Siddapura | ಮಳೆ ಅಬ್ಬರಕ್ಕೆ ಗುಡ್ಡ ಕುಸಿತ

121

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಕಳೆದ ಎರಡು ದಿನದಿಂದ ಅಬ್ಬರದ ಮಳೆ( Rain) ಸುರಿಯುತಿದ್ದು ಇಂದು ಸುರಿದ ಮಳೆಗೆ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಸ್ವಿಗುಳಿಯಲ್ಲಿ ಗುಡ್ಡ ಕುಸಿತವಾಗಿದೆ.(Hill Collapse)

ಹಸ್ವಿಗುಳಿಯ ವೆಂಕಟರಮಣ ತಿಮ್ಮ ನಾಯ್ಕ, ಸದಾನಂದ ತಿಮ್ಮ ನಾಯ್ಕ ಹಾಗೂ ಪಾರ್ವತಿ ತಿಮ್ಮ ನಾಯ್ಕರವರ ವಾಸದ ಮನೆಯ ಹಿಂಭಾಗದಲ್ಲಿ ಗುಡ್ಡ ಕುಸಿತವಾಗಿದ್ದು ಇನ್ನೂ ಹೆಚ್ಚು ಮಳೆಯಾದರೇ ಗುಡ್ಡ ಕುಸಿದು ಮನೆಗಳಿಗೆ (Home) ಹಾನಿ ಸಂಭವಿಸುವ ಸಾಧ್ಯತೆಗಳಿವೆ.

ಕಳೆದ ಮೂರು ದಿನದ ಹಿಂದೆಯೇ ಉತ್ತರ ಕನ್ನಡ ಜಿಲ್ಲೆಯ ಭಾಗಗಳಲ್ಲಿ ಹೆಚ್ಚಿನ ಗಾಳಿ,ಮಳೆ ಜೊತೆ ಗುಡ್ಡ ಕುಸಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!