Joida| ಹುಲಿಸಮೀಕ್ಷೆಗೆ ಅಳವಡಿಸಿದ ಕ್ಯಾಮರಾ ಟ್ರಾಪ್ ಗೆ ಕಳ್ಳರ ಟಾರ್ಗೆಟ್|ಅಮೇಲೇನಾಯ್ತು ಗೊತ್ತಾ?

Joida:-camera trap worth ₹53,000 installed for the tiger survey has been stolen from Joida forest near Castle Rock wildlife range.
Forest department camera trap theft in Castle Rock wildlife range Forest department camera trap theft in Castle Rock wildlife range
Forest department camera trap theft in Castle Rock wildlife range

Joida| ಹುಲಿಸಮೀಕ್ಷೆಗೆ ಅಳವಡಿಸಿದ ಕ್ಯಾಮರಾ ಟ್ರಾಪ್ ಗೆ ಕಳ್ಳರ ಟಾರ್ಗೆಟ್|ಅಮೇಲೇನಾಯ್ತು ಗೊತ್ತಾ?.

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ(joida) ತಾಲ್ಲೂಕಿನ ಕ್ಯಾಸಲ್ ರಾಕ್ ನ ಕಾಳಿ ಹುಲಿ ಸಂರಕ್ಷಿತ ವಲಯದಲ್ಲಿ ಅರಣ್ಯ ಇಲಾಖೆಯು ಹುಲಿ ಸರ್ವೆಗಾಗಿ ಅಳವಡಿಸಿದ ಕ್ಯಾಮರಾ ಟ್ರ್ಯಾಪ್ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹುಲಿ ಸಮೀಕ್ಷೆ ಹಾಗೂ ಕಾಡಿನ ಪ್ರಾಣಿಗಳ ಚಲನ-ವಲನ ಅಧ್ಯಯನಕ್ಕಾಗಿ ಅಳವಡಿಸಲಾಗಿದ್ದ ಸುಮಾರು 53 ಸಾವಿರ ರೂ ಮೌಲ್ಯದ ಕ್ಯಾಮರಾ ಇದೀಗ ಕಾಣೆಯಾಗಿದ್ದು,ಹುಲಿ ಗಣತಿ ಕಾರ್ಯಕ್ಕೆ ವಿಘ್ನ ತಂದಿಟ್ಟಿದೆ.

Karwar Court news| ಚಿರಾಗ್ ಪೊಲೀಸ್ ಕಷ್ಟಡಿಗೆ |ತಾಯಿ ,ಚಿಕ್ಕಮ್ಮನಿಗೂ ತಂತು ಸಂಕಷ್ಟ.

Advertisement

ದೇಶಾದ್ಯಂತ ಜನವರಿ 13ರಿಂದ ಹುಲಿ ಸಮೀಕ್ಷೆ ಕಾರ್ಯ ಆರಂಭವಾಗಿದ್ದು, ಇದರ ಭಾಗವಾಗಿ ಜೊಯಿಡಾ ಅರಣ್ಯ ಪ್ರದೇಶದಲ್ಲೂ ಕ್ಯಾಮರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗಿತ್ತು. ಹುಲಿ ಮಾತ್ರವಲ್ಲದೆ ಕಾಡಿನಲ್ಲಿ ಸಂಚರಿಸುವ ಇತರೆ ವನ್ಯಜೀವಿಗಳ ಮಾಹಿತಿ ಸಂಗ್ರಹಿಸಲು ಈ ಕ್ಯಾಮರಾ ಪ್ರಮುಖ ಪಾತ್ರ ವಹಿಸುತ್ತಿತ್ತು.

ಕ್ಯಾಸಲ್ ರಾಕ್ ವನ್ಯಜೀವಿ ವಲಯದ ಅವೇಡಾ–ಪೊಪ್ಪವಾಡಿ ಬೀಟ್ ವ್ಯಾಪ್ತಿಯ ವಜ್ರ ಪಾಲ್ಸ್ ಕಡೆಗೆ ಹೋಗುವ ರಸ್ತೆಯ ಬಳಿ ಅರಣ್ಯಾಧಿಕಾರಿಗಳು ಕ್ಯಾಮರಾವನ್ನು ಇರಿಸಿದ್ದರು.

Joida| ಅಕ್ರಮ ಮರಳು ಸಾಗಾಟ-ಗ್ರಾಮ ಪಂಚಾಯತ್ ಅಧ್ಯಕ್ಷನ ಬಂಧನ

ಜನವರಿ 21ರ ಸಂಜೆ ಅರಣ್ಯ ಸಿಬ್ಬಂದಿ ಕ್ಯಾಮರಾ ಸ್ಥಳದಲ್ಲಿರುವುದನ್ನು ಗಮನಿಸಿದ್ದರು, ಮರುದಿನ ಬೆಳಿಗ್ಗೆ ಪರಿಶೀಲಿಸಿದಾಗ ಕ್ಯಾಮರಾ ಮತ್ತು ಅದರ ಮೆಮೋರಿ ಕಾರ್ಡ್ ಸಂಪೂರ್ಣವಾಗಿ ಕಾಣೆಯಾಗಿರುವುದು ತಿಳಿದು ಬಂದಿದೆ.

ಅರಣ್ಯದಲ್ಲಿ ತಮ್ಮ ಅಕ್ರಮ ಚಟುವಟಿಕೆಗಳು ದಾಖಲಾಗುವ ಭಯದಿಂದ ಕಿಡಿಗೇಡಿಗಳು ಈ ಕ್ಯಾಮರಾವನ್ನೇ ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ವ್ಯಾಪಕ ಹುಡುಕಾಟ ನಡೆಸಿದರೂ ಕ್ಯಾಮರಾ ಪತ್ತೆಯಾಗಿಲ್ಲ.

Joida news| ಕಾಡಿನಿಂದ ನಾಡಿಗೆ ಬಂದ ಆನೆ ಹಲವು ಕಡೆ ಬೆಳೆ ನಾಶ.

ಈ ಹಿನ್ನೆಲೆಯಲ್ಲಿ ಬಜಾರಕೋಣ ಉಪವಲಯ ಅರಣ್ಯಾಧಿಕಾರಿ ಸಂದೀಪ್ ಅರ್ಕಸಾಲಿ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement