ಕಾರವಾರ :- ಯಲ್ಲಾಪುರದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ಮೂಲ ಬಿಜೆಪಿಗರು ತೊಡೆತಟ್ಟಿದ್ದಾರೆ. ಕಾಂಗ್ರೆಸ್ ನಲ್ಲಿ ಇದ್ದಾಗಿನಿಂದ ತನ್ನದೇ ಆದ ಪ್ರಭಾವಳಿ ಬೆಳಸಿಕೊಂಡು ಪಕ್ಷಕ್ಕಿಂತ ವ್ಯಕ್ತಿಗತವಾಗಿ ಶಿವರಾಮ್ ಹೆಬ್ಬಾರ್ ಬೆಳದುಬಂದಿದ್ದಾರೆ. ಇದೇ ಅವರಿಗೆ ಈ ಬಾರಿಯ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರೂ ಗೆಲುವು ಪಡೆಯುವಂತೆ ಮಾಡಿತ್ತು.
ತಮ್ಮ ನಿಷ್ಟಾವಂತ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿದ್ದ ಅವರು ತಮ್ಮವರಿಗೆ ಸ್ಥಾನ ಕೊಡಿಸುವಲ್ಲಿ ಯಶಸ್ಸು ತಂದುಕೊಟ್ಟಿತ್ತು.
ಇತ್ತ ಬಿಜೆಪಿಯಲ್ಲಿ ಎರಡನೇ ಹಂತದ ನಾಯಕರಾಗಿದ್ದ ಹಾಗೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿಯಲ್ಲಿದ್ದ ಬ್ರಾಹ್ಮಣ ನಾಯಕರಿಗೆ ಇದು ಸಹಿಸಲು ಸಾಧ್ಯವಾಗಲಿಲ್ಲ.

ಹೆಬ್ಬಾರ್ ರಿಂದ ಅಂತರ ಕಾಯ್ದುಕೊಂಡು ಮೂಲ ಬಿಜೆಪಿ ಎನ್ನುವ ತಂಡ ಯಲ್ಲಾಪುರ ತಾಲೂಕಿನಲ್ಲಿ ಸದ್ದಿಲ್ಲದೇ ತನ್ನ ಶಕ್ತಿ ವೃದ್ಧಿ ಮಾಡಿಕೊಳ್ಳಲು ಅವಕಾಶ ಕಾಯುತಿತ್ತು.
ಇದಕ್ಕೆ ತಕ್ಕಂತೆ ಗ್ರಾ.ಪಂ ಅಧ್ಯಕ್ಷ ಚುನಾವಣೆಯಲ್ಲಿ ಹೆಬ್ಬಾರ್ ಮನೆಯಲ್ಲಿ ಉಂಡು ತಲೆಯಾಡಿಸಿ ಹೋಗಿದ್ದ ,ಕಿರುವತ್ತಿ ಮತ್ತು ಮದನೂರು ಗ್ರಾಮ ಪಂಚಾಯ್ತಿ ಸದಸ್ಯರಲ್ಲಿ ಕೆಲವರು, ರಾತ್ರೂ ರಾತ್ರಿ ಬದಲಾವಣೆ ಬಯಸಿ ಕಲಘಟಕಿಗೆ ಪಲಾಯನ ಮಾಡಿದ್ದರು ,ಈ ವೇಳೆ ಹೆಬ್ಬಾರ್ ಬೆಂಬಲಿತ ವ್ಯಕ್ತಿಗಳು ಎಂದು ಹೇಳುವವರು ಇವರ ಬಳಿ ಬಂದು ಮಾತನಾಡಿದ್ದಾರೆ. ಅದ್ಯಾವ ಅಮಲಲ್ಲಿ ಇದ್ದರೋ ಏನೋ ಮಾತಿಗೆ ಮಾತು ಬೆಳೆದು ಪಕ್ಷದವರಲ್ಲೇ ಹೊಡೆದಾಟ ಆಗಿದೆ. ಈ ವೇಳೆ ಗಂಭೀರ ಗಾಯಗೊಂಡ ಗ್ರಾ.ಪಂ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಇನ್ನು ವಿಷಯ ಮಾಧ್ಯಮದಲ್ಲಿ ಗೊತ್ತಾಗುತಿದ್ದಂತೆ ಆಸ್ಪತ್ರೆ ಸೇರಿದ್ದ ಗ್ರಾ.ಪಂ ಸದಸ್ಯರು ಕಾಲ್ಕಿತ್ತಿದ್ದರು. ಇದರ ಲಾಭ ಪಡೆದ ಮೂಲ ಬಿಜೆಪಿ ನಾಯಕರು ಅವರನ್ನು ಮತ್ತಷ್ಟು ಎತ್ತಿಕಟ್ಟಿದ್ದಾರೆ.
ನಂತರ ಮರುದಿನ ಕಲಘಟಗಿ ಠಾಣೆಯಲ್ಲಿ ಹೆಬ್ಬಾರ್ ಆಪ್ತ ವಿಜಯ ಮಿರಾಶಿ ಹಾಗೂ ಏಳು ಜನರ ವಿರುದ್ಧ ಕಲಘಟಗಿ ಠಾಣೆಯಲ್ಲಿ ಕಲಂ -u/s-143,147,323,307,366,504,506,149 ನಡಿ ಪ್ರಕರಣ ದಾಖಲಾಗಿದೆ.
ಇನ್ನು ಈ ವಿಷಯ ಮುಗ್ಧತೆಯ ಭಾವನೆ ಹೊಂದಿರುವ ಗೌಳಿ ಸಮುದಾಯದ ಜನರಿಗೆ ಹೋರಾಟ ಮಾಡಲು ಮೂಲ ಬಿಜೆಪಿ ನಾಯಕರು ಕುಮ್ಮಕ್ಕು ನೀಡಿದ್ದಾರೆ ಎಂದು ಮಾತುಗಳು ಕೇಳಿಬರುತ್ತಿದೆ.
ಇದರ ಪ್ರತಿಫಲವಾಗಿ ಇಂದು ತಮ್ಮ ಸಮುದಾಯದವರಿಗೆ ಆದ ಅನ್ಯಾಯದ ವಿರುದ್ಧ ಗೌಳಿ ಸಮುದಾಯ ದೊಡ್ಡ ಮಟ್ಟದ ಹೋರಾಟ ಮಾಡಿದ್ದು ,ಆರೋಪಿತ ವ್ಯಕ್ತಿಯನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸದ್ಯ ಯಲ್ಲಾಪುರದಲ್ಲಿ ಮೂಲ ಬಿಜೆಪಿ ಹಾಗೂ ವಲಸೆ (ಕಾಂಗ್ರೆಸ್ )ಬಿಜೆಪಿ ಎಂಬ ಭಣಗಳು ಬೆಳೆದು ನಿಂತಿದೆ. ಮೂಲ ಬಿಜೆಪಿಯ ಕೆಲವು ನಾಯಕರು ಹೆಬ್ಬಾರ್ ರನ್ನು ಮಣಿಸಲು ಶತ ಪ್ರಯತ್ನ ಮಾಡುತ್ತಿದೆ. ಜೊತೆಗೆ ರಾಜ್ಯದ ವರಿಷ್ಠರಿಗೂ ಕಿವಿ ಕಚ್ಚಿದೆ. ಇನ್ನು ಮುಂಬರುವ ತಾ.ಪ, ಜಿ.ಪಂ ಚುನಾವಣೆಯಲ್ಲಿ ಹೆಬ್ಬಾರ್ ಗೆ ಮುಖಭಂಗ ಮಾಡಬೇಕು ಎಂಬ ಅಕಾಡ ಸಿದ್ದತೆ ನಡೆದಿದ್ದು ಇದು ಯಾವ ಮಟ್ಟ ತಲುಪುತ್ತದೆ ಎಂದು ಕಾದು ನೋಡಬೇಕಿದೆ.