Honnavara KSRTC bus stop

Honnavara| ತಗ್ಗಿದ ನೀರು ಮುಳುಗಿದ ಬಸ್ ನಿಲ್ದಾಣ!

85

Honnavara| ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (Honnavara ) ದಲ್ಲಿ ಕಳೆದ ಎರಡು ದಿನದಿಂದ ಸುರಿದ ಮಳೆಯಿಂದ ಗುಂಡಬಾಳ ನದಿ ನೀರಿನಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದರೇ 60 ಕ್ಕೂ ಹೆಚ್ಚು ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ರವಾನೆ ಮಾಡಲಾಗಿತ್ತು. ಆದರೇ ಇದೀಗ ಮಳೆ ಪ್ರಮಾಣ ಅಲ್ಪ ಇಳಿಕೆಯಾಗಿದ್ದು ಇದರಿಂದ ನದಿಯ ಅಪಾಯದ ಮಟ್ಟ ತಗ್ಗಿದೆ.

ಇದನ್ನೂ ಓದಿ:-Uttrakannada| ಒಂಟಿ ಮನೆ ಮಾಲೀಕರೇ ಎಚ್ಚರ! ಹಗಲಲ್ಲೂ ಮಾಡ್ತಾರೆ ದರೋಡೆ!

ಆದರೇ ಹೊನ್ನಾವರ ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಬಸ್ ನಿಲ್ದಾಣ ಭಾಗದ ಪ್ರದೇಶಗಳು ಜಲಾವೃತವಾಗಿದೆ.

ಬಸ್ ನಿಲ್ದಾಣ ನಿರ್ಮಿಸುವ ವೇಳೆ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದು ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದೇ ಇರುವುದೇ ಇದಕ್ಕೆ ಹೊಣೆ ಎಂಬುದು ಸ್ಥಳೀಯರ ದೂರ.

ಆದರೇ ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಪ್ರತಿ ವರ್ಷ ಸಾರಿಗೆ ಇಲಾಖೆಯ ಬಸ್ ನಿಲ್ದಾಣ ದಲ್ಲಿ ಈಜುಕೊಳವೇ ಸೃಷ್ಟಿಯಾಗುತಿದ್ದು ವಾಹನದ ಸಮೇತ ಜನ ಈಜಾಡಲು ಬೇಕಾದ ಅವ್ಯವಸ್ತೆ ವ್ಯವಸ್ಥಿತವಾಗಿ ಮಾಡಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!