Uttara kannada|ಉತ್ತರ ಕನ್ನಡ ಜಿಲ್ಲೆಯ ಈ ತಾಲೂಕಿನ ಬಂಕ್ ನಲ್ಲಿ ಪೆಟ್ರೋಲ್ ,ಡಿಸೇಲ್ ನೋ ಸ್ಟಾಕ್ !
Uttara kannada :- ಮಧ್ಯಪ್ರಾಚ್ಯ ಯುದ್ಧ ಸಂಘರ್ಷದ ಬಿಸಿ ಮತ್ತೆ ಉತ್ತರ ಕನ್ನಡ ಜಿಲ್ಲೆಗೂ ತಟ್ಟಿದ್ದು ಹಲವು ಬಂಕ್ ಗಳಲ್ಲಿ ಪೆಟ್ರೋಲ್ ,ಡಿಸೇಲ್ ಕೊರತೆ ಎದುರಾಗಿದೆ.
ಪೆಟ್ರೋಲ್ ,ಡಿಸೇಲ್ ಇಲ್ಲದೇ ಇಂಡಿಯನ್ ಪೆಟ್ರೋಲ್ ಬಂಕ್ ಗಳು ಒಂದೊಂದಾಗಿ ಬಂದ್ ಆಗುತ್ತಿದೆ. ಜಿಲ್ಲೆಯ ಸಿದ್ದಾಪುರ(siddapur) ನಗರದಲ್ಲಿರುವ ನಿಸರ್ಗ ಇಂಡಿಯನ್ ಪೆಟ್ರೋಲ್ ಬಂಕ್ ಸ್ಟಾಕ್ ಬರದೇ ಬಂದ್ ಆಗಿದೆ.
Siddapur| ಶೇರ್ ಮಾರ್ಕೇಟ್ ನಲ್ಲಿ ನಷ್ಟ -ಯುವಕ ಆತ್ಮಹತ್ಯೆ
ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿ 50 ರ ಮಾರ್ಗಕ್ಕೆ ಹೊಂದಿಕೊಂಡಿರುವ ಈ ಬಂಕ್ ನಲ್ಲಿ ಪ್ರತಿ ದಿನ ಪೆಟ್ರೋಲ್ 2000 ಹಾಗೂ ಡಿಸೇಲ್ -3000 ಇಂಧನ ಕರ್ಚಾಗುತಿತ್ತು. ಇನ್ನು 40 ಸಾವಿರ ಇಂಧನ ಸಂಗ್ರಹಣ ಸಾಮರ್ಥ್ಯವಿದೆ. ಒಂದು ವಾರದಿಂದ ಮುಂಗಡ ಹಣ ಕಟ್ಟಿದ್ದರೂ ಹುಬ್ಬಳ್ಳಿಯಿಂದ ಬರಬೇಕಾದ ಇಂಧನ ಸರಬರಾಜಾಗುತ್ತಿಲ್ಲ. ಇದರಿಂದಾಗಿ ಇಂಧನ ಕಾಲಿಯಾಗಿ ಬಂದ್ ಆಗಿದೆ.
ಇದೇ ರೀತಿ ಬನವಾಸಿಯಲ್ಲೂ ಇಂಡಿಯನ್ ಬಂಕ್ ಗಳಲ್ಲಿ ಇಂಧನ ವ್ಯತ್ಯಯವಾಗಿದೆ.
Siddapur|ಭಿಕ್ಷುಕನಾಗಿ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ
ಸಿದ್ದಾಪುರದಲ್ಲಿ ನಾಲ್ಕು ಬಂಕ್ ಗಳಲ್ಲಿ ಮೂರು ಕಾರ್ಯನಿರ್ವಹಿಸುತ್ತಿದೆ. ಇನ್ನು ಜಿಲ್ಲೆಯ ಕರಾವಳಿ ಭಾಗದ ಬಂಕ್ ನಲ್ಲಿ ಸಧ್ಯ ಸಮಸ್ಯೆಯಾಗಿಲ್ಲ .ಆದರೇ ಮಲೆನಾಡು ಭಾಗಕ್ಕೆ ಹುಬ್ಬಳ್ಳಿಯಿಂದ ಇಂಡಿಯನ್ ಆಯಿಲ್ ಕಂಪನಿಯ ಇಂಧನ ಸರಬರಾಜಾಗುತಿದ್ದು ಎಲ್ಲಿ ಹುಬ್ಬಳ್ಳಿಯಿಂದ ಸರಬರಾಜಾಗುತ್ತಿದೆಯೋ ಅಂತಹ ಬಂಕ್ ಗಳಿಗೆ ಇಂಧನ ಕೊರತೆ ಎದುರಾಗಿದೆ.
ಸಧ್ಯ ಸಿದ್ದಾಪುರ,ಬನವಾಸಿ ಭಾಗದ ಬಂಕ್ ಗಳು ಬಂದ್ ಆಗಿದ್ದು ಗ್ರಾಹಕರು ಇಂಧನವಿಲ್ಲದೇ ಸಮಸ್ಯೆ ಅನುಭವಿಸುತಿದ್ದಾರೆ.






