರೆಮಾಡಲಿಲ್ಲ, ವಿರೋಧ ಪಕ್ಷದ ಮುಖಂಡರು ಕರೆಮಾಡಿ ಆರೋಗ್ಯ ವಿಚಾರಿಸಿದರು. ಅವರಿಗೆ ಈ ಘಟನೆ ಆಗಿರುವುದು ತಿಳಿದಿಲ್ಲವೇನೋ ಎಂದು ಹೇಳಿದ್ದರು.
ಇದಲ್ಲದೇ ತನ್ನ ಮೇಲೆ ಅಂಕೋಲ ಠಾಣೆಯಲ್ಲಿ ಶಾಸಕ ಸೈಲ್ ಹಾಗೂ ಸಚಿವ ಮಂಕಾಳು ವೈದ್ಯ ಸುಳ್ಳು ಪ್ರಕರಣ ದಾಖಲಾಗುವಂತೆ ಮಾಡಿದ್ದರು ,ಚುನಾವಣೆ ಸಂದರ್ಭದಲ್ಲಿ ನನ್ನ ಸೋಲಿಸಲು ವಿರೋಧಿಗಳ ಜೊತೆ ಕೈ ಜೋಡಿಸಿದ್ದರು. ಈ ಹತ್ಯೆ ಪ್ರಯತ್ನಕ್ಕೆ ರಾಜಕೀಯ ಕಾರಣ ಬಿಟ್ಟರೇ ಬೇರೇನೂ ಇಲ್ಲ ಎಂದು ಅವರು ಹೇಳಿದ್ದರು. ಇದಲ್ಲದೇ ಕೊನೆಯಲ್ಲಿ ಅಡ್ಡಗೋಡೆ ದೀಪ ಇಟ್ಟಂತೆ ಸತೀಶ್ ಸೈಲ್ ಹತ್ಯೆ ಮಾಡಿಸುವಷ್ಟರ ಮಟ್ಟಿಗೆ ಹೋಗುವ ವ್ಯಕ್ತಿ ಅವರಲ್ಲ ಎಂದು ಸಹ ಹೇಳಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಗೋಪಾಲ್ ಹೇಳಿಕೆ ಹಿಂಪಡೆಯಲಿ- ಸಮೀರ್ ನಾಯ್ಕ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ ಮಾತನಾಡಿ, ಗೋಪಾಲಕೃಷ್ಣ ಅವರು ಊಹಾಪೋಹಗಳನ್ನು ಹರಡುತ್ತಿರುವುದು ದುರದೃಷ್ಟಕರ. ಈ ಹಿಂದೆ ಶಿರೂರಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ದಾಗಲೂ ಶಿಷ್ಟಾಚಾರ ಉಲ್ಲಂಘಿಸಿ ಸೈಲ್ ಅವರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿಗಳನ್ನು ತಮ್ಮ ಮನೆಗೆ ಕರೆದೊಯ್ದು ರಾಜಕೀಯ ಲಾಭಕ್ಕೆ ಯತ್ನಿಸಿದ್ದರು ಎಂದು ಸಮೀರ್ ನೆನಪಿಸಿದ್ದಾರೆ. ಗೋಪಾಲಕೃಷ್ಣ ಅವರು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು, ಇಲ್ಲದಿದ್ದರೆ ಪೊಲೀಸರು ಅವರ ಸುಳ್ಳು ಆರೋಪಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಕಾರ್ಯಕರ್ತರ ಆಗ್ರಹವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲಗುಟ್ಕರ್, ಕೃಷ್ಣ ಮೇಥಾ, ಸೀಮಾ ಪಾಟೀಲ್, ಜ್ಯೋತಿ, ದೀಪಕ ವೇರ್ಣೇಕರ್, ದಿಲ್ಶಾದ್, ಸಿದ್ದಾರ್ಥ ,ನೂತನ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.







