Sharavathi| ನಿಷೇಧಿತ ಶರಾವತಿ ಕಣಿವೆಯಲ್ಲಿ ರಾತ್ರಿ ವೇಳೆ ಡ್ರೋನ್ ಹಾರಾಟ-ತನಿಖೆ

Sharavati forest Sharavati forest
Sharavati forest drone case

 Sharavathi : ಜೋಗದ ಶರಾವತಿ (sharavathi)ಕಣಿವೆ ಕೊಳ್ಳದಲ್ಲಿರುವ ಜಲವಿದ್ಯುದಾಗರದ ಮೇಲ್ಭಾಗ ಸೆಪ್ಟೆಂಬರ್ 27ರ ರಾತ್ರಿ 8.30ರ ಹೊತ್ತಿಗೆ ಡ್ರೋನ್ ಹಾರಾಟ ನಡೆಸಲಾಗಿದೆ. ಈ ಕುರಿತು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿ) ಭದ್ರತಾ ವಿಭಾಗವು ಆಂತರಿಕ ತನಿಖೆ ಕೈಗೊಂಡಿದೆ.ಇದನ್ನೂ ಓದಿ:-Sagar| ಮಳೆಯ ನಡುವೆಯೂ ಕಂಗೊಳಿಸಿದ ಶ್ರೀನಗರದ ಸಾಂಪ್ರದಾಯಿಕ ಬೆಂಕಿಯಾಟ- ವಿಡಿಯೋ ನೋಡಿ

ವಡನ್‌ಬೈಲು ಮಾರ್ಗದ ಸರ್ಜ್ ಟ್ಯಾಂಕ್ ಸಮೀಪ ಡ್ರೋನ್ ಹಾರಾಡಿದ ಹಿನ್ನೆಲೆ ಪರಿಶೀಲನೆ ನಡೆಸಲಾಗುತ್ತಿದೆ. ಶರಾವತಿ ಕೊಳ್ಳದ ಚಿತ್ರೀಕರಣಕ್ಕಾಗಿ ಯೂಟ್ಯೂಬರ್‌ಗಳು ಅಥವಾ ಪ್ರವಾಸಿಗರು ಮಾವಿನಗುಂಡಿ ಕಡೆಯಿಂದ ಹಾರಾಟ ನಡೆಸಿದ್ದಾರೆಯೇ ಅಥವಾ ಇತರ ಯಾರಾದರೂ ನಿಗೂಢವಾಗಿ ಹಾರಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.  ಇದನ್ನೂ ಓದಿ:-Karwar|ಕದಂಬ ನೌಕಾನೆಯ ನಿಷೇಧಿತ ಪ್ರದೇಶದಲ್ಲಿ ರಾತ್ರಿ ಡ್ರೋನ್ ಹಾರಾಟ- ಗುಪ್ತಚರ ಇಲಾಖೆಯಿಂದ ತನಿಖೆ

ಆದರೇ KPC ಅಧಿಕಾರಿಗಳು ಈಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನವರದ ಠಾಣೆಯಲ್ಲಾಗಲಿ ಅಥವಾ ಸಾಗರ ತಾಲೂಕಿನ ಕಾರ್ಗಲ್ ಠಾಣೆಯಲ್ಲಿ ದೂರು ನೀಡಿಲ್ಲ. ಆದರೇ ಈ ಬಗ್ಗೆ ಭದ್ರತಾ ಸಿಬ್ಬಂದಿ ಜೊತೆ ಚರ್ಚೆ ನಡೆಸಲಾಗಿದ್ದು ಪ್ರವಾಸಿಗರು ಅಥವಾ ಯೂಟ್ಯೂಬರ್ ಗಳು ಗೇರುಸೊಪ್ಪ ಭಾಗದಿಂದ ಈ ಧ್ರೋಣ್ ಹಾರಿಸಿರಬಹುದೇ ಎಂಬ ಬಗ್ಗೆ ಆಂತರಿಕ ತನಿಖೆ ಕೈಗೊಂಡಿದ್ದು ,ಈ ದ್ರೋಣ್ ಶರಾವತಿಯ ಕಣಿವೆ ಪ್ರದೇಶದ ಡ್ಯಾಮ್ ಹಾಗೂ ಜಲಪಾತದ ಸುತ್ತಾ ಸಂಚರಿಸಿದೆ. ಈ ಪ್ರದೇಶವೆಲ್ಲವೂ ನಿರ್ಬಂಧಿತ ಪ್ರದೇಶಗಳಾಗಿವೆ.

Advertisement

ನೌಕಾ ನೆಲೆಯ ಬಳಿಯೂ ದ್ರೋಣ್ ಹಾರಾಟ.

Drone flight in Kadamba Navy range

ಕಳೆದ ವರ್ಷ  ಕಾರವಾರ ಭಾಗದ ರಾಷ್ಟ್ರೀಯ ಹೆದ್ದಾರಿ 66 ರ ಕದಂಬ ನೌಕಾನೆಲೆಯ ಭಾಗದಲ್ಲೂ ಹೆದ್ದಾರಿ ಭಾಗದ ನಿಷೇಧಿತ ಪ್ರದೇಶದಲ್ಲಿ ದ್ರೋಣ್ ಹಾರಿಸಲಾಗಿತ್ತು. ಈ ಬಗ್ಗೆ ಸ್ಥಳೀಯರೊಬ್ಬರು ವಿಡಿಯೋ ಮಾಡಿ ನೌಕಾನೆಲೆಗೆ ಮಾಹಿತಿ ನೀಡಿದ್ದರು. ಇದೀಗ ನಿಷೇಧಿತ ಪ್ರದೇಶಗಳಲ್ಲಿ ದ್ರೋಣ್ ರಾತ್ರಿ ವೇಳೆ ಹಾರಿಸುತ್ತಿರುವುದು ಭದ್ರತೆ ಬಗ್ಗೆ ಆತಂಕ ಮೂಡುವಂತೆ ಮಾಡಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement