Self employment training|ಸ್ವಂತ ಉದ್ಯೋಗ ಬಯಸುವ ಯುವಜನರಿಗೆ ವಿವಿಧ ತರಬೇತಿಗೆ ಅರ್ಜಿ ಆಹ್ವಾನ.

268

ಬೆಂಗಳೂರು/Karwar:- ವಿದ್ಯಾಭ್ಯಾಸದ ಜೊತೆ ಒಂದಿಷ್ಟು ಕೆಲಸ ಕಲಿಯುವ ,ಸ್ವಯಂ ಉದ್ಯೋಗ (job) ಮಾಡುವವರಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಬ್ಯೂಟೀಷನ್ ತರಬೇತಿ, ಜಿಮ್ ,ಫಿಟನೆಸ್ ಸರಬೇತಿ,ವೀಡಿಯೋ ಗ್ರಫಿ ಮತ್ತು ವಾರ್ತಾ ವಾಚಕ/ನಿರೂಪಕ ತರಬೇತಿ ಗೆ ಅರ್ಜಿ ಕರೆಯಲಾಗಿದೆ.
ಹೌದು ಈ ತರಬೇತಿ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಯುವ ಜನರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

ತರಬೇತಿ ವಿವರ:-

1) ಜಿಮ್ /ಫಿಟ್ ನೆಸ್ ತರಬೇತಿ- 15 ದಿನ

ವಯೋಮಿತಿ- 16 ರಿಂದ 30 ವರ್ಷ.
ಅರ್ಹತೆ:- ದ್ವಿತೀಯ ಪಿಯುಸಿ.
ತರಬೇತಿ ದಿನಾಂಕ:- 24/01/2024 ರಿಂದ 07/02/24 ರ ವರೆಗೆ.
ಸ್ಥಳ:- ಶ್ರೀ ಜಯಪ್ರಕಾಶ್ ನಾರಾಯಣ ಯುವತರಬೇತಿ ಕೇಂದ್ರ ,ವಿದ್ಯಾನಗರ ,ಶ್ರೀಕಂಠಿರವ ಕ್ರಿಡಾಂಗಣ,ಬೆಂಗಳೂರು.

2)ಬ್ಯೂಟೀಷನ್ ತರಬೇತಿ.
ವಯೋಮಿತಿ:- 15 ರಿಂದ 29 ವರ್ಷ.
ತರಬೇತಿ ದಿನಾಂಕ- 26/01/2024 ರಿಂದ 07/02/2024
ತರಬೇತಿ ಅವಧಿ:- 13 ದಿನ
ಅರ್ಹತೆ:- ಎಸ್.ಎಸ್. ಎಲ್.ಸಿ ಪಾಸ್/ ಫೇಲ್.
ನಡೆಯುವ ಸ್ಥಳ:- ಕುಂಬಳಗೋಡು ತರಬೇತಿ ಕೇಂದ್ರ ,ಬೆಂಗಳೂರು.

3)ವಿಡಿಯೋಗ್ರಫಿ ತರಬೇತಿ.
ಅವಧಿ:- 12 ದಿನ
ತರಬೇತಿ ದಿನಾಂಕ:- 27/01/2024 ರಿಂದ 07/02/24 ರ ವರೆಗೆ.
ವಿದ್ಯಾರ್ಹತೆ:- ದ್ವಿತೀಯ ಪಿಯುಸಿ.
ನಡೆಯುವ ಸ್ಥಳ:- ಕುಂಬಳಗೋಡು ತರಬೇತಿ ಕೇಂದ್ರ ,ಬೆಂಗಳೂರು.

ಇದನ್ನೂ ಓದಿ:- ರಾಜ್ಯದಲ್ಲಿ ಇಂದು ಹೇಗಿದೆ ಹವಾಮಾನ ವಿವರ ನೋಡಲು ಅಕ್ಷರದ ಮೇಲೆ ಕ್ಲಿಕ್ ಮಾಡಿ


4)ನಿರೂಪಣೆ/ವಾರ್ತಾ ವಾಚಕರ ತರಬೇತಿ.
ಅವಧಿ:- 8 ದಿನ.
ತರಬೇತಿ ದಿನಾಂಕ:- 31/01/2024 ರಿಂದ 7/02/24
ವಿದ್ಯಾರ್ಹತೆ:- ಪದವಿ ಹಾಗೂ ಪತ್ರಿಕೋದ್ಯಮ ಡಿಗ್ರಿ ಗೆ ಪ್ರಾಮುಖ್ಯತೆ .( ವಿದ್ಯಾರ್ಥಿಗಳಿಗೂ ಅವಕಾಶವಿದೆ)
ವಯೋಮಿತಿ:- 15 ರಿಂದ 29 ವರ್ಷ.
ನಡೆಯುವ ಸ್ಥಳ:- ಯುವನಿಕಾ ಸಭಾಂಗಣ ಬೆಂಗಳೂರು.

ಯುವತಿಯರನ್ನು ಸ್ವಾವಲಂಭಿಯಾಗಲು ಉತ್ತೇಜಿಸುವ ದೃಷ್ಟಿಯಿಂದ (ಹೊರ ಜಿಲ್ಲೆಗಳ ಆಸಕ್ತ ಯುವಜನರಿಗೆ ವಸತಿ ಸಹಿತ) ಮೇಲ್ಕಂಡ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಸದರಿ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಅರ್ಹ ಅಭ್ಯರ್ಥಿಗಳು ದಿನಾಂಕ:16-01-2024 ರೊಳಗಾಗಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಾರವಾರ ಕಚೇರಿಗೆ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ:08382-201824 ಹಾಗೂ ಮೊಬೈಲ್ ಸಂಖ್ಯೆ: 9480886551

ಇದನ್ನೂ ಓದಿ:-Honnavara| ಆರೋಳ್ಳಿ ಗುಡ್ಡದಲ್ಲಿ ಪ್ರತ್ಯಕ್ಷವಾದ ಚಿರತೆ

ಕೈ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಶಿಬಿರದಲ್ಲಿ ಹಾಜರಾಗುವ ಯುವತಿಯರಿಗೆ ಊಟೋಪಹಾರ, ಪ್ರಮಾಣ ಪತ್ರ ಹಾಗೂ ಹೊರ ಜಿಲ್ಲೆಗಳಿಂದ ಭಾಗವಹಿಸುವ ಯುವತಿಯರಿಗೆ ಸಾಮನ್ಯ ವಸತಿ ವ್ಯವಸ್ಥೆಯನ್ನು ನೀಡಲಾಗುತ್ತಿದೆ.

ಮಾರ್ಗಸೂಚಿಗಳು:

  1. ತರಬೇತಿಯನ್ನು ಕರ್ನಾಟಕದ ಯುವಜನರಿಗೆ ಮಾತ್ರ ನೀಡಲಾಗುವುದು.
  2. ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು (ಆರ್.ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗುತ್ತಿಸಬೇಕು)
    3.ಅರ್ಜಿದಾರರು 15 ರಿಂದ 29 ವರ್ಷದ ಒಳಗೆ ಒರಬೇಕು.
  3. ಅರ್ಜಿದಾರರ ಹೆಸರು ಹಾಗೂ ಭಾವಚಿತ್ರವುಳ್ಳ ಆಧಾರ್ ನಕಲು ಪ್ರತಿಯನ್ನು ಲಗ್ಗಿಸುವುದು.
  4. ಬ್ಯೂಟಿಷಿಯನ್ ತರಬೇತಿ ಪಡೆಯಲು ಕನಿಷ್ಠ 10 ನೇ ತರಗತಿಯ ಅಂಕಪಟ್ಟಿಯನ್ನು ಲಗತ್ತಿಸುವುದು.
  5. ವೀಡಿಯೋಗ್ರಫಿ ತರಬೇತಿ ಪಡೆಯಲು ದ್ವಿತೀಯ ಪಿ.ಯು.ಸಿ ವ್ಯಾಸಂಗ ಮಾಡಿದ್ದು ಅಂಕಪಟ್ಟಿಯನ್ನು
    ಲಗತ್ತಿಸುವುದು.
  6. ಜಿಮ್/ಫಿಟೈಸ್ ತರಬೇತಿ ಪಡೆಯಲು ದ್ವಿತೀಯ ಪಿ.ಯು.ಸಿ ವ್ಯಾಸಂಗ ಮಾಡಿದ್ದು, ಅಂಕಪಟ್ಟಿಯನ್ನು ಲಗತ್ತಿಸುವುದು.

ಉಳಿದ ಜಿಲ್ಲೆಯವರಿಗೂ ಅವಕಾಶ ಮಾಡಿಕೊಡಲಾಗಿದ್ದು ಆಯಾ ಜಿಲ್ಲೆಯ ಯುವಜನ ಮತ್ತು ಕ್ರೀಡಾ ಇಲಾಖೆಯಲ್ಲಿ ಸಂಪರ್ಕ ಮಾಡಬಹುದಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!