ಕಾರವಾರ/ದಾಂಡೇಲಿ:- ಕನ್ನಡ ಪರ ದ್ವನಿಎತ್ತಿ ಹೋರಾಟ ಮಾಡುತ್ತಿರುವ ಕರವೇ ಸಂಘಟನೆಯು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ತನ್ನ ನೂತನ ಘಟಕವನ್ನು ಇಂದು ಉದ್ಘಾಟಿಸಿತು.
ಉತ್ತರ ಕನ್ನಡ ಜಿಲ್ಲೆಯ ಅಧ್ಯಕ್ಷ ಭಾಸ್ಕರ್ ಪಟಗಾರ್ ರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಸಾಹಿತಿಗಳು. ಕರವೇ ಹಿತೈಷಿಗಳು. ದಾಂಡೇಲಿ ತಾಲೂಕಿನ ಪ್ರಮುಖರು ಉಪಸ್ಥಿತರಿದ್ದರು.
ನೌಕಾನೆಲೆಯಲ್ಲಿ ಕನ್ನಡ ಕಾರ್ಮಿಕರಮೇಲೆ ಹಲ್ಲೆ-ಕರವೇ ಎದುರು ಕ್ಷಮೆ ಕೇಳಿದ ಅಧಿಕಾರಿ

ಕಾರವಾರ ಸೀಬರ್ಡ್ ನೌಕಾನೆಲೆ ಯಲ್ಲಿ. ಎನ್. ಸಿ. ಸಿ. ಕಟ್ಟಡ ನಿರ್ಮಿಸಲು ಗುತ್ತಿಗೆ ಪಡೆದ ಕಂಪನಿಯ ಹೊರರಾಜ್ಯದ ಕಾರ್ಮಿಕರು ತಪಾಸಣೆ ನಡೆಸುವುವಾಗ ಸ್ಥಳೀಯ ಕಾರ್ಮಿಕರ ಮೇಲೆ ಇಂದು ದೌರ್ಜನ್ಯ ಮಾಡಿರುವುದನ್ನು ಕರವೇ ಸಂಘಟನೆ ನೌಕಾನೆಯು ಘಟನಾ ಸ್ಥಳಕ್ಕೆ ತೆರಳಿ ಖಂಡಿಸಿತು.
ಸ್ಥಳೀಯ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ ಹೊರ ರಾಜ್ಯದ ಕಾರ್ಮಿಕರನ್ನು ಕೂಡಲೇ ವಜಾಗೊಳಿಸಿ. ಮುಂದೆ ಅಂತರಾಜ್ಯ ಕಾರ್ಮಿಕರಿಂದ ದೌರ್ಜನ್ಯವಾದರೆ ಕರ್ನಾಟಕ ರಕ್ಷಣಾ ವೇದಿಕೆ ಸೂಕ್ತ ಉತ್ತರ ನೀಡಬೇಕಾಗಿತ್ತು ಎಂಬ ಎಚ್ಚರಿಕೆಯನ್ನು ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ್ ರವರು ಅಧಿಕಾರಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ್ ಎದುರಿನಲ್ಲಿ ಎನ್. ಸಿ. ಸಿ. ಅಧಿಕಾರಿಗಳು ಕ್ಷಮೆಯಾಚಿಸಿದರು.