PDO ಮನೆಯಲ್ಲಿ ಹಾಡು ಹಗಲೇ ₹1.38 ಕೋಟಿ ಚಿನ್ನಾಭರಣ,₹86 ನಗದು ಕಳ್ಳತನ.
ಶಿವಮೊಗ್ಗ: ವಿದ್ಯಾನಗರದ 4ನೇ ಎ ಅಡ್ಡರಸ್ತೆಯಲ್ಲಿರುವ ಪಿಡಿಒ ನಟರಾಜ್ ಕೆ.ಎನ್. ಅವರ ಮನೆಯಲ್ಲಿನ ಕಳ್ಳತನ ಪ್ರಕರಣ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಇನ್ನು, ಕೃತ್ಯದ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು ಕಳ್ಳನ ಚಲನವಲನ ಸಂಪೂರ್ಣ ಸೆರೆಯಾಗಿದೆ.
ನಟರಾಜ್ ಮತ್ತು ಅವರ ಪತ್ನಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಗಸ್ಟ್ 28 ರಂದು ದಂಪತಿ ಕೆಲಸಕ್ಕೆ ತೆರಳಿದ್ದರು. ಸಂಜೆ ಅವರ ಮಗಳು ಕರೆ ಮಾಡಿ ಮನೆಯಲ್ಲಿ ಕಳ್ಳತನವಾಗಿರುವ ಕುರಿತು ತಿಳಿಸಿದ್ದರು. ಕೂಡಲೆ ದಂಪತಿ ಮನೆಗೆ ಬಂದು ಪರಿಶೀಲಿಸಿದಾಗ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳ ಒಳಗೆ ನುಗ್ಗಿದ್ದು, ಬೆಡ್ ರೂಂನಲ್ಲಿದ್ದ ಬೀರು ಒಡೆದು ಕಳ್ಳತನ ಮಾಡಿದ್ದ.ಇದನ್ನೂ ಓದಿ:-Shivamogga| ಸಾಲಮಾಡಿದ ಅಡಿಕೆ ವರ್ತಕನ ಸಿನಿಮೀಯ ರೀತಿ ಕಿಡ್ನಾಪ್ ! ನಂತರ ಆಗಿದ್ದೇನು?
ಬೀರುವಿನಲ್ಲಿದ್ದ 110 ಗ್ರಾಂ ತೂಕದ ಚಿನ್ನದ ಸರ, 69 ಗ್ರಾಂ ತೂಕದ 3 ನೆಕ್ಷೇಸ್‌ಗಳು, 240 ಗ್ರಾಂ ತೂಕದ 6 ಬಳೆಗಳು, ಹ್ಯಾಂಗಿಂಗ್ಸ್, ಕವಿಯೋಲೆಗಳು, 40 ಗ್ರಾಂ ಹಾಗೂ 16 ಗ್ರಾಂ ತೂಕದ ಉಂಗುರಗಳು, ಬ್ರೇಸ್‌ಲೆಟ್‌ಗಳು, ಚಿನ್ನದ ಗಟ್ಟಿ, ಲಕ್ಷ್ಮಿ ತಾಳಿ ಹಾಗೂ ವಿವಿಧ ಮೌಲ್ಯದ ಚಿನ್ನದ ಸರಗಳು ಸೇರಿ ಒಟ್ಟು 943 ಗ್ರಾಂ ಚಿನ್ನದ ಒಡವೆ ಕಳ್ಳತನವಾಗಿವೆ.ಇದನ್ನೂ ಓದಿ:-Shivamogga| ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ತಾಯಿ ! ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ !
ಇನ್ನು, 500 ಗ್ರಾಂ ಬೆಳ್ಳಿ ವಸ್ತು, ₹86,000 ನಗದು ಹಾಗೂ 15 ಕೈಗಡಿಯಾರಗಳು ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ. ಕಳ್ಳತನವಾಗಿರುವ ವಸ್ತುಗಳ ಒಟ್ಟು ಮೌಲ್ಯ 1,42,29,900 ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
