Bhatkal| ಮುಸ್ಲಿಂ ಯುವಕನಿಂದ ಹಿಂದು ಯುವತಿ ಅಪಹರಣ- ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ !

ಭಟ್ಕಳದಲ್ಲಿ ಹಿಂದೂ ಯುವತಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಶಾಹೀದ್ ಬಂಧನ. ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದ ಪ್ರಕರಣಕ್ಕೆ ಯುವತಿ ದೂರು ನೀಡಿದ ಬಳಿಕ ಹೊಸ ತಿರುವು ಸಿಕ್ಕಿದೆ.
Bhatkal police investigate alleged abduction and sexual assault case involving a Hindu girl and a Muslim youth in Uttara Kannada district. Bhatkal police investigate alleged abduction and sexual assault case involving a Hindu girl and a Muslim youth in Uttara Kannada district.
Bhatkal news

Bhatkal| ಮುಸ್ಲಿಂ ಯುವಕನಿಂದ ಹಿಂದು ಯುವತಿ ಅಪಹರಣ- ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ !

 

Bhatkal  :-ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (bhatkal) ಹಿಂದೂಪರ ಕಾರ್ಯಕರ್ತರು ಮುಸ್ಲಿಂ ಯುವಕ ಹಿಂದೂ ಯುವತಿಯನ್ನ ಕರೆದೊಯ್ಯುವ ವೇಳೆ ಕಾರನ್ನು ತಡೆದು ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದು ನಂತರ ಹಿಂದೂಪರ ಸಂಘಟನೆ ಮುಖಂಡರಮೇಲೆ ಪ್ರಕರಣ ದಾಖಲಾಗಿ ಸಂಘರ್ಷಕ್ಕೆ ಕಾರಣವಾಗಿದ್ದು ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಇದನ್ನೂ ಓದಿ:-Bhatkal- ಸಾಲ ನೀಡಿದ ಹಣ ಮರುಪಾವತಿಯಾಗದೇ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ

Advertisement

ಬಲವಂತವಾಗಿ ಹಿಂದೂ ಯುವತಿಯನ್ನ ಕಾರಿನಲ್ಲಿ ಅಪಹರಣ ಮಾಡಿ ,ಲೈಂಗಿಕ ದೌರ್ಜನ್ಯ ವೆಸಗಿರುವ ಕುರಿತು ಯುವತಿಯಿಂದ ಮುಸ್ಲಿಂ ಯುವಕನ ಮೇಲೆ ದೂರು ದಾಖಲಿಸಿದ್ದಾಳೆ.ಸಹನ ಎಂಬ ಯುವತಿಯಿಂದ ಶಾಹೀದ್ ಎಂಬ ಯುವಕನ ಮೇಲೆ ಅಪಹರಣದ ದೂರು ದಾಖಲಾಗಿದ್ದು ಶಾಹೀದ್ ನನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಬ್ಬರೂ ಭಟ್ಕಳದ (bhatkal) ಅನಪಾಲ್ ಸುಪರ್ ಮಾರ್ಕೇಟಿನಲ್ಲಿ ಸೆಲ್ಸ್ ಮನ್  ಕೆಲಸ ಮಾಡುತಿದ್ದರು.ಸಹನಾಗೆ ಪ್ರೀತಿಸುವಂತೆ  ಪೀಡಿಸಿದ್ದ ಭಟ್ಕಳದ ಕಾರಗದ್ದೆ ನಿವಾಸಿ ಶಾಹೀದ್ ನಿನ್ನೆ ದಿನ ಸೂಪರ್ ಮಾರ್ಕೇಟ್ ನಲ್ಲಿ ಕೆಲಸ ಮಾಡುತ್ತಿರುವಾಗ ಮಾತನಾಡುವುದಿದೆ ಎಂದು ಹೊರಗೆ ಕರೆದು ಬಲವಂತವಾಗಿ ಕಾರಿನಲ್ಲಿ ಅಪಹರಿಸಿ ,ಲೈಂಗಿಕ ದೌರ್ಜನ್ಯ ವೆಸಗಿದ ಕುರಿತು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.ಯುವತಿ ದೂರುಕೊಟ್ಟ ಬೆನ್ನಲ್ಲೇ ಶಾಹಿದ್ ನನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

Bhatkal news
Bhatkal news

ನಿನ್ನೆ ಯುವತಿಯನ್ನ ಕರೆದೊಯ್ಯುವ ವೇಳೆ ಹಿಂದೂಪರ ಕಾರ್ಯಕರ್ತರು ಕಾರನ್ನು ತಡೆದು ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದರು.ಆದರೇ ಗ್ರಾಮೀಣ ಠಾಣೆ ಪೊಲೀಸರು ಹಿಂದೂ ಮುಖಂಡರ ವಿರುದ್ಧವೇ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿದ್ದನ್ನ ವಿರೀಧಿಸಿ ಹಿಂದೂಪರ ಕಾರ್ಯಕರ್ತರು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರತಿಭಟನೆ ನಡೆಸಿದ್ದು ಪೊಲೀಸರ ಧೋರಣೆಯನ್ನ ಖಂಡಿಸಿದ್ದರು.ಆದರೇ ಇದೀಗ ಮುಸ್ಲಿಂ ಯುವಕನಮೇಲೆ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣವನ್ನ ಯುವತಿ ದಾಖಲಿಸಿದ್ದು ಹಿಂದೂಪರ ಸಂಘಟನೆಯವರು ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿದ್ದಾರೆ.

ಇದೀಗ ಯುವತಿ ದೂರು ನೀಡುವ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement