Siddapura news Uttrakannada

SIDDAPURA|ಭಾವನ ಬಯಸಿ ಬಂದ ನಾದಿನಿ ಕಬ್ಬಿನ ಹೊಳೆಯಲ್ಲಿ ಬುರುಡೆ ಬಿಚ್ಚಿದ ಬಾವ!

175

SIDDAPURA NEWS :– ಭಾವನನನ್ನು ನಂಬಿ ಬಂದ ನಾದಿನಿಗೆ ಬಿಯರ್ ಬಾಟಲ್ ನಲ್ಲಿ ತಲೆಗೆ ಹೊಡೆದು ಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಬ್ಬಿನ ಹೊಳೆ ಬಳಿ ನಡೆದಿದೆ.

ಸಿ.ಆರ್.ಪಿ.ಎಫ್ ನಲ್ಲಿ ಸೇವೆ ಸಲ್ಲಿಸುತಿದ್ದ ಧಾರವಾಡದ ಅಣ್ಣಿಗೇರಿ ಮೂಲದ ಕೊಟ್ರೇಶ್ (46 ವರ್ಷ), ಅಣ್ಣಿಗೇರಿ ಹತ್ಯೆಗೆ ಯತ್ನಿಸಿದ ಯೋಧನಾಗಿದ್ದಾನೆ.

ರೇಣುಕಾ ಪಟ್ಟೇದ್ (40 ವರ್ಷ) ಭಾವನಿಂದ ಹಲ್ಲೆಗೊಳಗಾದ ಯುವತಿಯಾಗಿದ್ದಾಳೆ. ಈಕೆ ಭಾವನೊಂದಿಗೆ ಅಕ್ರಮ ಸಂಬಂದ ಹೊಂದಿದ್ದು ಮೋಜು ಮಸ್ತಿಗಾಗಿ ಧಾರವಾಡ ದಿಂದ ಸಿದ್ದಾಪುರ ಭಾಗದ ಕಬ್ಬಿನ ಹೊಳೆ ಬಳಿ ಬಂದಿದ್ದು ,ಅಲ್ಲಿ ಮದ್ಯ ಸೇವಿಸಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೋಪದಲ್ಲಿ ಬಿಯರ್ ಬಾಟಲ್ ನಲ್ಲಿ ರೇಣುಕಾ ಗೆ ತಲೆಯ ಮೇಲೆ ಬಲವಾಗಿ ಹೊಡೆದಿದ್ದಾನೆ.

ಪ್ರಜ್ಞೆ ತಪ್ಪಿದ ರೇಣುಕಾಳನ್ನು ನೋಡಿದ ಕೊಟ್ರೇಶ್ ಆಕೆ ಸತ್ತಿದ್ದಾಳೆ ಎಂದು ತಿಳಿದು ಊರಿನತ್ತ ಪ್ರಯಾಣಿಸಿದ್ದಾನೆ. ಈ ವೇಳೆ ಪ್ರಜ್ಞೆ ಬಂದ ರೇಣುಕಾ ಸನಿಹದಲ್ಲೇ ಇದ್ದ ಪೆಟ್ರೋಲ್ ಬಂಕ್ ಬಳಿ ಬಂದಿದ್ದು ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು ,ಸಿದ್ದಾಪುರ ಪೊಲೀಸರು ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!