Joida| ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ-40 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Joida :Joida:ಜೋಯಿಡಾ ತಾಲೂಕಿನ ಚಾಪೋಲಿ ಹತ್ತಿರ ಕಾರವಾರ-ಜೋಯಿಡಾ ರಸ್ತೆಯಲ್ಲಿ ಎರಡು ಸಾರಿಗೆ ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿದ್ದು, 40 ಪ್ರಯಾಣಿಕರು ಗಾಯಗೊಂಡಿದ್ದಾರೆ.
Two transport buses involved in a head-on collision near Chapoli in Joida taluk, Uttara Kannada district, injuring several passengers Two transport buses involved in a head-on collision near Chapoli in Joida taluk, Uttara Kannada district, injuring several passengers

Joida| ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ-40 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

 

Joida :- ಸಾರಿಗೆ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿಗಳು ಸೇರಿ 40 ಜನ ಪ್ರಯಾಣಿಕರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಚಾಪೋಲಿ ಘಟ್ಟದಲ್ಲಿ ನಡೆದಿದೆ.

ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿಯ ಜೋಯಿಡಾ ತಾಲ್ಲೂಕಿನ ಚಾಪೋಲಿ ಘಟ್ಟದಲ್ಲಿ ಸಾರಿಗೆ ಸಂಸ್ಥೆ ಬಸ್ ಗಳು ವೇಗವಾಗಿ ಬಂದು ಮುಖಾಮುಖಿ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು ಸೇರಿ 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

Advertisement

Joida accident
ಅಪಘಾತ ಸ್ಥಳ. ಜೋಯಿಡಾ

 ಬೆಳಗಾವಿಯಿಂದ ಅಂಕೋಲಾಕ್ಕೆ ಸಂಚರಿಸುತ್ತಿದ್ದ ಬಸ್  ಮತ್ತು ಉಳವಿಯಿಂದ ಇಚಲಕರಂಜಿಗೆ ಸಾಗುತ್ತಿದ್ದ ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ. ಈ ಬಸ್‌ನಲ್ಲಿ  ಜೊಯಿಡಾದ ಬಿಜಿವಿಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು, ದಾಂಡೇಲಿ ಕಾಲೇಜಿನ ವಿದ್ಯಾರ್ಥಿಗಳಿದ್ದರು.

ಇದನ್ನೂ ಓದಿ:-Dandeli-joida -ಪ್ರತ್ತೇಕ ಅಪಘಾತ ಅತೀ ವೇಗ ತಂತು ಪ್ರಾಣಕ್ಕೆ ಕುತ್ತು!

ಗಾಯಾಳುಗಳನ್ನು ಜೊಯಿಡಾ(joida) ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ ಕೆಲವರನ್ನು ಕಾರವಾರದ ಕ್ರಿಮ್ಸ್, ಧಾರವಾಡದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ:-Joida| ಹುಲಿಸಮೀಕ್ಷೆಗೆ ಅಳವಡಿಸಿದ ಕ್ಯಾಮರಾ ಟ್ರಾಪ್ ಗೆ ಕಳ್ಳರ ಟಾರ್ಗೆಟ್|ಅಮೇಲೇನಾಯ್ತು ಗೊತ್ತಾ?

ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ, ಎಸ್ಐ ಜಗದೀಶ ಎನ್, ಪ್ರಾಚಾರ್ಯ ಮಂಜುನಾಥ ಶೆಟ್ಟಿ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸುತ್ತಿದ್ದಾರೆ. ಎರಡು ಬಸ್‌ಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎಂದು ಮೂಲಗಳು ತಿಳಿಸಿದ್ದು ಘಟನೆ ಸಂಬಂಧ ಜೋಯಿಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement