Uttara Kannada | ಉತ್ತರ ಕನ್ನಡದಲ್ಲಿ ಕೃಷಿಯಿಂದ ವಿಮುಖರಾದ ರೈತರು; 8 ಸಾವಿರ ಹೆಕ್ಟೇರ್ ಭತ್ತದ ಭೂಮಿ ಪಾಳು!

Abandoned paddy agricultural fields in Uttara Kannada district Karnataka Abandoned paddy agricultural fields in Uttara Kannada district Karnataka
Abandoned paddy agricultural fields in Uttara Kannada district Karnataka

Uttara Kannada | ಉತ್ತರ ಕನ್ನಡದಲ್ಲಿ ಕೃಷಿಯಿಂದ ವಿಮುಖರಾದ ರೈತರು; 8 ಸಾವಿರ ಹೆಕ್ಟೇರ್ ಭತ್ತದ ಭೂಮಿ ಪಾಳು!

ಕಾರವಾರ: ಒಂದೆಡೆ ಮಳೆ ಕೊರತೆಯಿಂದ ಬರದ ಪರಿಸ್ಥಿತಿ, ಮತ್ತೊಂದೆಡೆ ಕೃಷಿ ಚಟುವಟಿಕೆಗಳಲ್ಲಿ ನಿರೀಕ್ಷಿತ ಲಾಭ ಸಿಗದೆ ನಷ್ಟ ಅನುಭವಿಸುತ್ತಿರುವ ರೈತರು. ಪರಿಣಾಮ ಉತ್ತರ ಕನ್ನಡ(uttarakannada) ಜಿಲ್ಲೆಯಲ್ಲಿ ಕೃಷಿಯಿಂದ ರೈತರು ನಿಧಾನವಾಗಿ ವಿಮುಖರಾಗುತ್ತಿದ್ದು, ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಪಾಳು ಬೀಳುತ್ತಿದೆ. ಕೃಷಿ ಬಿಟ್ಟು ಅನ್ಯ ಉದ್ಯೋಗದತ್ತ ಮುಖ ಮಾಡುತ್ತಿರುವ ರೈತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.Karwar | ಸಿದ್ದರಾಮಯ್ಯನವರಿಗೆ ಅವಮಾನದಿಂದ ಹಿಡಿದು ಎಥನಾಲ್ ಮಿಶ್ರಣ ವಿವಾದ ಕುರಿತು ಸಚಿವ ಲಕ್ಷ್ಮಣ ಸವದಿ ಹೇಳಿದ್ದೇನು ? 

ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಂದ ರೈತರು ದೂರವಾಗುತ್ತಿರುವ ಪ್ರವೃತ್ತಿ ಹೆಚ್ಚಾಗಿದೆ. ಅದರಲ್ಲೂ ಮಲೆನಾಡು ಹಾಗೂ ಬಯಲುಸೀಮೆ ಭಾಗಗಳಿಗೆ ಹೋಲಿಸಿದರೆ ಕರಾವಳಿ ಭಾಗದಲ್ಲಿ ಕೃಷಿ ತೊರೆಯುತ್ತಿರುವ ರೈತರ ಸಂಖ್ಯೆ ಹೆಚ್ಚಿದೆ ಎನ್ನುವುದು ಕೃಷಿ ಇಲಾಖೆ ವರದಿ.

8 ಸಾವಿರ ಹೆಕ್ಟೇರ್ ಭತ್ತದ ಭೂಮಿ ಪಾಳು.

ಕಾರವಾರದಲ್ಲಿ ಪಾಳುಬಿದ್ದ ಭತ್ತದ ಗದ್ದೆ
ಕಾರವಾರದಲ್ಲಿ ಪಾಳುಬಿದ್ದ ಭತ್ತದ ಗದ್ದೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 57 ಸಾವಿರ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಭೂಮಿಯಿದ್ದು, ಇದರಲ್ಲಿ ಸುಮಾರು 8 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಭೂಮಿ ಪಾಳು ಬಿದ್ದಿದೆ. ಈ ಪೈಕಿ ಕಾರವಾರ ತಾಲೂಕೊಂದರಲ್ಲೇ ಸುಮಾರು 3 ಸಾವಿರ ಹೆಕ್ಟೇರ್ ಭತ್ತದ ಗದ್ದೆಗಳು ಕೃಷಿ ಚಟುವಟಿಕೆ ಇಲ್ಲದೆ ಖಾಲಿ ಉಳಿದಿವೆ. ಉಳಿದ ಭೂಮಿ ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ಭಾಗಗಳಲ್ಲಿದೆ.

Advertisement

ಭತ್ತದ ಕೃಷಿಯಲ್ಲಿ ಹೆಚ್ಚುತ್ತಿರುವ ಖರ್ಚು, ಕಾರ್ಮಿಕರ ಕೊರತೆ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವುದು ಹಾಗೂ ನಿರೀಕ್ಷಿತ ಲಾಭ ದೊರೆಯದಿರುವುದು ರೈತರು ಕೃಷಿಯಿಂದ ಹಿಂದೆ ಸರಿಯಲು ಪ್ರಮುಖ ಕಾರಣಗಳಾಗಿವೆ.

ತೋಟಗಾರಿಕಾ ಬೆಳೆಗಳತ್ತ ರೈತರ ಒಲವು

ಜಿಲ್ಲೆಯಲ್ಲಿ ಸುಮಾರು 1.25 ಲಕ್ಷ ಹೆಕ್ಟೇರ್ ಸಾಗುವಳಿ ಭೂಮಿಯಿದ್ದು, ಭತ್ತ ಬೆಳೆಯುತ್ತಿದ್ದ ಅನೇಕ ರೈತರು ಇದೀಗ ತೋಟಗಾರಿಕಾ ಬೆಳೆಗಳತ್ತ ಆಸಕ್ತಿ ತೋರುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಭತ್ತದ ಗದ್ದೆಗಳನ್ನು ತೋಟಗಳನ್ನಾಗಿ ಪರಿವರ್ತಿಸುವ ಪ್ರವೃತ್ತಿ ಹೆಚ್ಚಾಗಿದೆ. ಪರಿಣಾಮ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳ ಪ್ರದೇಶ ಸುಮಾರು 65 ಸಾವಿರ ಹೆಕ್ಟೇರ್‌ಗೆ ಏರಿಕೆಯಾಗಿದೆ.Karnataka | ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಚಿಂತನೆ; ಐಟಿ ಕಂಪನಿಗಳಲ್ಲಿ ಪ್ರತ್ಯೇಕ ಧೂಮಪಾನ ವಲಯ!

ಇನ್ನು ಕಾರವಾರ ಸೇರಿದಂತೆ ಕರಾವಳಿ ಭಾಗದ ಕೆಲವು ಪ್ರದೇಶಗಳಲ್ಲಿ ಮಳೆ ಕೊರತೆ ಹಾಗೂ ಕೃಷಿಯಲ್ಲಿನ ನಷ್ಟದಿಂದ ರೈತರು ಗೋವಾ ರಾಜ್ಯಕ್ಕೆ ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದಾರೆ. ಮತ್ತೊಂದೆಡೆ, ಕೆಲವರು ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿದ್ದು, ಭತ್ತದ ಗದ್ದೆಗಳು ವಸತಿ ನಿವೇಶನಗಳಾಗಿ ಪರಿವರ್ತನೆಯಾಗುತ್ತಿವೆ.

ಕೃಷಿ ಭೂಮಿ ಉಳಿಸುವ ಸವಾಲು

ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿರುವುದು, ಕಾರ್ಮಿಕರ ಅಭಾವ ಹಾಗೂ ಇತರ ಉದ್ಯೋಗಗಳಲ್ಲಿ ದೊರೆಯುತ್ತಿರುವ ಆದಾಯದ ಕಾರಣದಿಂದ ರೈತರು ತಮ್ಮ ಸಾಂಪ್ರದಾಯಿಕ ಕೃಷಿ ವೃತ್ತಿಯಿಂದ ದೂರವಾಗುತ್ತಿದ್ದಾರೆ. ಒಂದು ಕಾಲದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಭತ್ತದ ಗದ್ದೆಗಳು ಇಂದು ಪಾಳು ಭೂಮಿಯಾಗಿ ಕಾಣಿಸಿಕೊಳ್ಳುತ್ತಿವೆ.Karwar | ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಅಪಘಾತ: ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಸಾವು

ರೈತರಿಗೆ ಕೃಷಿಯಲ್ಲಿ ಆಸಕ್ತಿ ಉಳಿಯುವಂತೆ ಸೂಕ್ತ ಬೆಂಬಲ, ಕೃಷಿ ಕಾರ್ಮಿಕರ ಸಮಸ್ಯೆಗೆ ಪರಿಹಾರ, ನೀರಾವರಿ ಸೌಲಭ್ಯ, ಬೆಳೆಗಳಿಗೆ ಉತ್ತಮ ಬೆಲೆ ಹಾಗೂ ಆರ್ಥಿಕ ನೆರವು ಒದಗಿಸುವ ಅಗತ್ಯವಿದೆ. ಸರ್ಕಾರ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕೃಷಿ ಭೂಮಿಯ ಪ್ರಮಾಣ ಮತ್ತಷ್ಟು ಕುಸಿಯುವ ಆತಂಕವಿದೆ.Kumta | ಅಕ್ರಮ ಚಟುವಟಿಕೆಗೆ ನಟ್ಟು ಬೋಲ್ಟ್ ಟೈಟ್ ಮಾಡಿದ ಪೊಲೀಸ್ ಇಲಾಖೆ – ಸಿಪಿಐ ಕುಸುಮಾಧರ್ ಕೆಲಸಕ್ಕೆ ಮೆಚ್ಚುಗೆ

ಅನ್ನದಾತನೇ ಕೃಷಿಯಿಂದ ವಿಮುಖನಾಗುತ್ತಿರುವ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಆಹಾರ ಭದ್ರತೆಗೂ ಸವಾಲು ಎದುರಾಗುವ ಸಾಧ್ಯತೆಯಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement