ದಾಂಡೇಲಿ|14 ಜನ ವಿದ್ಯಾರ್ಥಿನಿಯರಿಂದ ಸಾಮೂಹಿಕ ಆತ್ಮಹತ್ಯೆಗೆ ಯತ್ನ- ಕಾರಣ ಇನ್ನೂ ನಿಗೂಢ

TextMaster 09 17 02.11.17 TextMaster 09 17 02.11.17

ಕಾರವಾರ :- ಸಾಮೂಹಿಕವಾಗಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ 14 ವಿಧ್ಯಾರ್ಥಿನಿಯರು ಯತ್ನಿಸಿದ ಘಟನೆ
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ (Dandeli) ಜನತಾ ಶಾಲೆಯಲ್ಲಿ ನಡೆದಿದೆ.

9 ಮತ್ತು 10 ನೇ ತರಗತಿಯ ಒಟ್ಟು 14 ವಿಧ್ಯಾರ್ಥಿನಿಯರು(student) ಎಡಗೈನ ತೋಳಿನ ಕೆಳಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದು ಕೆಲವು ವಿದ್ಯಾರ್ಥಿನಿಯರು ಕೈ ಮೇಲೆ ಸ್ಟೆಪ್ಲರ್ ಪಿನ್ ನಿಂದ ಗೀರಿಕೊಂಡು ಕೈ ನ ನರ ಕತ್ತರಿಸಿಕೊಳ್ಳಲು ಯತ್ನ ನಡೆಸಿದ್ದಾರೆ.

ಇದನ್ನೂ ಓದಿ:-ಜಿಲ್ಲಾಧಿಕಾರಿ ಆದೇಶ ಪ್ರತಿ ನಕಲು ಮಾಡಿ ಜಮೀನು ಲಪಟಾಯಿಸಲು ಯತ್ನ-ಇಬ್ಬರ ವಿರುದ್ಧ ಪ್ರಕರಣ ದಾಖಲು

Advertisement

ಶಾಲೆಯಲ್ಲಿ ತಪಾಸಣೆ ವೇಳೆ ಘಟನೆ ಬೆಳಕಿಗೆ ಬಂದಿದ್ದು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದರೋ ಅಥವಾ ಶಾಲೆಯಲ್ಲಿ ಯತ್ನಿಸಿದರೋ ಮಾಹಿತಿ ಹೊರಬರಬೇಕುದ್ದು ,ಆತ್ಮ ಹತ್ಯೆ ಯತ್ನಕ್ಕೆ ಕಾರಣ ನಿಗೂಢವಾಗಿದೆ‌ . ಕೆಲವು ವಿದ್ಯಾರ್ಥಿನಿಯರು ಗೇಮ್ (game)ಆಟದ ಟಾಸ್ಕ ಎಂದರೇ ಕೆಲವರು ಬೇರೆಯೇ ಸಬೂಬು ಹೇಳುತಿದ್ದಾರೆ.

ಇದನ್ನೂ ಓದಿ:- ಇಂದಿನ ದಿನ ಭವಿಷ್ಯ ತಿಳಿಯಲು ಅಕ್ಷರದ ಮೇಲೆ ಕ್ಲಿಕ್ ಮಾಡಿ.

ಈ ಹಿನ್ನಲೆಯಲ್ಲಿ ಶಾಲಾ ಆಡಳಿತ ಪೊಲೀಸರೊಂದಿಗೆ (police) ಪೋಷಕರ ಸಭೆ ನಡೆಸಿ ಮಾಹಿತಿ ಕಲೆಹಾಕುವ ಪ್ರಯತ್ನ ನಡೆಸುತಿದ್ದು ತನಿಖೆ ನಡೆಯುತ್ತಿದೆ. ಘಟನೆ ಸಂಬಂಧ ದಾಂಡೇಲಿ ನಗರ ಠಾಣೆಯಲ್ಲಿ ದೂರು ನೀಡಲಾಗಿದ್ದು ಈವರೆಗೂ ಪ್ರಕರಣ ದಾಖಲಾಗಿಲ್ಲ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement