Fact check ಮನೆಯಲ್ಲಿ ಮಗುವನ್ನೇ ನುಂಗಿದ ಹೆಬ್ಬಾವು ವಿಡಿಯೋ ವೈರಲ್ ನಂತರ ಆಗಿತ್ತು ಶಾಕ್ !

AddText 10 05 10.50.05 1 AddText 10 05 10.50.05 1
Kannadavani WhatsApp image
ಪ್ರತಿ ದಿನದ ಸುದ್ದಿ ಓದಲು ನಮ್ಮ ವಾಟ್ಸ್ ಅಪ್ ಗ್ರೂಪ್ ಸೇರಲು ಫೋಟೋ ದ ಮೇಲೆ ಕ್ಲಿಕ್ ಮಾಡಿ

ವಿಯಟ್ನಾಮ್: ಮನೆಯಲ್ಲಿ ಸಾಕಿದ್ದ ಹೆಬ್ಬಾವು ಪುಟ್ಟ ಮಗುವನ್ನು ನುಂಗಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಹೆಬ್ಬಾವಿನ ಹೊಟ್ಟೆಯೊಳಗೆ ಮಗುವಿನ ಆಕಾರ ಕಾಣಿಸುತ್ತಿರುವಂತೆ ತೋರಿಸಲಾಗಿದ್ದು, ಇದು ವಿಯಟ್ನಾಮ್‌ನಲ್ಲಿ ನಡೆದ ಘಟನೆ ಎಂದು ಕೆಲವರು ಹಂಚಿಕೊಂಡಿದ್ದಾರೆ. ಇನ್ನು ಈ ವಿಡಿಯೋ ದೇಶ ವಿದೇಶದಲ್ಲಿ ವೈರಲ್ ಆಗಿದೆ. ಒದನ್ನೂ ಓದಿ:-Miss India ಆಗಲು ಯಾವ ಯಾವ ಪರೀಕ್ಷೆಗಳು ಇರುತ್ತವೆ? ಸಾಧ್ವಿ ಸೈಲ್ ಪಟ್ಟ ಶ್ರಮ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಆದರೆ ಈ ವಿಡಿಯೋ ವಿಯಟ್ನಾಮ್‌ನಲ್ಲಿ ನಡೆದ ನೈಜ ಘಟನೆ ಅಲ್ಲ ಎಂದು ಫ್ಯಾಕ್ಟ್-ಚೆಕ್ ವರದಿಗಳು ತಿಳಿಸಿವೆ.

ವೈರಲ್ ವಿಡಿಯೋದಲ್ಲಿರುವ ಮೂಲ ದೃಶ್ಯವನ್ನು ಪರಿಶೀಲಿಸಿದಾಗ, ಅದು ಇಂಡೋನೇಷ್ಯಾಕ್ಕೆ ಸಂಬಂಧಿಸಿದ ವಿಡಿಯೋ ಎಂದು ತಿಳಿದುಬಂದಿದೆ. ಮಗುವನ್ನು ಹೆಬ್ಬಾವು ನುಂಗಿರುವಂತೆ ಕಾಣುವ ದೃಶ್ಯವನ್ನು ನಂತರ Ai ಡಿಜಿಟಲ್ ಟೆಕ್ನಾಲಜಿ ಬಳಸಿ ಬದಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ .ಈ ಬಗ್ಗೆ Fact Crescendo ವರದಿ ಮಾಡಿದೆ.

Advertisement

ಇನ್ನು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣ ,ನ್ಯೂಸ್ ಕಂಟೆಟ್ ನಲ್ಲಿ ವೈರಲ್ ಆಗುತ್ತಿದೆ. ಟೆಕ್ನಾಲಜಿ ಬಳಸಿ ಈರೀತಿ ಜನರನ್ನ ತಪ್ಪುದಾರಿಗೆ ಎಳೆಯಲಾಗುತಿದ್ದು ಜನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡುವಾಗ ಹಾಗೂ ಇವುಗಳನ್ನ ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement