BREAKING NEWS
Search

Uttra kannada|ಮಂಗನಂತೆ ಜಿಗಿತ ಕಂಡ ಮಂಗನ ಕಾಯಿಲೆ! ಇಂದು ಸಾವಿನ ಸಂಖ್ಯೆ ಎಷ್ಟು ಗೊತ್ತಾ?

79

ಕಾರವಾರ ಮಾರ್ಚ,05:- ಉತ್ತರ ಕನ್ನಡ ಜಿಲ್ಲೆಯಲ್ಲಿ (uttra kannada)ಮಂಗನ ಕಾಯಿಲೆ ಸಂಖ್ಯೆ ಏರಿಕೆ ನಡುವೆ ಸಾವಿನ ಸಂಖ್ಯೆಯೂ ಹೆಚ್ಚಳವಾಗಿದ್ದು ಒಂದೇ ದಿನ ಒಬ್ಬರು ವೃದ್ಧರು ಸಾವು ಕಂಡಿದ್ದಾರೆ.

ಈ ವರ್ಷ ಜನವರಿಯಲ್ಲೇ ಸಿದ್ದಾಪುರ ತಾಲೂಕಿನಲ್ಲಿ ಮಂಗನಕಾಯಿಲೆ (KFD) ಕಾಣಿಸಿಕೊಂಡಿದ್ದು ಎರಡೇ ತಿಂಗಳಲ್ಲಿ 47 ಕ್ಕೆ ಏರಿಕೆ ಕಂಡಿದ್ದು ಜಿಲ್ಲೆಯ ಸಿದ್ದಾಪುರ,(siddapura) ಶಿರಸಿ,(sirsi)ಅಂಕೋಲ(ankola) ಭಾಗದಲ್ಲಿ ವ್ಯಾಪಿಸಿದೆ. ಇದಲ್ಲದೇ ಈ ಭಾಗದಲ್ಲಿ ಮೂರಕ್ಕೂ ಹೆಚ್ಚು ಮಂಗಗಳ ಸಾವಾಗಿದೆ.

ಇಂದು ಸಿದ್ದಾಪುರ ತಾಲೂಕಿನ ಹೆಗ್ಗೆಕೊಪ್ಪದ 80 ವರ್ಷದ ಹಾಗೂ ಕಲ್ಲೂರಿ‌ನ 68 ವರ್ಷದ ವೃದ್ಧರು ಚಿಕಿತ್ಸೆ ಫಲಕಾರಿಯಾಗದೇ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಅಸುನೀಗಿದ್ದು ಇದೀಗ ಜಿಲ್ಲೆಯಲ್ಲಿ ಮಂಗನಕಾಯಿಲೆ ಸಂಖ್ಯೆ 5ಕ್ಕೇರಿದೆ.

ಸದ್ಯ KFD ಕಾಯಿಲೆಯಿಂದ ( kyasanoor forest disease) ರಾಜ್ಯದಲ್ಲೇ ಅತೀ ಹೆಚ್ಚು ಸಾವು ಕಂಡ ದಾಖಲೆ ಜಿಲ್ಲೆಯದ್ದಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!