ಪ್ರಾಣ ಉಳಿಸಿಕೊಳ್ಳಲು ಪರದಾಡಿದ ಮೀನಿನ ಬಾಯಿಗೆ ಬೀಡಿ ಇರಿಸಿ ವಿಕೃತಿ!

1235

ಕಾರವಾರ: ಪ್ರಾಣ ಉಳಿಸಿಕೊಳ್ಳಲು ಮೀನು ಬಾಯಿ ತೆಗೆದ್ರೆ ಕೆಲ ವಿಕೃತ ಮನಸ್ಸುಗಳು ಬೀಡಿ ಇರಿಸಿ ವಿಕೃತಿ ಮೆರೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ವಿಕೃತ ಮನಸ್ಸುಗಳ ವಿರುದ್ಧ ಕಿಡಿಕಾರಿದ್ದಾರೆ.

ಕಾರವಾರದ ಬೈತಕೋಲ ಮೀನುಗಾರಿಕೆ ಬಂದರಿನಲ್ಲಿ ಈ ಘಟನೆನಡೆದಿದ್ದುಎಂದು ವರಿಸ್ಸಾ ಮೂಲದ ಕಾರ್ಮಿಕರು ಬೊಂಡಾಸ ಹೆಸರಿನ ಮೀನು ಹಿಡಿದಿದ್ದಾರೆ. ಮೀನು ತನ್ನ ಜೀವ ಉಳಿಸಿಕೊಳ್ಳುವದಕ್ಕಾಗಿ ಬಾಯಿ ತೆಗೆದು ಉಸಿರಾಡುತ್ತಿತ್ತು. ಇದೇ ವೇಳೆ ಅಲ್ಲಿದ್ದ ಕಾರ್ಮಿಕನೋರ್ವ ಬೀಡಿ ಹಚ್ಚಿ ಮೀನಿನ ಬಾಯಿಗೆ ಇಟ್ಟಿದ್ದಾನೆ. ಈ ಎಲ್ಲ ದೃಶ್ಯಗಳನ್ನು ಮೊಬೈಲಿನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಬೋಟ್ ಕಾರ್ಮಿಕರ ವರ್ತನೆ ಕಂಡ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಮೀನಿನ ಜೊತೆ ಅಮಾನವೀಯ ವರ್ತನೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!