ಕಾಳಿ ಹುಲಿರಕ್ಷಿತ ಅರಣ್ಯದಲ್ಲಿ ,Youtuber ಕಾನೂನು ಉಲ್ಲಂಘನೆ| ಪ್ರಕರಣ ದಾಖಲು
Uttara Kannada 06 January 2026 :- ಕರ್ನಾಟಕದ ಖ್ಯಾತ ಕಂಟೆಂಟ್ ಕ್ರಿಯೇಟರ್ ಹಾಗೂ ಮಲೆನಾಡು (ಚಿಕ್ಕಮಗಳೂರು) ಮೂಲದ ಸುಮಂತ್ ಗೌಡ ( SG_ Malenadu/ SG_Yaaana ) ವನ್ಯಜೀವಿ ಕಾಯ್ದೆ 1972 ನಿಯಮಗಳ ಉಲ್ಲಂಘನೆ ಮಾಡಿ ಕಾಳಿ ಹುಲಿ ಸಂರಕ್ಷಿತ ವಲಯದೊಳಗೆ ಪ್ರವೇಶ ಮಾಡಿರುವ ಆರೋಪ ಎದಿರಾಗಿದೆ.
Joida | ಅಡಿಕೆ ತೋಟದಲ್ಲಿ ಆನೆ ದಾಂಧಲೆ ರೈತರಲ್ಲಿ ಆತಂಕ
ಈ ಕುರಿತು ಅರಣ್ಯ ಸಚಿವರ ಕಾರ್ಯಾಲಯಕ್ಕೂ ಮಾಹಿತಿ ತಲುಪಿದೆ. ಡಿಸೆಂಬರ್ ತಿಂಗಳಲ್ಲಿ ಸುಮಂತ್ ಗೌಡ ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಕುಂಬಾರವಾಡ ವಲಯದಲ್ಲಿನ ಪಾತಗುಡಿ ಎಂಬ ಸ್ಥಳಕ್ಕೆ ಭೇಟಿ ನೀಡಿದ್ದರು.

ಹೊರಗಿನವರಿಗೆ ನಿಷೇಧವಿರುವ ಈ ಪ್ರದೇಶಕ್ಕೆ ಅನುಮತಿ ಇಲ್ಲದ ಪ್ರವೇಶ ಹಾಗೂ ವಿಡಿಯೋ ಚಿತ್ರೀಕರಣಕ್ಕೆ ( ಕಮರ್ಷಿಯಲ್ ) ನಿಷೇಧವಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದಗುಡಿ ಚಿತ್ರದಲ್ಲಿ ಬಳಕೆಯಾದ ಬೈಕ್ ಏರಿ ಚಿತ್ರೀಕರಣ ನಡೆದ ಸ್ಥಳಗಳನ್ನು ತೋರಿಸಿದ್ದರು. ಈ ವಿಡಿಯೋ ಮಿಲಿಯನ್ ಗಟ್ಟಲೇ ಜನರನ್ನು ತಲುಪಿದ್ದಷ್ಟೇ ಅಲ್ಲದೇ ವೈರಲ್ ಆಗಿದ್ದವು. ಈಗ ಈ ವಿಡಿಯೋಗಳೇ ಅವರಿಗೆ ಉರುಳಾಗಿವೆ.
Joida| ಕಾಡುಕೋಣ ನೋಡಿ ಓಟ ಕಿತ್ತ ಹುಲಿ,ಹುಲಿಮರಿ |ವಿಡಿಯೋ ನೋಡಿ
ಮೂಲ ಕಾಡು ನಿವಾಸಿಗಳಿಗೆ ದಿನನಿತ್ಯ ಕಿರುಕುಳ ನೀಡುವ ಅರಣ್ಯ ಇಲಾಖೆ ಯೂಟ್ಯೂಬರ್ ಗಳಿಗೆ ಕೆಂಪುಹಾಸು ಹಾಸಿದೆ ಎಂದು ಆರೋಪಿಸಲಾಗಿತ್ತು. ಕಾಳಿ ಹುಲಿ ಯೋಜನೆಯ ಕುಂಬಾರವಾಡ ವಲಯದ ಪಾತಗುಡಿ ದುರ್ಗಮ ಅರಣ್ಯ ಪ್ರದೇಶ. ಇಲ್ಲಿ ಯೂಟ್ಯೂಬರ್ ಬೈಕ್ ನಲ್ಲಿ ಪ್ರವೇಶಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಡ್ರೋಣ್ ಕ್ಯಾಮೆರಾ ಬಳಸಲಾಗಿದೆ. ರಾತ್ರಿ ಬೆಂಕಿ ಹಾಕಿಕೊಂಡು ಟೆಂಟ್ ಲ್ಲಿ ಉಳಿಯಲಾಗಿದೆ. ಪುನೀತ ರಾಜ್ ಕುಮಾರ್ ಬಳಸಿದ ಬೈಕ್ ಲ್ಲಿ ಓಡಾಟ ನಡೆಸಿದ್ದಾರೆ.

ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ಮಾಡುವಾಗ ಆದ ಅಚಾತುರ್ಯಗಳಿಂದಲೇ ಬುದ್ಧಿ ಕಲಿಯದ ಇಲಾಖೆ. ಯೂಟ್ಯೂಬರ್ ಗೆ ಅನುಮತಿ ನೀಡಿದವರಾರು ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದರು.
ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಕಾರಣ ಕೇಳಿ ಇಮೇಲ್ ಮೂಲಕ ನೋಟಿಸ್ ನೀಡಿತ್ತು.
ಆದರೇ ಅವರು ನೀಡಿದ ಉತ್ತರ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಖುದ್ದು ಹಾಜರಾಗುವಂತೆ ಅರಣ್ಯ ಇಲಾಖೆ ಸೂಚಿಸಿದೆ.
Joida|ದೂದ್ ಸಾಗರ್ ಬಳಿ ಹಳಿ ತಪ್ಪಿದ ರೈಲು |ಮಾರ್ಗ ಬದಲು
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಮತ್ತು ಜೆ.ಎಂ.ಎಫ್.ಸಿ ದಾಂಡೇಲಿ, ಇವರಿಗೆ ವಲಯ ಅರಣ್ಯಾಧಿಕಾರಿ ಗಿರೀಶ್ ಚೌಗಲೆ ಸಲ್ಲಿಸಿದ ವರದಿ ಹೀಗಿದೆ:-
ಕುಂಬಾರವಾಡಾ ವನ್ಯಜೀವಿ ವಲಯದ WLOR ಸಂಖ್ಯೆ: 03/2025-26 ದಿನಾಂಕ: 02/12/2025.
ಸುಮಂತ ಗೌಡ ಎಂಬುವರು ಅನುಮತಿ ಇಲ್ಲದೇ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವೇಶ ಮಾಡಿ ವಿಡಿಯೋ ಚಿತ್ರಿಕರಿಸಿ ತನ್ನ sg_malenadu ಮತ್ತು sg_yaana ಎಂಬ Instagram ನಲ್ಲಿ ಹಾಕಿಕೊಂಡಿದ್ದು, ವನ್ಯಜೀವಿ ಸಂರಕ್ಷಣಾ ಕಾಯಿದೆ ತಿದ್ದುಪಡಿ 2022 ರ ರೀತ್ಯ ಉಲ್ಲಂಘನೆಯಾಗಿದೆ.
ಸದರಿ ವಿಡಿಯೋವನ್ನು ಪರಿಶೀಲಿಸಿದಾಗ ಸದರಿ ಅರಣ್ಯ ಪ್ರದೇಶವು ಕಾಳಿ ಹುಲಿ ಸಂರಕ್ಷಿತ ಪ್ರದೇಶ ಕುಂಬಾರವಾಡಾ ವನ್ಯಜೀವಿ ವಲಯ ಎಂಬುದು ತಿಳಿದುಬಂದಿದೆ. ಸದರಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ತಮ್ಮ ಸ್ವಂತ ಊರುಗಳಿಗೆ ಸ್ಥಳೀಯವಾಗಿ ಓಡಾಡಲು ಮಾತ್ರ ಅವಕಾಶ ಇರುತ್ತದೆ. ಆದರೆ ಸದರಿಯವರು ದಿನಾಂಕ: 05/11/2025 ರಂದು ಅನುಮತಿ ಪಡೆಯದೇ ಅನಧಿಕೃತವಾಗಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪ್ರವೇಶಿಸಿ ವಿಡಿಯೋ sg_malenadu 2 sg_yaana 20 Instagram ಹರಿಬಿಟ್ಟಿರುವ ಬಗ್ಗೆ, ದಿನಾಂಕ: 21/11/2025 ರಂದು ಸುಮಂತ ಗೌಡ ಇವರಿಗೆ ಕುಂಬಾರವಾಡಾ ವನ್ಯಜೀವಿ ವಲಯದಿಂದ ನೋಟಿಸ್ ನೀಡಿ ಏಳು ದಿನಗಳ ಒಳಗೆ ಕುಂಬಾರವಾಡಾ ವಲಯ ಕಚೇರಿಗೆ ಬಂದು ಭೇಟಿ ನೀಡಿ ಸಮಜಾಯಿಸಿ ನೀಡಲು ಸೂಚಿಸಲಾಗಿದೆ.
ಆದರೆ, ಇ-ಮೇಲ್ (Email ) ಮುಖಾಂತರ ಹೇಳಿಕೆ ಸಲ್ಲಿಸಿದ್ದು, ಸದರಿಯವರು ಹೇಳಿಕೆಯು ಸಮಂಜಸವಾಗಿಲ್ಲ ಹಾಗೂ ಖುದ್ದಾಗಿ ವಿಚಾರಣೆ ಬರಲು ಸೂಚಿಸಲಾಗಿದೆ.
Haliyala :ಸಾಲ ತೀರಿಸಿದರೂ ಕಾಲಿ ಚಕ್ ತೋರಿಸಿ ಮಂಚಕ್ಕೆ ಕರೆದ ಮೀಟರ್ ದಂಧೆಕೋರರ ಬಂಧನ.
ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ 2022 ರ ರೀತ್ಯ ವನ್ಯಜೀವಿ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ 2022 ರ ಸೆಕ್ಷನ್ 2(15, 17, 26), 27, 28, 51 ರಲ್ಲಿ ಕಾನೂನು ಉಲ್ಲಂಘನೆಯಾಗಿರುತ್ತದೆ. ಮುಂದುವರಿದು ಮೇಲಾಧಿಕಾರಿಗಳ ನಿರ್ದೆಶನದ ಮೇರೆಗೆ ಹಾಗೂ ಹೆಚ್ಚಿನ ತನಿಖೆಗಾಗಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ಅಂತಿಮ ವರದಿ ಸಲ್ಲಿಸಲು ಕಾಲಾವಕಾಶ ಬೇಕಾಗಿರುತ್ತದೆ ಎಂದು ಅರಣ್ಯಾಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
Haliyala|ರಾಜ್ಯದಲ್ಲಿಬಾಂಗ್ಲಾದೇಶದವರನ್ನು ಇರಿಸೋದು ಶುದ್ಧ ತಪ್ಪು-ಹೊರಟ್ಟಿ.
ಒಟ್ಟಿನಲ್ಲಿ ಪ್ರಚಾರದ ಹುಚ್ಚಿಗೆ ,ವೀವ್ಸ್ ವೀಕ್ಷಣೆ ಹಿಂದೆ ಬೀಳುವ ಯೂಟ್ಯೂಬರ್ ಗಳು ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಕಾಬಿಟ್ಟಿಯಾಗಿ ದ್ರೋಣ್ ಹಾರಿಸಿ ವಿಡಿಯೋ ಮಾಡುತಿದ್ದು ಇದೀಗ ಇದೆಕ್ಕೆಲ್ಲಾ ಕಡಿವಾಣ ಬೀಳುವಂತಾಗಿದೆ.
ವರದಿ:- ಸಾಗರ್.
