ಕಾರವಾರ:-ತಾಲೂಕಿನ ಕದ್ರಾದ ಗೋಯಲ್ ಅರಣ್ಯ ಪ್ರದೇಶದಲ್ಲಿ ಕಟ್ಟಿಗೆ ತರಲು ಹೋಗಿದ್ದ
ರಸಿಕ ದೇಸಾಯಿ ಎಂಬ ಮಹಿಳೆಗೆ ಗುಂಡು ಹಾರಿಸಿದ ಪ್ರಕರಣವನ್ನು ಕದ್ರ ಠಾಣೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಎರಡು ದಿನದ ಹಿಂದೆ ನಡೆದಿದ್ದ ಈ ಘಟನೆಯಲ್ಲಿ ತನಿಖೆವೇಳೆ ಪತ್ನಿಯ ಶೀಲ ಶಂಕಿಸಿದ್ದ ಆಕೆಯ ಗಂಡ ರಮೇಶ್ ದೇಸಾಯಿ ಆರೋಪಿಯಾಗಿದ್ದು ಆತನನ್ನು ಬಂಧಿಸಿ ಆತನಿಂದ ನಾಡ ಬಂದೂಕು ಹಾಗು ಜೀವಂತ ಬುಲೇಟ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.