Sirsi| ಆಕಳನ್ನು ರಕ್ಷಿಸಲು ಹೋಗಿ ನೀರಿನಲ್ಲಿ ಮುಳುಗಿ 17 ವರ್ಷದ ಅಪ್ರಾಪ್ತ ಬಾಲಕ ಸಾವು
Sirsi/ಕಾರವಾರ: ದನಗಳನ್ನು ಮರಳಿ ಮನೆಗೆ ಹೊಡೆದುಕೊಂಡು ಬರಲು ಹೋದಾಗ, ಹೊಂಡದ ನೀರಿನಲ್ಲಿ ಇಳಿದಿದ್ದ ಆಕಳನ್ನು ಮೇಲಕ್ಕೆ ತರಲು ಯತ್ನಿಸಿದ 17 ವರ್ಷದ ಅಪ್ರಾಪ್ತ ಬಾಲಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಶಿರಸಿ (sirsi) ತಾಲೂಕಿನ ಇಸಳೂರಿನಲ್ಲಿ ನಡೆದಿದೆ.
ಇಸಳೂರಿನ ಮಹಮ್ಮದಿಯಾ ಕಾಲೋನಿಯ ನಿವಾಸಿ, ಶಾಹಿದ್ (17 ) ಬಾಲಕ ಮೃತಪಟ್ಟ ದುರ್ದೈವಿ.
ಇದನ್ನೂ ಓದಿ:-Sirsi | ಕಾಡುಕೋಣ ಬೇಟೆ ಓರ್ವನ ಬಂಧನ ನಾಲ್ವರು ಪರಾರಿ
ಘಟನೆ ನಡೆದಿದ್ದು ಹೇಗೆ?
ಇಸಳೂರಿನ ನಿವಾಸಿಯೊಬ್ಬರು ಜೂನ್ 6ರಂದು ಬೆಳಿಗ್ಗೆ ಎಂದಿನಂತೆ ತಮ್ಮ ದನಗಳನ್ನು ಮೇಯಲು ಬಿಟ್ಟು ತೆರಳಿದ್ದರು. ಸಾಯಂಕಾಲ ದನಗಳನ್ನು ಮರಳಿ ಮನೆಗೆ ಹೊಡೆದುಕೊಂಡು ಬರಲು ಅವರ ಇಬ್ಬರು ಮಕ್ಕಳು ಹೋಗಿದ್ದರು. ಈ ವೇಳೆ ಇಸಳೂರಿನ ಅರುಂಧತಿ ಲೇ-ಔಟ್‌ನಲ್ಲಿರುವ ಹೊಂಡದ ನೀರೊಳಗೆ ಆಕಳೊಂದು ಇಳಿದಿತ್ತು.
ಇದನ್ನೂ ಓದಿ:-Sirsi:ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧನ:1.30 ಲಕ್ಷ ರೂ. ಮೌಲ್ಯದ ಚಿನ್ನ, ನಗದು ಜಪ್ತಿ
ಸಹೋದರರಿಬ್ಬರೂ ಆಕಳನ್ನು ನೀರಿನಿಂದ ಹೊರಗೆ ತರಲು ಪ್ರಯತ್ನಿಸಿದರೂ ಅದು ಮೇಲಕ್ಕೆ ಬಾರದಿದ್ದಾಗ, ಬಾಲಕ ಹೊಂಡದ ನೀರಿಗೆ ಇಳಿದಿದ್ದಾನೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹೊಂಡದ ಆಳವಾದ ನೀರಿಗೆ ಬಿದ್ದು ಮುಳುಗಿದ್ದಾನೆ.
ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಕ್ಕೆ ಮುಂದಾದರೂ, ಆತನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ರಾಜೇಶ್ ರಾಣೆ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಧರ್ಮಪ್ಪ, ಸುನಿಲ್, ಕಾರ್ತಿಕ್ ಹಾಗೂ ಮಂಜುನಾಥ ಅವರು ಕಾರ್ಯಾಚರಣೆ ನಡೆಸಿ, ಹಲವು ಗಂಟೆಗಳ ಶೋಧದ ಬಳಿಕ ಯುವಕನ ಮೃತದೇಹವನ್ನು ಹೊರ ತೆಗೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶಿರಸಿ(sirsi) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
