BREAKING NEWS
Search

ಉತ್ತರ ಕನ್ನಡ ಜಿಲ್ಲೆಯ ಈ ಗ್ರಾಮಪಂಚಾಯ್ತಿಯಲ್ಲಿ ಚುನಾವಣೆ ನಡೆಯದು?ಯಾಕೆ ಗೊತ್ತಾ?

1703

ಕಾರವಾರ:- ಗ್ರಾಮಪಂಚಾಯ್ತಿ ಚುನಾವಣೆ ಘೋಷಣೆ ಮಾಡಲಾಗಿದೆ.ಆದ್ರೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಾಲ್ಕು ಗ್ರಾಮಪಂಚಾಯ್ತಿಯನ್ನು ಚುನಾವಣೆ ಪ್ರಕ್ರಿಯೆಯಿಂದ ಕೈಬಿಡಲಾಗಿದೆ.

ಹೌದು ಕರ್ನಾಟಕ ಚುನಾವಣಾ ಆಯೋಗವು ಕ್ರಮ ಸಂಖ್ಯೆ(೧)ರಲ್ಲಿ ಬದಲಾದ ಆದೇಶದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ಯ್ ಅಧಿನಿಯಮ 1993 ರ ಪ್ರಕರಣ 308 ರಲ್ಲಿ ಬಿತ್ತರವಾಗಿರು ಅಧಿಕಾರದ ಮೇರೆಗೆ ರಾಜ್ಯದ 30 ಜಿಲ್ಲೆಗಳ ಒಟ್ಟು 6004 ಗ್ರಾಮಪಂಚಾಯ್ತಿಯಲ್ಲಿ ಡಿಸೆಂಬರ್ 2020 ರ ನಂತರ ಅವಧಿ ಪೂರ್ಣಗೊಳ್ಳಲಿರುವ 162 ಗ್ರಾಮಪಂಚಾಯ್ತಿಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ 6 ಗ್ರಾಮಪಂಚಾಯ್ತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಿರುವ ಒಟ್ಟು 74 ಗ್ರಾಮಪಂಚಾಯ್ತಿಗಳು,ಒಟ್ಟಾರೆ 242 ಗ್ರಾಮಪಂಚಾಯ್ತಿ ಹೊರತುಪಡಿಸಿ ಉಳಿದ 5762 ಗ್ರಾಮಪಂಚಾಯ್ತಿಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಗ್ರಾಮಪಂಚಾಯ್ತಿ ಅಧಿನಿಯಮ, 1993 ರ ಪ್ರಕರಣ 308AA ಮತ್ತು 308 AB ಅನ್ವಯ ಹಾಗೂ ಕರ್ನಾಟಕ ಪಂಚಾಯತ್ ರಾಜ್ ನಿಯಮ ,1993 ರ ನಿಯಮ 12 ರ ಅನ್ವಯ ಚುನಾವಣೆಯನ್ನು ಘೋಷಿಸಿದೆ.

ಚುನಾವಣೆ ನಡೆಯದ ಗ್ರಾಮಪಂಚಾಯ್ತಿಗಳು.

ಹೊನ್ನಾವರ :- ಮಂಕಿ(ಗುಳದಕೇರಿ),ಮಂಕಿ-ಎ (ಹಳೆಮರ), ಮಂಕಿ-ಬಿ (ಅನಂತವಾಡಿ),ಮಂಕಿ-ಸಿ(ಚಿತ್ತಾರ) ಈ ಪಂಚಾಯ್ತಿಗಳಿಗೆ ಗ್ರಾ.ಪಂ. ಚುನಾವಣೆ ನಡೆಯದು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!