ರಾಮಚಂದ್ರಾಪುರ ಮಠದಿಂದ ಕೈತಪ್ಪಿದ ಮಹಾಬಲೇಶ್ವರ ದೇವಸ್ಥಾನ:ಅನುವಂಶೀಯ ಅರ್ಚಕರಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ.

1729

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಗೋಕರ್ಣ ದೇವಸ್ಥಾನ ನಿರ್ವಹಣೆಗೆ ಸಮಿತಿ ರಚನೆ ಮಾಡಿ 15 ದಿನದಲ್ಲಿ ರಾಮಚಂದ್ರಪುರ ಮಠದಿಂದ ದೇವಸ್ಥಾನವನ್ನು ಹಿಂಪಡೆಯಲು ಸುಪ್ರೀಂ ಕೋರ್ಟ ಸೂಚನೆ ನೀಡಿದೆ.

ಈ ಹಿನ್ನಲೆಯಲ್ಲಿ ಗೋಕರ್ಣದಲ್ಲಿ ಅನುವಂಶೀಯ ಅರ್ಚಕರು ಇಂದು ಪಟಾಕಿ ಸಿಡಿಸಿ ,ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

2008 ರಲ್ಲಿ ರಾಮಚಂದ್ರಾಪುರ ಮಠದ ಆಡಳಿತಕ್ಕೆ ಅಂದಿನ ಬಿಜೆಪಿ ನೇತ್ರತ್ವದ ಯಡಿಯೀರಪ್ಪ ನೇತ್ರತ್ವದ ಸರ್ಕಾರ ದೇವಸ್ಥಾನವನ್ನು ಹಸ್ತಾಂತರ ಮಾಡಿತ್ತು.

ಈ ಬಗ್ಗೆ ಶೀ ಕ್ಷೇತ್ರ ಗೋಕರ್ಣ ಹಿತರಕ್ಷಣಾ ಸಮಿತಿಯವರು ನ್ಯಾಯಾಲಯ ಮೆಟ್ಟಿಲೇರಿದ್ದರು.

ಸುಪ್ರೀಂ ಕೋರ್ಟ ನಿವೃತ್ತ ನ್ಯಾ.ಬಿ.ಎನ್ .ಶ್ರೀಕೃಷ್ಣ ನೇತ್ರತ್ವದಲ್ಲಿ
ಜಿಲ್ಲಾಧಿಕಾರಿ, ಎಸಿ ಒಳಗೊಂಡ ಸಮಿತಿ ಯನ್ನು 15 ದಿನದಲ್ಲಿ ರಚಿಸಿ ಹಸ್ತಾಂತರ ಮಾಡುವಂತೆ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನದ ಬಳಿ ಅನುವಂಶೀಯ ಅರ್ಚಕರಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!