Consumer court KSRTC depot manager against case

KSRTC ಕುಮಟಾ ಡಿಪೋ ಮ್ಯಾನೇಜರ್ ಗೆ 50 ಸಾವಿರ ದಂಡ! ಬಡ್ಡಿ ಸಮೇತ ಹಣ ಹಿಂತಿರುಗಿಸಲು ನ್ಯಾಯಾಲಯ ಆದೇಶ

148

ಕಾರವಾರ :- ಕೆಲವು ಅಧಿಕಾರಿಗಳು(officer) ತಾವು ಮಾಡಿದ್ದೇ ಸರಿ ಎನ್ನುವ ಅಹಂ ನಲ್ಲಿ ಇರುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವಾಯುವ್ಯ ಸಾರಿಗೆ (NWKSRTC)ಡಿಪೋ ಮ್ಯಾನೇಜರ್ ಗೆ ಗ್ರಾಹಕರ ನ್ಯಾಯಾಲಯವು (consumer court )KSRTC ನಿವೃತ್ತ ನೌಕರನಿಗೆ ಹಣದ ಬಡ್ಡಿ ಸಮೇತ ಕೊಡುವ ಜೊತೆ 50 ಸಾವಿರ ಹಣವನ್ನು ನ್ಯಾಯಾಲಯಕ್ಕೆ ಕಟ್ಟುವಂತೆ ಆದೇಶ ಮಾಡಿದೆ. ಏನಿದು ಪ್ರಕರಣ ಅಂತೀರಾ, ಹಾಗಿದ್ರೆ ಈ ಸುದ್ದಿ ಓದಿ.

2022 ರ ಆಗಸ್ಟ್ ನಲ್ಲಿ ಕುಮಟಾ ದ (kumta) ಅಳ್ವೆಕೋಡಿಯ ಕೆಎಸ್.ಆರ್.ಟಿ.ಸಿ ನಿವೃತ್ತ ನೌಕರ ಶೇಷು ಹರಿಕಾಂತ್ರ ರವರು ದಾವಣಗೆರೆಗೆ ತೆರಳಲು ಧಾರ್ಮಿಕ ಕಾರ್ಯಕ್ಕಾಗಿ ಮುಂಗಡ 21 ಸಾವಿರ ಹಣ ನೀಡಿ ವಾಯುವ್ಯ ಸಾರಿಗೆ ಬಸ್ ನನ್ನು ಬುಕ್ ಮಾಡಿದ್ದರು.ಆದರೇ ಅದೇ ದಿನ ರಾತ್ರಿ ಬಸ್ ನನ್ನು ನೀಡಲಾಗುವುದಿಲ್ಲ ಖಾಸಗಿ ಬಸ್ ಬುಕ್ ಮಾಡಿಕೊಳ್ಳುವಂತೆ ಡಿಪೋ ಮ್ಯಾನೇಜರ್ ವೈ.ಕೆ ಬಾನವಾಳಿಕರ್ ತಿಳಿಸಿದ್ದಾರೆ.

ಈ ಬಗ್ಗೆ ಕಾರಣ ಕೇಳಿದರೂ ಸಕರಾತ್ಮಕವಾಗಿ ಸ್ಪಂದಿಸಸ ಕಾರಣ ಡಿಪೋ ಮ್ಯಾನೇಜರ್ ವಿರುದ್ಧ ಶೇಷು ಹರಿಕಾಂತರ ಗ್ರಾಹಕರ ಕೋರ್ಟ ನಲ್ಲಿ ದಾವೆ ಹೂಡಿದ್ದು ಈ ಕುರಿತು ನ್ಯಾಯಾಧೀಶರಾದ ಮಂಜುನಾಥ್ .ಎಮ್ ,ಬೊಮ್ನನಕಟ್ಟಿಯವರು ವಾದ ವಿವಾಧವನ್ನು ಆಲಿಸಿ ನ್ಯಾಯಾಲಯಕ್ಕೆ 50 ಸಾವಿರ ದಂಡ ಹಾಗೂ ಗ್ರಾಹಕನಿಂದ ಪಡೆದ 21 ಸಾವಿರಕ್ಕೆ 7% ಬಡ್ಡಿ ನೀಡಿ ಮರಳಿಸುವಂತೆ ಆದೇಶ ನೀಡಿದೆ.

ಕಳೆದ ಒಂದು ವರ್ಷದಿಂದ ಗ್ರಾಹಕರ ನ್ಯಾಯಾಲಯದಲ್ಲಿ ಹೋರಾಡಿದ ಅಳ್ವೆಕೋಡಿಯ ಶೇಷು ಹರಿಕ್ರಾಂತರಿಗೆ ಕೊನೆಗೂ ನ್ಯಾಯ ದೊರಕಿದ್ದು, ಅಸಡ್ಡೆ ಮಾಡಿ ನಂಬಿಕೆ ದ್ರೋಹ ಮಾಡಿದ ಅಧಿಕಾರಿಗೆ ಇದೀಗ ದಂಡ ತುಂಬುವ ಶಿಕ್ಷೆ ಯಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!