Sirsi-ಮುಗಿಯದ ಶಿರಸಿ-ಹಾವೇರಿ ಹೆದ್ದಾರಿ ಗೋಳು-ಹೆದ್ದಾರಿ ಪ್ರಾಧಿಕಾರಕ್ಕೆ ಶ್ರದ್ಧಾಂಜಲಿ ಅರ್ಪಿಸಿದ ಜನ

Public protest erupts in Sirsi over prolonged delay in NH 766E highway construction under Sagarmala project. Locals block road and stage symbolic tribute to highway authority.
Protesters blocking Sirsi-Haveri highway NH 766E at Bisilkopp, demanding completion of delayed road construction Protesters blocking Sirsi-Haveri highway NH 766E at Bisilkopp, demanding completion of delayed road construction

Sirsi-ಮುಗಿಯದ ಶಿರಸಿ-ಹಾವೇರಿ ಹೆದ್ದಾರಿ ಗೋಳು-ಹೆದ್ದಾರಿ ಪ್ರಾಧಿಕಾರಕ್ಕೆ ಶ್ರದ್ಧಾಂಜಲಿ ಅರ್ಪಿಸಿದ ಜನ

 

Sirsi :-ಉತ್ತರ ಕನ್ನಡ ಜಿಲ್ಲೆಯ(uttara Kannada)  ಶಿರಸಿ(sirsi)-ಹಾವೇರಿ ರಾಷ್ಟ್ರೀಯ ಹೆದ್ದಾರಿ 766Eನಲ್ಲಿ ಸಾಗರಮಾಲಾ ಯೋಜನೆಯಡಿ ಕಳೆದ ಐದು ವರ್ಷದಿಂದ ಕಾಮಗಾರಿ ಮಾಡದೇ ವಿಳಂಬ ಮಾಡಿದ್ದು ,ಧೂಳು ,ಕೆಸರಿನಿಂದ ಕಂಗೆಟ್ಟ ಸ್ಥಳೀಯ ಜನರು ಇಂದು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಹೆದ್ದಾರಿ ಪ್ರಾಧಿಕಾರಕ್ಕೆ ಶ್ರದ್ದಜಲಿ ಅರ್ಪಿಸುವ ಮೂಲಕ ವಿನೂತನ ಪ್ರತಿಭಟನೆ ಕೈಗೊಂಡರು.

Advertisement

ಶಿರಸಿ-ಹಾವೇರಿ ಮಾರ್ಗವನ್ನು ಸಾಗರಮಾಲಾ ಯೋಜನೆಯಡಿ ಉನ್ನತೀಕರಣ ಮಾಡಿದ್ದು 177 ಕೋಟಿ ಅನುದಾನದಲ್ಲಿ ಕಾಮಗಾರಿಗೆ ಐದು ವರ್ಷದ ಹಿಂದೆ ಚಾಲನೆ ನೀಡಲಾಗುತ್ತು.

ಅವೈಜ್ಞಾನಿಕ ಕಾಮಗಾರಿ ಹಾಗೂ ಕಾಮಗಾರಿ ವಿಳಂಬದಿಂದ ಸುತ್ತಮುತ್ತಲ ಊರಿನವರು ಪ್ರತಿ ದಿನ ಧೂಳು ತಿಂದರೆ ,ಅಕಾಲಿಕ ಮಳೆಗೆ ರಸ್ತೆ ಕೆಸರುಮಯವಾಗಿ ಸಂಚಾರಕ್ಕೂ ತೊಂದರೆಯಾಗುತ್ತು. ಇದಲ್ಲದೇ ಅವೈಜ್ಞಾನಿಕ ಕಾಮಗಾರಿಯಿಂದ ವಾಹನ ಸವಾರರು ಅಪಘಾತಕ್ಕೀಡಾಗಿ ಸಾವು ಸಹ ಸಂಭವಿಸಿತ್ತು.

ಇದರಿಂದ ಬೇಸತ್ತ ಸ್ಥಳೀಯ ಜನ ಇಂದು ಶಿರಸಿ ತಾಲೂಕಿನ ಬಿಸಿಲಕೊಪ್ಪದಲ್ಲಿ ವಾಹನ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.ರಸ್ತೆ ಕಾಮಗಾರಿ ವಿಳಂಬ, ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಳೀಯ ಜನ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಕ್ರೋಶ ಹೊರಹಾಕಿದರು.

ಇದರಿಂದಾಗಿ ಶಿರಸಿ-ಹಾವೇರಿ ಸಂಚಾರ ಕೆಲವು ಸಮಯ ಸಂಪೂರ್ಣ ಬಂದ್ ಆಗಿದ್ದು ,ಹೆದ್ದಾರಿ ಬಂದ್ ಹಿನ್ನಲೆಯಲ್ಲಿ ಪೊಲೀಸರು  ಶಿರಸಿ-ಬಂಕನಾಳ -ದಾಸನ ಕೊಪ್ಪ ಕಡೆಗೆ ವಾಹನ ಸಂಚಾರ ಡೈವರ್ಟ ಮಾಡಿದರು.

Sirsi | ಕಾಡುಕೋಣ ಬೇಟೆ ಓರ್ವನ ಬಂಧನ ನಾಲ್ವರು ಪರಾರಿ

ಸ್ಥಳಕ್ಕೆ ಶಿರಸಿ ಎಸಿ ಚಂದ್ರಶೇಖರ್ ,ತಹಶಿಲ್ದಾರ್ ಪಟ್ಟರಾಜುಗೌಡ ಆಗಮಿಸಿ ಪ್ರತಿಭಟನಾ ನಿರತ ಸ್ಥಳೀಯರಿಗೆ ಶೀಘ್ರದಲ್ಲೇ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವ ಆಶ್ವಾಸನೆ ನೀಡದರು. ಪ್ರತಿಭಟನೆ ಮುಂದುವರೆಸಿದ್ದ ಇಲ್ಲಿನ ಪ್ರತಿಭಟನಾಕಾರರು ಸೂಕ್ತ ವ್ಯವಸ್ಥೆ ಕಲ್ಪಿಸುವ ವರೆಗೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement