Siddapur| ಬಡಾಳ-ಕುಮಟಾ ರಸ್ತೆಯಲ್ಲಿ ಕಲ್ಲಿಟ್ಟು ವಾಹನಗಳಿಂದ ಹಣ ವಸೂಲಿ!

Siddapur:-Illegal money collection reported on Badala-Kumta road in Siddapur after a lorry accident. Locals allegedly charged ₹200 from vehicles. Full details here.
AddText 03 27 12.35.53 AddText 03 27 12.35.53

Siddapur| ಬಡಾಳ-ಕುಮಟಾ ರಸ್ತೆಯಲ್ಲಿ ಕಲ್ಲಿಟ್ಟು ವಾಹನಗಳಿಂದ ಹಣ ವಸೂಲಿ!

Siddapur:- ಸಿದ್ದಾಪುರ (siddapur) ಭಾಗದಿಂದ ಬಡಾಳ- ಕುಮಟಾ ರಸ್ತೆಯಲ್ಲಿ ಒಂದು ಕಲ್ಲು ತುಂಬಿದ ಲಾರಿ ಪಲ್ಟಿಯಾಗಿದ್ದ ಕಾರಣ ಸಿದ್ದಾಪುರ-ಬಡಾಳ-ಕುಮಟಾ ರಸ್ತೆ ಸಂಜೆಯವರೆಗೂ ಯಾವುದೇ ವಾಹನ ಸಂಚರಿಸದೇ ಬಂದ್ ಆಗಿತ್ತು.

Siddapur| ಅಸಲಿ ಬಂಗಾರ ತೋರಿಸಿ 10 ಲಕ್ಷ ದೋಚಿದ ಕಳ್ಳರು

Advertisement

ಇದನ್ನ ಬಂಡವಾಳ ಮಾಡಿಕೊಂಡ ಇಬ್ಬರು ಸ್ಥಳೀಯ ಯುವಕರು ಲಾರಿಯನ್ನು ಎತ್ತಿ ರಿಪೇರಿ ಮಾಡುತಿದ್ದ ಪಕ್ಕದಲ್ಲಿ ವಾಹನ ತೆರಳಲು ಜಾಗವಿದ್ದರೂ ಅಲ್ಲಿ ಕಲ್ಲನ್ನು ಇಟ್ಟು ಸಿದ್ದಾಪುರ  ದಿಂದ ಕುಮಟಾಕ್ಕೆ ಹಾಗೂ ಕುಮಟಾ ದಿಂದ ಸಿದ್ದಾಪುರಕ್ಕೆ ತೆರಳುತಿದ್ದ ಕಾರಿನವರ ಬಳಿ ತಲಾ 200 ರೂಗಳನ್ನ ವಸೂಲಿ ಮಾಡಿದ್ದಾರೆ ಎಂದು ಪ್ರಬಾಸಿಗರು ಆರೋಪ ಮಾಡಿದ್ದಾರೆ.

Road blocked with stones on Siddapur Kumta road
ರಸ್ತೆಯಲ್ಲಿ ವಾಹನ ತೆರಳಲು ಬಿಡದೇ ಕಲ್ಲಿಟ್ಟು ಹಣ ಕೇಳಿದ ಯುವಕರಿ

ಪ್ರವಾಸಿಗರೊಬ್ಬರು ಇದನ್ನು ಪ್ರಶ್ನೆ ಮಾಡಿ ಸಿದ್ದಾಪುರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು ಇದರ ನಂತರ ಹಣ ವಸೂಲಿ ಮಾಡುವುದನ್ನ ನಿಲ್ಲಿಸಿದ್ದಾರೆ.

ಅಪಘಾತವನ್ನೇ ಬಂಡವಾಳ ಮಾಡಿಕೊಂಡು ರಸ್ತೆಯ ಪಕ್ಕದಲ್ಲಿ ತೆರಳಲು ಜಾಗವಿದ್ದರೂ ವಾಹನ ತೆರಳಲು ಅಡ್ಡಿ ಪಡಿಸಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Siddapur |ಜ್ಯೋತಿಷಿ ಕಮಲಾಕರನ ರಹಸ್ಯ -ವಿಡಿಯೋ ಜೊತೆ ಲವ್ವಿಡವ್ವಿ ಬಹಿರಂಗ!

ಸಧ್ಯ ಈಗ ಲಾರಿಯನ್ನು ತೆರವು ಮಾಡಿದ್ದು ವಾಹನ ಸಂಚಾರ ಸುಗಮವಾಗಲು ಸಹಕಾರಿಯಾಗಿದೆ. ಆದರೇ ಹೀಗೆ ವಸೂಲಿ ಮಾಡಿದ್ದೇ ಆದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಆಗಬೇಕಿದೆ.

ಇನ್ನೂ ಸ್ಥಳದಲ್ಲಿ ಇದ್ದ ಸ್ಥಳೀಯರೊಬ್ಬರು ನಾವು ಬೆಳಗಿನಿಂದ ವಾಹನ ತೆರಳಲು ಅನುವು ಮಾಡಿಕೊಟ್ಟಿದ್ದು  ಬಿದ್ದ ಲಾರಿಯನ್ನು ಸರಿಸಲು ಸಹಾಯ ಮಾಡಿದ್ದೇವೆ ನಾವು ವಾಹನ ಸಂಚಾರಕ್ಕೆ ಸಹಾಯ ಮಾಡಿದ್ದೇವೆ ,ಬೇರೆ ಯಾರು ಅಸೂಲಿ ಮಾಡಿದ್ದಾರೆ ಎಂಬ ಬಗ್ಗೆ ತಿಳಿದಿಲ್ಲ  ಎಂಬುದಾಗಿ ತಿಳಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement