Lokayukta raid |ಉತ್ತರ ಕನ್ನಡ ಜಿಲ್ಲೆಯ ನಗರಸಭೆ, ಹಾಸ್ಟೆಲ್ ,ಆಸ್ಪತ್ರೆಗಳಿಗೆ ಲೋಕಾಯುಕ್ತ ದಾಳಿ.
ಕಾರವಾರ :- ಸಾರ್ವಜನಿಕರ ಕೆಲಸಗಳು ವಿಳಂಬ ಹಾಗೂ ಕೆಲಸಗಳ ನಿರ್ಲಕ್ಷದ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಎರಡು ನಗರಸಭೆ,ಆಸ್ಪತ್ರೆ,ಹಾಸ್ಟೆಲ್ ಗಳಿಗೆ ಲೋಕಾಯುಕ್ತ ಅಧಿಕಾರಿಗಳ (Lokayukta raid)ದಿಢೀರ್ ದಾಳಿ ನಡೆಸಿದ್ದಾರೆ .ಲೋಕಾಯುಕ್ತ ದಲ್ಲಿ ದಾಖಲಾಗಿರುವ ಸುಮೋಟೋ ಪ್ರಕರಣ ಸಂಬಂಧ ಈ ದಾಳಿ ನಡೆದಿದ್ದು ,ಲೋಕಾಯುಕ್ತ ಎಸ್.ಪಿ ದಿನೇಶ್ ಕುಮಾರ್ ನೇತ್ರತ್ವದಲ್ಲಿ ಕಾರವಾರ ,ಶಿರಸಿ ನಗರಸಭೆ, ಜಿಲ್ಲೆಯ 9 ಹಾಸ್ಟಲ್ ಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿದೆ.
ಇದನ್ಬೂ ಓದಿ:-Uttara kannada-ಗೃಹಲಕ್ಷ್ಮೀ ಯೋಜನೆ ಮರಣ ಹೊಂದಿದ 2724 ಖಾತೆಗೆ ಹಣ ಜಮ- ಖಾತೆ ಇಲ್ಲದವರಿಗೂ ಹಣ ಜಮಾ !
ಶಿರಸಿ ಹಾಗೂ ಕಾರವಾರ ನಗರಸಭೆಯಲ್ಲಿ ದಾಖಲೆ, ಕಡತಗಳ ಪರಿಶೀಲನೆ ನಡೆಸುತಿದ್ದು ,ಕಂದಾಯ, ತೆರಿಗೆ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಪರಿಶೀಲನೆ ನಡೆಸಲಾಗಿದೆ.ಇನ್ನು ನಗರಸಭೆಯಲ್ಲಿ ಬಾಕಿ ಉಳಿಸಿಕೊಂಡಿರುವ ಕಡತಗಳ ಬಗ್ಗೆ ಪರಿಶೀಲನೆ ಮಾಡಲಾಗುತಿದ್ದು ,ಜಿಲ್ಲೆಯ ವಿವಿಧ ಹಾಸ್ಟಲ್ ಮತ್ತು ಆಸ್ಪತ್ರೆಗಳಲ್ಲಿ ಸಹ ದಾಖಲೆ ಹಾಗೂ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.ಎರಡು ದಿನದ ಹಿಂದೆ ಜಿಲ್ಲೆಯ 12 ತಾಲೂಕಿನ ತಹಸೀಲ್ದಾರ್ ಕಚೇರಿಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಇಂದು ಸಹ ಈ ದಾಳಿಯನ್ನು ಮುಂದುವರೆಸಿದ್ದು ,ಪರಿಶೀಲನೆ ಬಳಿಕ ಲೋಕಾಯುಕ್ತ ಕೇಂದ್ರ ಕಚೇರಿಗೆ ವರದಿಯನ್ನು ಆಧಿಕಾರಿಗಳು ಸಲ್ಲಿಸಲಿದ್ದಾರೆ.

