Banavasi| ಪಡಿತರ ಅಕ್ಕಿಗೆ ಕನ್ನ- ಆರೋಪಿ ಬಂಧನ

Banavasi | ಅಕ್ರಮ ಪಡಿತರ ಅಕ್ಕಿ ಸಾಗಾಟ: 17 ಕ್ವಿಂಟಲ್ ಅಕ್ಕಿ ಜಪ್ತಿ, ಆರೋಪಿ ಬಂಧನ-ವಿವರ ನೋಡಿ
ಬನವಾಸಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 17 ಕ್ವಿಂಟಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ ಬನವಾಸಿ ಪೊಲೀಸರು ಹಾಗೂ ವಶಪಡಿಸಿಕೊಂಡ ಮಹೀಂದ್ರ ಸುಪ್ರೊ ವಾಹನ. ಬನವಾಸಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 17 ಕ್ವಿಂಟಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ ಬನವಾಸಿ ಪೊಲೀಸರು ಹಾಗೂ ವಶಪಡಿಸಿಕೊಂಡ ಮಹೀಂದ್ರ ಸುಪ್ರೊ ವಾಹನ.
ಬನವಾಸಿ -ಪಡಿತರ ಅಕ್ಕಿ ವಶಕ್ಕೆ

Banavasi| ಪಡಿತರ ಅಕ್ಕಿಗೆ ಕನ್ನ- ಆರೋಪಿ ಬಂಧನ.

 

ಕಾರವಾರ/ಶಿರಸಿ: ವಾಹನವೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಜಾಲವನ್ನು ಬೇಧಿಸಿರುವ ಬನವಾಸಿ (banavasi)ಪೊಲೀಸರು, ಮಹೀಂದ್ರ ಸುಪ್ರೊ ವಾಹನವನ್ನು ಜಪ್ತಿ ಮಾಡಿ ಅಂದಾಜು 17 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆ ನಿನ್ನೆ ತಡರಾತ್ರಿ ಬನವಾಸಿಯಲ್ಲಿ ನಡೆದಿದೆ.ಇದನ್ನೂ ಓದಿ:-Banavasi| ವಿಶಪೂರಿತ ಹಾವು ಕಡಿದು ಪುಟ್ಟ ಬಾಲಕ ಸಾವು-ಸಹೋದರಿಗೆ ಚಿಕಿತ್ಸೆ

ತಡರಾತ್ರಿ ಕಾರ್ಯಾಚರಣೆ .

ಬನವಾಸಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 17 ಕ್ವಿಂಟಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ ಬನವಾಸಿ ಪೊಲೀಸರು ಹಾಗೂ ವಶಪಡಿಸಿಕೊಂಡ ಮಹೀಂದ್ರ ಸುಪ್ರೊ ವಾಹನ.
ಬನವಾಸಿ -ಪಡಿತರ ಅಕ್ಕಿ ವಶಕ್ಕೆ

ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತಪ್ಪ ಕುಂಬಾರ್ ಹಾಗೂ ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬನವಾಸಿಯ ದಾಸನಕೊಪ್ಪ ಕ್ರಾಸ್ ಬಳಿ ವಾಹನವನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ವಾಹನ ಚಾಲಕ ಸಚಿನ್ ನಾಗರಾಜ ಗೌಡ ಎಂಬಾತ ಶಿರಸಿಯ ಕೊರಲಕಟ್ಟ ಪ್ರದೇಶದಿಂದ ಈ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ವಾಹನ ಮತ್ತು ಅಕ್ಕಿಯನ್ನು ಜಪ್ತಿ ಮಾಡಿರುವ ಪೊಲೀಸರು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ:-Snake|ಮಳೆಗಾಲ ಬಂದ್ರೆ ಹಾವಿನ ಕಾಟ! ಹಾವುಗಳಿಂದ ರಕ್ಷಣೆ ಹೇಗೆ? ಏನಂತಾರೆ ತಜ್ಞರು ಇಲ್ಲಿದೆ ಮಾಹಿತಿ

Advertisement

ಅಧಿಕಾರಿಗಳ ಭೇಟಿ.

ಬನವಾಸಿಯಲ್ಲಿ ಪಡಿತರ ಅಕ್ಕಿ ಕಳ್ಳಸಾಗಣೆ ಬಯಲು! 17 ಕ್ವಿಂಟಲ್ ಅಕ್ಕಿ ಜಪ್ತಿ | Banavasi News
ವಶಪಡಿಸಿಕೊಂಡ ವಾಹನದೊಂದಿಗೆ ಅಧಿಕಾರಿಗಳು

ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಪತ್ತೆಯಾದ ಹಿನ್ನೆಲೆಯಲ್ಲಿ, ಶಿರಸಿ ಆಹಾರ ಇಲಾಖೆಯ ಶಿರಸ್ತೇದಾರ್ ಶ್ರೀಮತಿ ವೀಣಾ ಹಾಗೂ ಆರೋಗ್ಯ ನಿರೀಕ್ಷಕಿ ಕವಿತಾ ಪಾಟನ್ಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾನೂನು ಪ್ರಕಾರ ಮುಂದಿನ ಅಗತ್ಯ ಕ್ರಮಗಳನ್ನು ಜರುಗಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement