Uttara kannada | ಮಕ್ಕಳಮೇಲಿನ ದೌರ್ಜನ್ಯ ಹಳಿಯಾಳದಲ್ಲೇ ಹೆಚ್ಚು ! ಮಹಿಳಾ ಆಯೋಗದ ಅಧ್ಯಕ್ಷರು ಹೇಳಿದ್ದೇನು?

ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪೋಕ್ಸೋ ಪ್ರಕರಣಗಳ ಕುರಿತು ಮಾಹಿತಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪೋಕ್ಸೋ ಪ್ರಕರಣಗಳ ಕುರಿತು ಮಾಹಿತಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪೋಕ್ಸೋ ಪ್ರಕರಣಗಳ ಕುರಿತು ಮಾಹಿತಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ

Uttara kannada | ಮಕ್ಕಳಮೇಲಿನ ದೌರ್ಜನ್ಯ ಹಳಿಯಾಳದಲ್ಲೇ ಹೆಚ್ಚು ! ಮಹಿಳಾ ಆಯೋಗದ ಅಧ್ಯಕ್ಷರು ಹೇಳಿದ್ದೇನು?

ಕಾರವಾರ :- ಉತ್ತರ ಕನ್ನಡ (uttara kannada)ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣ ಹೆಚ್ಚಾಗುತಿದ್ದು ಮಕ್ಕಳ ಮೇಲೆ ಲೈಂಕಿಕ ಕಿರಿಕುಳ ಸಂಖ್ಯೆ ಸಹ ಹೆಚ್ಚಾಗಿದೆ. ಕಳೆದ ಏಳು ತಿಂಗಳಲ್ಲಿ 75 ಪ್ರಕರಣಗಳು ದಾಖಲಾಗಿದ್ದು ಬಹುತೇಕ ಬಡ ಮಧ್ಯಮ ವರ್ಗದ ಕುಟುಂಬದ ಮಕ್ಕಳೇ ಅವರ ಕುಟುಂಬ ಪರಿಚಯಸ್ತರಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗುತಿದ್ದಾರೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಮಾಹಿತಿ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಎಪ್ರಿಲ್  1 ರಿಂದ ಅಕ್ಟೋಬರ್ 31 ರ ವರೆಗೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು 75 ಪ್ರಕರಣಗಳು ದಾಖಲಾಗಿದೆ.

Advertisement

12 ತಾಲೂಕಿನಲ್ಲಿ ಎಲ್ಲಿ ಅತೀ ಹೆಚ್ಚು?

ಜಿಲ್ಲೆಯಲ್ಲೇ ಅತೀ ಹೆಚ್ಹಳಿಯಾಳದಲ್ಲಿ 10 ಪೋಕ್ಸೋ 1 ಕಿರುಕುಳ ಪ್ರಕರಣ ಶಿರಸಿಯಲ್ಲಿ 7 ಪೊಕ್ಸೋ ,4 ಕಿರುಕುಳ ಪ್ರಕರಣ, ಹೊನ್ನಾವರದಲ್ಲಿ 4 ಪೊಕ್ಸೋ ,5 ಕಿರುಕುಳ ಪ್ರಕರಣ , ಮುಂಡಗೋಡಿನಲ್ಲಿ 4 ಪೊಕ್ಸೋ ,4 ಕಿರುಕುಳ ಪ್ರಕರಣ ,ಜೋಯಿಡಾ 6 ಪೊಕ್ಸೋ ,1 ಕಿರುಕುಳ ಪ್ರಕರಣ  ದಾಖಲಾಗಿದೆ. ಇದಲ್ಲದೇ ಇಡೀ ಜಿಲ್ಲೆಯಲ್ಲಿ 48 ಪೊಕ್ಸೋ , 23 ಬಾಲಗರ್ಭಿಣಿಯರು ,4 ಬಾಲತಾಯಂದಿರ ಪ್ರಕರಣ ದಾಖಲಾಗಿದೆ.Karwar | ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಅಪಘಾತ: ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಸಾವು

17 ರಿಂದ 18 ವರ್ಷದೊಳಗಿನ ಶೇಕಡ 40 ರಷ್ಟು ಅಪ್ರಾಪ್ತರೇ ಪೋಕ್ಸೋ ಅಪರಾಧಿಗಳು

2025 ರ ಅಂಕಿ ಅಂಶದಲ್ಲಿ ಜಿಲ್ಲೆಯಲ್ಲಿ  17 ರಿಂದ 18 ವರ್ಷದೊಳಗಿನ ಶೇಕಡ 40 ರಷ್ಟು ಅಪ್ರಾಪ್ತರೇ ಪೋಕ್ಸೋ ಅಪರಾಧಿಗಳಾಗಿದ್ದಾರೆ.ಜಿಲ್ಲೆಯಲ್ಲಿ ಅಪ್ರಾಪ್ತ ಮಕ್ಕಳು ಪ್ರೀತಿ ಹುಚ್ಚಾಟಕ್ಕೆ ಬಿದ್ದು ತಮ್ಮ ಜೀವನವನ್ನೇ ನರಕ ಮಾಡಿಕೊಳ್ಳುತಿದ್ದು , 18 ದಾಟುವ ಮೊದಲೇ ಹೆಣ್ಣುಮಕ್ಕಳು ಗರ್ಭಿಣಿಯಾದರೇ ,ಅಪ್ರಾಪ್ತ ಬಾಲಕರು ಜೈಲು ಪಾಲಾಗುತ್ತಿರುವ ಘಟನೆ ಹೆಚ್ಚಾಗುತ್ತಿದೆ.POCSO case| ಜ್ಯೋತಿಷಿ ಕಮಲಾಕರ್‌ ಭಟ್‌ ಎರಡು ದಿನ ಪೊಲೀಸರ ವಶಕ್ಕೆ

ದೆಹಲಿಯಲ್ಲಿ 2012 ರಲ್ಲಿ ನಿರ್ಭಯ ಪ್ರಕರಣ ದೊಡ್ಡ ಮಟ್ಟದ ಸದ್ದು ಮಾಡುತಿದ್ದಂತೆ ಪೋಕ್ಸೋ ಕಾಯ್ದೆಯನ್ನು ಕಠಿಣವಾಗಿ ಜಾರಿಗೆ ತರಲಾಯಿತು. ಆದರೇ ಎಷ್ಟೇ ಕಾನೂನು ತಂದರೂ ಅತ್ಯಾಚಾರ ಪ್ರಕರಣ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ  ಅತ್ಯಾಚಾರ ಪ್ರಕರಣ ಸಂಖ್ಯೆ ಏರಿಕೆ ಕಂಡಿದ್ದು ,17 ರಿಂದ 18 ವರ್ಷದ ಒಳಗಿನ ಬಾಲಕರು 40% ಹಾಗೂ 19 ರಿಂದ 25 ವರ್ಷದೊಳಗಿನ ಯುವಕರು 49% ಪೊಕ್ಸೋ ಕಾಯ್ದೆಯಡಿ ಜೈಲಿಗೆ ಸೇರುತಿದ್ದು , ಪೋಕ್ಸೋ ಪ್ರಕರಣ ಹೆಚ್ಚಾಗುತ್ತಿದೆ.

2023 ರಲ್ಲಿ 68 ಪ್ರಕರಣ , 2024 ರಲ್ಲಿ 81 ಪ್ರಕರಣ , 2025-26 ನೇ ಸಾಲಿನಲ್ಲಿ ನೂರು ಪ್ರಕರಣಗಳು ದಾಟಿವೆ. ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯ ದಲ್ಲಿ 150 ಕ್ಕೂ ಹೆಚ್ಚು ಪ್ರಕರಣಗಳು ನಡೆಯುತಿದ್ದು ಕಾರವಾರದ ಕಾರಾಗೃಹದಲ್ಲಿ 58 ಜನ ಪೋಕ್ಸೋ ಕಾಯ್ದೆಯಡಿ ದಂಡಿತರಾಗಿ ಜೀವಾವಧಿ ಶಿಕ್ಷೆ ಸಹ ಅನುಭವಿಸುತಿದ್ದಾರೆ.

ಅರಿವಿನ ಕೊರತೆ ತಂದ ಆಪತ್ತು.

ಬಹುತೇಕ ಅಪ್ರಾಪ್ತ ಮಕ್ಕಳಲ್ಲಿ ಅರಿವಿನ ಕೊರತೆಯಿಂದ ಕೃತ್ಯ ನಡೆಯುತ್ತಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಮಕ್ಕಳ ದೌರ್ಜನ್ಯ ಪ್ರಕರಣ ದಾಖಲಾಗುತ್ತಿದೆ. ಮೊಬೈಲ್ ಬಳಕೆ,ಪೋಷಕರ ನಿರ್ಲಕ್ಷ , ಶಿಕ್ಷಣದ ಕೊರತೆ ಅಪ್ರಾಪ್ತ ಮಕ್ಕಳಲ್ಲಿ ಪೊಕ್ಸೋ ಪ್ರಕರಣ ದಾಖಲಾಗುತ್ತಿದೆ.

ಬಸವಣ್ಣನವರ ವ್ಯಕ್ತಿತ್ವ ಹಾಳುಮಾಡಲಾಗುತ್ತಿದೆ.-ಚೌಧರಿ

Dr Nagalakshmi Chowdhary speaking
Dr Nagalakshmi Chowdhary speaking

 ಬಸವ ಮಂಟಪ ಕೃತಿ ವಿಚಾರದಲ್ಲಿ ಬಸವಣ್ಣನವರ ವ್ಯಕ್ತಿತ್ವವನ್ನು  ಹಾಳುಮಾಡಲಾಗುತ್ತಿದೆ ಎಂದು ಕಾರವಾರದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಆರೋಪ ಮಾಡಿದ್ದಾರೆ.ಮಾಧ್ಯಮದ ಜೊತೆ ಮಾತನಾಡಿದ ಅವರು ವಚನಗಳು ಸುಳ್ಳಲ್ಲ , ಬಸವಣ್ಣನವರ ವ್ಯಕ್ತಿತ್ವ ಹಾಳುಮಾಡಲು ಟ್ರೈ ಮಾಡಬಾರದು ,ಇದು ತಪ್ಪು ವಚನಗಳು ಸಮಾನತೆಯನ್ನು ಹೇಳಿಕೊಟ್ಟಿದೆ,ಬಸವಣ್ಣನವರು ಹಾಗೂ ಅವರ ವಚನ ವನ್ನು ತೆಗೆದುಕೊಂಡು ಯಾವ ಧರ್ಮವನ್ನು ಒಡೆಯಲು ಸಾಧ್ಯವಿಲ್ಲ  ಎಂದರು.ಇನ್ನು ಮುಖ್ಯಮಂತ್ರಿ  ನಿವಾಸ ಕಟ್ಟಡ ನವೀಕರಣ ವಿಚಾರ ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ  ವಿಜಯೇಂದ್ರ ರವರು ಬ್ರಷ್ಟಾಚಾರ ಆರೋಪದ ಬಗ್ಗೆ ಮಾತನಾಡಿದ ಅವರು ಯಾವುದೂ ದಾಖಲಾತಿ ಇಲ್ಲದೇ ದೂಷಿಸುವುದು ತಪ್ಪು  ಎಂದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement