ಔಷಧವೆಂದು ಬ್ರೇಕ್ ಆಯಿಲ್ ಸೇವಿಸಿ ಇಂಜಿನಿಯರ್ ಸಾವು!

IMG 20201001 125349 scaled IMG 20201001 125349 scaled

ಕಾರವಾರ:- ಮದ್ಯದ ಅಮಲಿನಲ್ಲಿ ಔಷಧ ಎಂದು ತಿಳಿದುಕೊಂಡು ಬ್ರೇಕ್ ಆಯಿಲ್ ಸೇವಿಸಿ ವಿದ್ಯುತ್ ಇಲಾಖೆ ( ಹೆಸ್ಕಾಂ ) ಇಂಜಿನಿಯರ್ ನೊರ್ವ ಮೃತಪಟ್ಟ ಘಟನೆ ಶಿರಸಿಯ ಕೆಇಬಿ ವಸತಿ ನಿಲಯದಲ್ಲಿ ನಲ್ಲಿ ನಡೆದಿದೆ.

Point Blur Dec102020 193818

ಶಿರಸಿಯ ಕೆಇಬಿಯಲ್ಲಿ ಕಿರಿಯ ಇಂಜಿನಿಯರ್ ಆಗಿದ್ದ ಸುರೇಶ ಗುತ್ಯಪ್ಪ ಅರಳೇಶ್ವರ (೫೧) ಮೃತಪಟ್ಟವರಾಗಿದ್ದಾರೆ. ಇವರು ಪಾರ್ಶ್ವ ವಾಯು ಕಾಯಿಲೆಯಿಂದ ಚೇತರಿಸಿಕೊಂಡು ಬಿಪಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಇದಲ್ಲದೇ ಮೃತರ ಎರಡನೇ ಮಗ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ಮನಸ್ಸಿಗೆ ಹಚ್ಚಿಕೊಂಡು ವಿಪರೀತ ಕುಡಿಯುವುದನ್ನು ಆರಂಭಿಸಿದ್ದರು.‌ಇದರಿಂದ ಬುಧವಾರ ರಾತ್ರಿ ಮದ್ಯ ಕುಡಿದು ಊಟ ಮಾಡಿದ ನಂತರ ಔಷಧವೆಂದು ಬ್ರೇಕ್ ಆಯಿಲ್ ಸೇವಿಸಿ ಮೃತಪಟ್ಟಿರುವುದಾಗಿ ಪತ್ನಿ ದೂರಿನಲ್ಲಿ‌ ದಾಖಲಿಸಿದ್ದಾರೆ. ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement