ಶಿವಮೊಗ್ಗ |BJPಯ ಉಪಮುಖ್ಯಮಂತ್ರಿಯನ್ನೇ ಸೋಲಿಸಿದ್ದ ಕಾಂಗ್ರೆಸ್ ಮಾಜಿ ಶಾಸಕ ಇನ್ನಿಲ್ಲ .
Shivamogga :-ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಾಂಗ್ರೆಸ್ ನ ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ (78) ನಿಧನರಾಗಿದ್ದಾರೆ.
ಕಳೆದ ಎರಡು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಚಂದ್ರಶೇಖರಪ್ಪ (H.M.Chandrashekarappa) ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಮಾಜಿ ಶಾಸಕ ಪಾರ್ಥಿವ ಶರೀರ ಸದ್ಯ ಆಸ್ಪತ್ರೆಯಲ್ಲಿದ್ದು, ರಾತ್ರಿ ವೇಳೆಗೆ ಶಿವಮೊಗ್ಗಕ್ಕೆ ಕುಟುಂಬಸ್ಥರು ತರಲಿದ್ದಾರೆ. ನಾಳೆ ಸಂಜೆ ವೇಳೆಗೆ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ.
ಮಾಜಿ ಉಪಮುಖ್ಯಮಂತ್ರಿಯನ್ನೇ ಸೋಲಿಸಿದ್ದ ಧುರೀಣ.
ಹೆಚ್.ಎಂ.ಚಂದ್ರಶೇಖರಪ್ಪನವರ ತಂದೆ ಮಲ್ಲಿಕಾರ್ಜುನಪ್ಪ ನವರು ಶಿವಮೊಗ್ಗದಲ್ಲಿ ಶಾಸಕರಾಗಿದ್ದರು. ಇವರು ಶಿವಮೊಗ್ಗದ ನಗರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು.
1982 ರಿಂದ 84 ರ ವರೆಗೆ ಶಿವಮೊಗ್ಗ ನಗರಸಭೆ ಅಧ್ಯಕ್ಷರಾಗಿ ನಂತರ ಹತ್ತು ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. 1994 ರಿಂದ 2004 ರ ವರೆಗೆ ಶಾಸಕರಾಗಿದ್ದ ಅವರು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರನ್ನ ಸೋಲಿಸಿದ್ದರು. ಇದಾದ ನಂತರ ಮಾಜಿ ಶಾಸಕರ ವೇದಿಕೆಯ ರಾಜ್ಯಾಧ್ಯಕ್ಷರಾಗಿದ್ದ ಇವರು ಲಿಂಗಾಯಿತ ಸಮಾಜವನ್ನು ಒಗ್ಗೂಡಿಸುವ ಕೆಲಸದಲ್ಲಿ ನಿರತರಾಗಿದ್ದು ವೀರಶೈವ ಲಿಂಗಾಯಿತ ಸಮಾಜದ ರಾಜ್ಯ ಉಪಾಧ್ಯಕ್ಷರಾಗಿ ಸಹ ಕೆಲಸ ಮಾಡಿದ್ದರು.
ಇದನ್ನೂ ಓದಿ:-Shivamogga|25 ಲಕ್ಷ ರೂ. ಲೋನ್ ಗಾಗಿ 3 ಲಕ್ಷ ರೂ. ಕಳೆದುಕೊಂಡ ಪೊಲೀಸ್ ಅಧಿಕಾರಿ!
ಇವರಿಗೆ ಇಬ್ಬರು ಪುತ್ರರಿದ್ದು ಹಿರಿಯ ಪುತ್ರ ಹೆಚ್.ಸಿ ಯೋಗಿಶ್ ಕಳೆದಬಾರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು.
ಹೆಚ್.ಎಂ.ಚಂದ್ರಶೇಖರಪ್ಪನವರ ಪಾರ್ಥಿವ ಶರೀರ ಸೋಮವಾರ ಶಿವಮೊಗ್ಗದ ಬಸವನಗುಡಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ತೆ ಮಾಡಿದ್ದು ,ಸಂಜೆ 4 ಗಂಟೆಗೆ ಗಾಜನೂರು -ಹೊಸಹಳ್ಳಿ ಬಳಿಯ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
