ಕಾರವಾರ:- ಭ್ರಷ್ಟಾಚಾರ ಎನ್ನುವುದು ಗಾಳಿಯಂತೆ ಎಲ್ಲೆಡೆ ಆವರಿಸಿದೆ.ಹೀಗಾಗಿ ಇದನ್ನು ತಡೆಯುವುದು ಅಷ್ಟು ಸುಲಭವಲ್ಲ. ಹೌದು ಹೀಗಾಗಿ ಕಾರವಾರದಲ್ಲಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ರವರ ನೇತ್ರತ್ವದಲ್ಲಿ ಭ್ರಷ್ಟಾಚಾರ ವಿರೋಧಿ ದಿನವಾದ ಇಂದು ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸರ್ಕಾರಿ ಕಚೇರಿಗೆ ಹಾಗೂ ವಿವಿಧ ಸ್ಥಳಗಳಿಗೆ ತೆರಳಿ ಅಧಿಕಾರಿಗಳಿಗೆ ,ಸಾರ್ವಜನಿಕರಿಗೆ ಗುಲಾಬಿ ನೀಡಿ ಬ್ರಷ್ಟಾಚಾರದಿಂದ ಮುಕ್ತರಾಗಿರುವಂತೆ ಜಾಗೃತಿ ಮೂಡಿಸಲಾಯಿತು.


ನಂತರ ನಗರದ ಸುಭಾಷ್ ಸರ್ಕಲ್ ಬಳಿ ಸೇರಿದ ಸಂಘಟನೆಯ ಸದಸ್ಯರು ಸುಭಾಷ್ ಸರ್ಕಲ್ ಬಳಿ ಇರುವ ಸುಭಾಷ್ ಚಂದ್ರಬೋಸ್ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಜನರಿಗೆ ಸಿಹಿ ಹಂಚುವ ಮೂಲಕ ಬ್ರಷ್ಟಾಚಾರ ಮಾಡುವವರಿಗೆ ಲಂಚದ ಹಣ ನೀಡದಂತೆ ಮನವಿ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಿದರು.