Uttra Kannada news

Uttrakannada: ಇಂದು ಎಲ್ಲಿ ಏನಾಯ್ತು ಇಡೀ ದಿನದ ಸುದ್ದಿ ನೋಡಿ.

121

ಕುಮಟಾದಲ್ಲಿ RSS ಮಹಿಳಾ ಘಟಕದಿಂದ ನಾರಿ ಶಕ್ತಿ ಪ್ರದರ್ಶನ.


ಕುಮಟಾ,ಪೆಬ್ರವರಿ03:-ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ನಗರದಲ್ಲಿ RSS ಮಹಿಳಾ ಘಟಕದಿಂದ ಆದ್ಯಾತ್ಮ ಮತ್ತು ಮಹಿಳಾ ಜಾಗೃತಿಗಾಗಿ ಪತಸಂಚಲನ ನಡೆಸಲಾಯಿತು.
ಶಾಂತಿಕಾ ಪರಮೇಶ್ವರಿ ದೇವಸ್ಥಾನ ದಿಂದ ಹೊರಟ ಮೆರವಣಿಗೆ ಮಾಸ್ತಿ ಕಟ್ಟೆವರೆಗೆ ಪಥಸಂಚಲನ ಹಮ್ಮಿಕೊಂಡಿದ್ದು ನೂರಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಮಳು ಶ್ವೇತ ವಸ್ತ್ರ ಧರಿಸಿ ಪಥಸಂಚಲನದಲ್ಲಿ ಭಾಗಿಯಾಗಿದ್ದರು.

ವಿಷ ಸೇವಿಸಿ ಅವಿವಾಹಿತ ಮಹಿಳೆ ಆತ್ಮಹತ್ಯೆ

ದಾಂಡೇಲಿ:- ಗಣೇಶನಗರದ ಅವಿವಾಹಿತ ಮಹಿಳೆಯೊಬ್ಬಳು ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಗತಿ ನಾಲ್ಕು ದಿನಗಳ ನಂತರ ಬೆಳಕಿಗೆ ಬಂದಿದೆ.

ಸಂದ್ಯಾ ಮಹಾಲೆ (36) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ನಾಲ್ಕು ದಿನದ ನಂತರ ಮನೆಯ ಸುತ್ತ ದುರ್ವಾಸನೆ ಹರಡಿರುವ ಕಾರಣ ಸ್ಥಳೀಯರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ.ಘಟನೆ ಸಂಬಂಧ ದಾಂಡೇಲಿ (Dandeli)ನಗರ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.

ಕಾರವಾರ:- ನೆರೆ ಮನೆಯ ಮಹಿಳೆಗೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿ 10 ವರ್ಷಗಳಿಂದ ಕಣ್ಮರೆಯಾಗಿದ್ದ ಆರೋಪಿಗೆ ಶಿಕ್ಷೆ ವಿಧಿಸಿ ಕಾರವಾರ ನ್ಯಾಯಾಲಯ ತೀರ್ಪು ನೀಡಿದೆ.

ಆರೋಪಿ ಆಶೀಸ್ ಮಿನಿನ್ ಫರ್ನಾಂಡೀಸ್ ಮೇಲಿನ ಆರೋಪ ಸಾಬೀತಾಗಿದ್ದು, ಪ್ರಧಾನ ಸಿವಿಲ್ ಹಾಗೂ ಜೆ. ಎಂ.ಸಿ ಎರಡನೇ ನ್ಯಾಯಾಲಯದ ನ್ಯಾಯಾಧೀಶ ಧನರಾಜ್. ಎಸ್. ಎಂ ಇವರು ಅಪರಾಧಿಗೆ 3 ವರ್ಷಗಳ ಸಾದಾ ಸೆರೆವಾಸ ಹಾಗೂ ರೂ. 5000 ದಂಡ ವಿಧಿಸಿ, ಪರಿಹಾರ ರೂಪವಾಗಿ ದಂಡದ ಹಣವನ್ನು ಫಿರ್ಯಾದುದಾರರಿಗೆ ನೀಡುವಂತೆ ತೀರ್ಪು ನೀಡಿದ್ದಾರೆ.

Mundgodu-ಕಾಡಾನೆಗಳ ದಾಳಿ: ಬೆಳೆ ನಾಶ.

ಮುಂಡಗೋಡ ತಾಲೂಕಿನ ಗುಂಜಾವತಿ ಗ್ರಾಮದ ವ್ಯಾಪ್ತಿಯಲ್ಲಿ ಗದ್ದೆ ಹಾಗೂ ತೋಟಗಳ ಮೇಲೆ ಮೂರು ಕಾಡಾನೆಗಳು (elephant attack) ದಾಳಿ ನಡೆಸಿ ಕಬ್ಬು, ಅಡಕೆ, ಬಾಳೆ, ಗೋವಿನ ಜೋಳದ ಬೆಳೆ ನಾಶ ಪಡಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಗುಂಜಾವತಿ ಗ್ರಾಮದ ಮೌಲಾಲಿ ಶೇಖ ಎಂಬವರ ಹೊಲದ ಬೆಳೆಗಳನ್ನು ತಿಂದು ತುಳಿದು ನಾಶ ಪಡಿಸಿವೆ. ಈ ಕಾಡಾನೆಗಳ ಹಿಂಡಿನಲ್ಲಿ ಒಂದು ಮರಿ ಸೇರಿದಂತೆ ಮೂರು ಕಾಡಾನೆಗಳು ಇದ್ದು ಗ್ರಾಮದ ವ್ಯಾಪ್ತಿಯಲ್‌ಲಿ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಮಾಡಿದೆ.

ಸಿದ್ದಾಪುರದಲ್ಲಿ 34 ಮಂಗನ ಕಾಯಿಲೆ ಪ್ರಕರಣ: ಜನರಲ್ಲಿ ಆತಂಕ.

ಸಿದ್ದಾಪುರದಲ್ಲಿ (siddapura) ಇದುವರೆಗೂ 34 ಮಂಗನ ಕಾಯಿಲೆ ಪ್ರಕರಣ ವರದಿಯಾಗಿದೆ.ಮಂಗನ ಕಾಯಿಲೆಯ 34 ಸೋಂಕಿತರಲ್ಲಿ 12 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದವರುಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರ ಆರೋಗ್ಯ ಸ್ಥಿರವಾಗಿದ್ದು,ಸಿದ್ದಾಪುರ ತಾಲೂಕಿನಲ್ಲಿಯೇ ಹೆಚ್ಚಿನ ಪ್ರಕರಣಗಳು ವರದಿಯಾದ ಕಾರಣ ಅರಣ್ಯ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ವಾಸಿಸುವವರಿಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಆಡ್ವಾಣಿಗೆ ಭಾರತ ರತ್ನ, ರೂಪಾಲಿ ನಾಯ್ಕ ಹರ್ಷ

ಕಾರವಾರದೇಶದ ಹಿರಿಯ ರಾಜಕಾರಣಿ, ಬಿಜೆಪಿಯ ಭೀಷ್ಮ ಎಂದೇ ಗುರುತಿಸಲ್ಪಡುವ ಮಾಜಿ ಉಪ ಪ್ರಧಾನಿ ಲಾಲಕೃಷ್ಣ ಆಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ಸಂತಸ ಉಂಟುಮಾಡಿದೆ. ಈ ದೇಶಕ್ಕೆ ಅವರು ನೀಡಿದ ಕೊಡುಗೆಗೆ ಸೂಕ್ತ ಗೌರವ ನೀಡಿದಂತಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.


ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಡ್ವಾಣಿ ಅವರು ಮುನ್ನುಡಿ ಬರೆದು ದೇಶಾದ್ಯಂತ ಹೋರಾಟ ನಡೆಸಿದ್ದರು. ಅವರ ರಾಷ್ಟ್ರೀಯವಾದ ಹಾಗೂ ದೇಶಕ್ಕಾಗಿ ಅಸಾಧಾರಣ ಕೊಡುಗೆ ನೀಡಿದ್ದಾರೆ. ಅವರು ಸಲ್ಲಿಸಿದ ದೇಶಸೇವೆಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಿರುವುದು ಅತ್ಯಂತ ಪ್ರಶಸ್ತವಾಗಿದೆ. ಲಾಲಕೃಷ್ಣ ಆಡ್ವಾಣಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಹಾಗೂ ಪ್ರಶಸ್ತಿ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನೂ ಅಭಿನಂದಿಸುತ್ತೇನೆ ಎಂದು ರೂಪಾಲಿ ಎಸ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!