ಇಂದು ಅಮದಳ್ಳಿಯಲ್ಲಿ ಮುಂಬರುವ ಗ್ರಾಮ ಪಂಚಾಯತ ಚುನಾವಣಾ ಪೂರ್ವತಯಾರಿ ಸಭೆಯನ್ನು ಮಾಜಿ ಶಾಸಕರಾದ ಸತೀಶ ಕೆ ಸೈಲ್ ಇವರ ಮುಂದಾಳತ್ವದಲ್ಲಿ ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಮೀರ ನಾಯ್ಕ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಚರ್ಚಿಸಲಾಯಿತು.
ಪ್ರಸ್ತುತ ನಮಗೆ ಅಧಿಕಾರ ಇಲ್ಲದಿರಬಹುದು ಆದರೆ ಜನರಿಗೆ ಕಾಂಗ್ರೆಸ್ ಸರ್ಕಾರದ ಅನೇಕ ಉತ್ತಮ ಯೋಜನೆಗಳ ಮಾಹಿತಿ ಜನರಿಗಿದೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜನರು ಕಾಂಗ್ರೆಸ್ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ.
ಎಲ್ಲರೂ ಸ್ಥಳೀಯವಾಗಿರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ದುಡಿಯಿರಿ ನಿಮ್ಮ ಪಕ್ಷ ನಿಷ್ಟೆ ನಿಮಗೆ ಉನ್ನತ ಸ್ನಾನಮಾನಗಳು ಲಭಿಸಲಿವೆ ಅಧಿಕಾರ ಮುಖ್ಯ ಅಲ್ಲಾ ಜನಸೇವೆ ಪ್ರಮುಖ ಎಂಬ ಘೋಷವಾಕ್ಯದೊಂದಿಗೆ ಚುನಾವಣೆ ಸ್ಪರ್ಧಿಸಿ ಎಂದು ಕಿವಿಮಾತು ಹೇಳಿದರು.
ಡಿ ಕೆ ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಕೇಡರ ಬೇಸ್ ಪಕ್ಷವಾಗಿ ರೂಪುಗೊಳ್ಳುತ್ತಿದ್ದು ತಳಮಟ್ಟದಲ್ಲಿ ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿಯುವ ಕಾರ್ಯಯರ್ತರಿಗೆ ಪಕ್ಷವು ಮುಂದೆ ಉತ್ತಮ ಅವಕಾಶಗಳನ್ನು ಒದಗಿಸಲಿದೆ ಎಂದು ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಾದ ಸಮೀರ ನಾಯ್ಕ ತಿಳಿಸಿದರು.
ವೇದಿಕೆಯಲ್ಲಿದ್ದ ತಾ ಪಂ ಮಾಜಿ ಸದಸ್ಯರಾದ ಉಮಾಕಾಂತ ಹರಿಕಂತ್ರ, ರವೀಂದ್ರ ಅಮದಳ್ಳಿ, ಸಂಜಯ ಸಾಳುಂಕೆ ಸಾಂಧರ್ಭಿಕವಾಗಿ ಮಾತನಾಡಿದರು, ಪುರುಷೋತ್ತಮ ಗೌಡ ಸ್ವಾಗತಿಸಿದರೆ ಯುವ ಕಾಂಗ್ರೆಸ್ ಆದ್ಯಕ್ಷರಾದ ನಾಗರಾಜ ಗೌಡ ಬಿಣಗಾ ಎಲ್ಲರನ್ನೂ ಅಭಿನಂದಿಸಿದರು. ಅಮದಳ್ಳಿ ಮಾಜಿ ಗ್ರಾ.ಪಂ ಸದಸ್ಯರಾಗಿದ್ದ ರೇಣುಕಾ ಗುನಗಾ, ಸಾವಿತ್ರಿ ಗೌಡ, ಜೀವನಾ ಅಮದಳ್ಳಿ ಮುಂತಾದ ಮುಖಂಡರು ಉಪಸ್ತಿತರಿದ್ದರು.