Sirsi |ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ನಡೆದ ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ 9 ಜನರನ್ನು ಬಂಧಿಸಲಾಗಿತ್ತು. ನಂತರ ಆರೋಪಿತರಾದ 9 ಜನರು ಕಾರವಾರದ ಜೈಲಿನಲ್ಲಿದ್ದರು.Karwar|ಕಾರವಾರ ಭಾಗದಲ್ಲಿ ಏರಿಕೆ ಕಂಡ ಕಾಳಿಂಗ ಸರ್ಪಗಳು-ನಗರದತ್ತ-ಕಾರಣ ಏನು
ಇನ್ನು ಇದೇ ಸಂದರ್ಭದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಫೋಕ್ಸೋ ಪ್ರಕರಣ ಸಹ ದಾಖಲಾಗಿತ್ತು. ಇನ್ನು ಪ್ರಕರಣವನ್ನು ಸಿದ್ದಾಪುರ ನ್ಯಾಯಾಲಯದಿಂದ ಶಿರಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು.
ಪ್ರಕರಣ ಸಂಬಂಧ ಕಳೆದ ತಿಂಗಳು ಒಂಬತ್ತು ಆರೋಪಿಗಳು ಮಧ್ಯಂತರ ಜಾಮೀನಿಗಾಗಿ ಶಿರಸಿ (sirsi) ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು.Sirsi | ಕುಮಟಾ-ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ -ಜನರಿಗೆ ಧೂಳು,ಕೆಸರು ಹೊಂಡದ ಕೊಡಿಗೆ ಕೊಟ್ಟ ಕೇಂದ್ರಸರ್ಕಾರ !
ಇದರ ಬೆನ್ನಲ್ಲೇ ಆರೋಪಿತರು ಧಾರವಾಡದ ಹೈಕೋರ್ಟ ನಲ್ಲಿ ಜಾಮೀನು ಅರ್ಜಿ ಸಲ್ಲಿಕೆಮಾಡಿದ್ದು,ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿತರಲ್ಲಿ ಒಂದನೇ ಆರೋಪಿಗಳಾದ ಸುಚಿತ್ರ ,ಈಕೆಯ ತಂದೆ,ಹಾಗೂ ತಾಯಿ ಹೊರತುಪಡಿಸಿ ಆರು ಜನರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.
ಜ್ಯೋತಿಷಿ ಕಮಲಾಕರ್ ಭಟ್ ಸೇರಿ ಆರು ಜನರು ಶರತ್ತು ಬದ್ದ ನಿರೀಕ್ಷಣಾ ಜಾಮೀನಿನ ಮೇಲೆ ಹೊರಬಂದಿದ್ದು ,ಪೋಕ್ಸೋ ಪ್ರಕರಣ ಹಾಗೂ ಕೊಲೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ.
